ಐಪಿಎಲ್​ನಲ್ಲಿ ವೇಪಿಂಗ್​ ಇದೇ ಮೊದಲಲ್ಲ! ಪರಾಗ್​ ವಿಡಿಯೋ ವೈರಲ್; ಇ-ಸಿಗರೇಟ್​ ಸೇದಿದ್ದ ಆರ್​ಸಿಬಿ ಆಟಗಾರರು ಯಾರು ಗೊತ್ತೆ? Riyan Parag

ಡ್ರೆಸಿಂಗ್​ ರೂಮ್​ನಲ್ಲಿ ನಿಷೇದಿತ ಇ-ಸಿಗರೇಟ್​ ಸೇದಿದ ರಿಯಾನ್​ ಪರಾಗ್​
ಡ್ರೆಸಿಂಗ್​ ರೂಮ್​ನಲ್ಲಿ ನಿಷೇದಿತ ಇ-ಸಿಗರೇಟ್​ ಸೇದಿದ ರಿಯಾನ್​ ಪರಾಗ್​
Published on

ಪ್ರಮುಖ ಮುಖ್ಯಾಂಶಗಳು

  • ಡ್ರೆಸಿಂಗ್​ ರೂಮ್​ನಲ್ಲಿ ನಿಷೇದಿತ ಇ-ಸಿಗರೇಟ್​ ಸೇದಿದ ರಿಯಾನ್​ ಪರಾಗ್​
  • ಐಪಿಎಲ್​ನಲ್ಲಿ ವೇಪಿಂಗ್​ ಇದೇ ಮೊದಲಲ್ಲ
  • 2020 ರಲ್ಲಿ ಇ-ಸಿಗರೇಟ್​ ಸೇದಿದ್ದ ಆರನ್​ ಫಿಂಚ್​
  • ಎಬಿಡಿ ಮೇಲೆ ಇದೆ ವೇಪಿಂಗ್​ ಆರೋಪ!
ಐಪಿಎಲ್​: ಭಾರತದಲ್ಲಿ ಐಪಿಎಲ್​ ಎಂದರೆ ಅದು ಕ್ರಿಕೆಟ್​ನ ಹಬ್ಬವಿದ್ದಂತೆ ಇಲ್ಲಿ, ಕೇವಲ ಸಿಕ್ಸ್​, ಫೋರ್​ ಮತ್ತು ವಿಕೆಟ್​ಗಳ ಸದ್ದು ಸ್ವಲ್ಪ ಜಾಸ್ತಿಯೇ ಇರುತ್ತದೆ. ಆದರೆ ಮೊನ್ನೆಯಿಂದ ಮೈದಾನದಿಂದ ಬರೀ 'ಹೊಗೆ' ಬಗ್ಗೆಯೇ ಹೆಚ್ಚಿನ ಸುದ್ದಿ ಬರುತ್ತಿದೆ.

ಇ-ಸಿಗರೇಟ್​ ಸೇದಿದ ಪರಾಗ್​!

ಮೊನ್ನೆ (ಏ.28) ಪಂಜಾಬ್​ನ ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್​ ಕಿಂಗ್ಸ್​ ವರ್ಸ್​ರ್ಸ್​ ರಾಜಸ್ಥಾನ್​ ರಾಯಲ್ಸ್​ ತಂಡದ ನಡುವಿನ ಪಂದ್ಯದಲ್ಲಿ ರಾಜಸ್ಥಾನ್​ ತಂಡದ ನಾಯಕ ರಿಯಾನ್​ ಪರಾಗ್​ (Riyan Parag) ಡ್ರೆಸಿಂಗ್​ ರೂಮ್​ನಲ್ಲಿ ನಿಷೇದಿತ ಇ-ಸಿಗರೇಟ್​ (ವೇಪ್​) ನ್ನು ಸೇದುತ್ತಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ಬಿಸಿಸಿಐ ಹೇಳಿದ್ದೇನು?
ಈ ವಿಡಿಯೋ ಎಲ್ಲಡೆ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತ ಬಿಸಿಸಿಐ, ನಮ್ಮ ಗಮನಕ್ಕೆ ಈ ವಿಚಾರ ಬಂದಿದ್ದು, ನಾವು ರಿಯಾನ್​ ಪರಾಗ್​ಗೆ ಇದರ ಕುರಿತು ಮಾಹಿತಿ ನೀಡುವಂತೆ ಹೇಳಿದ್ದೆವೆ. ಅವರು ಮಾಡಿದ್ದೇನಾದರೂ ನಿಯಮಬಾಹಿರವಾಗಿದ್ದರೆ, ಖಂಡಿತವಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಐಪಿಎಲ್​ನಲ್ಲಿ ವೇಪಿಂಗ್​ ಇದೇ ಮೊದಲಲ್ಲ!

ಭಾರತ ಸರ್ಕಾರವು 2019 ರಲ್ಲಿ ಇ- ಸಿಗರೇಟಿನ ಸೇವನೆಯನ್ನು ನಿಷೇಧಿಸಿದೆ. ಐಪಿಎಲ್​ನಲ್ಲಿ ಆಟಗಾರರು ಈ ವೇಪಿಂಗ್​ನಲ್ಲಿ ತೊಡಗಿರುವುದು ಇದೇ ಮೊದಲಲ್ಲ.
2020 ರಲ್ಲಿ ಕೋವಿಡ್​ನಿಂದ ಯುಎಇನಲ್ಲಿ ನಡೆದಿದ್ದ ಐಪಿಎಲ್​ ಪಂದ್ಯಾವಳಿ ಸಂದರ್ಭದಲ್ಲಿ ಆರ್​ಸಿಬಿ ಆಟಗಾರ ಆರನ್ ಫಿಂಚ್, ರಾಜಸ್ಥಾನ್​ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಇ-ಸಿಗರೇಟ್​ನ್ನು ಸೇದುತ್ತಿರುವ ವಿಡಿಯೋ ಎಲ್ಲಡೆ ಹರಿದಾಡಿತ್ತು. ಅದೇ ರೀತಿ, ಆರ್​ಸಿಬಿಯ ಪರ ಆಟವಾಡುತ್ತಿದ್ದ, ಎ.ಬಿ. ಡಿವಿಲಿಯರ್ಸ್​ ಇತ್ತೀಚೆಗೆ ಎಸ್​ಎ 20 (SA 20) ಟೂರ್ನಿಯಲ್ಲಿ ವೇಪಿಂಗ್​ ಮಾಡುತ್ತಿದ್ದ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿತ್ತು.
ಆದರೆ ಇವರಿಬ್ಬರೂ, ಭಾರತದ ಆಚೆ ಇ-ಸಿಗರೇಟ್​ನ್ನು ಸೇದಿರುವ ಕಾರಣ ಯಾವುದೇ ಕಾನೂನಾತ್ಮಕ ತೊಡಕು ಎದುರಾಗಿರಲಿಲ್ಲ. ಆದರೆ ರಿಯಾನ್​ ಪರಾಗ್​ ಭಾರತದಲ್ಲಿ ಸೇದಿರುವ ಕಾರಣ, ಟೂರ್ನಿಯಿಂದಲೇ ಬ್ಯಾನ್​ ಆಗುತ್ತಾರೋ? ಅಥವಾ ದಂಡ ಕಟ್ಟಿಸಿಕೊಂಡು ಸುಮ್ಮನಾಗುತ್ತಾರೋ? ಎನ್ನುವುದನ್ನು ಕಾದು ನೋಡಬೇಕು.

ಕಾನೂನು ಏನು ಹೇಳುತ್ತದೆ?

ಭಾರತ ಸರ್ಕಾರವು 2019ರಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ (PECA - Prohibition of Electronic Cigarettes Act) ಅಡಿಯಲ್ಲಿ ಇ-ಸಿಗರೇಟ್ ಮತ್ತು ವೇಪ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಈ ಕಾಯ್ದೆಯ ಪ್ರಕಾರ, ಇ-ಸಿಗರೇಟ್ ಮತ್ತು ವೇಪ್‌ಗಳ ಉತ್ಪಾದನೆ ಮತ್ತು ತಯಾರಿಕೆ, ಆಮದು ಮತ್ತು ರಫ್ತು, ಸಂಗ್ರಹಣೆ ಮತ್ತು ಮಾರಾಟ ಅಂತೆಯೇ ಯಾವುದೇ ರೀತಿಯ ಜಾಹೀರಾತನ್ನು ಮಾಡುವಂತಿಲ್ಲ ಎಂಬ ನಿಯಮವಿದೆ.
ಮೊದಲ ಬಾರಿಗೆ ಈ ನಿಯಮಗಳನ್ನು ಮೀರಿದರೆ 1 ವರ್ಷದವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷ ರೂಪಾಯಿವರೆಗೆ ದಂಡ, ಎರಡಕ್ಕಿಂತ ಹೆಚ್ಚು ಬಾರಿ ಉಲ್ಲಂಘಿಸಿದರೆ 3 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಹಾಗೆಯೇ ಇ-ಸಿಗರೇಟ್ ಮತ್ತು ವೇಪ್‌ಗಳ ಸಂಗ್ರಹಣೆಯನ್ನು ಮಾಡಿದಲ್ಲಿ, 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 50,000 ರೂಪಾಯಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net