ಪ್ರಿಯಾಂಶ್ ಹೊಟ್ಟೆಗೆ ಪಂಚ್​ ಕೊಟ್ಟ ಪ್ರೀತಿ ಜಿಂಟಾ: ಪಂಜಾಬ್ ಭರ್ಜರಿ ಗೆಲುವಿನ ಬೆನ್ನಲ್ಲೇ ವೈರಲ್​ ಆಯ್ತು ಮಾಲಕಿಯ ಕ್ಯೂಟ್​ ವಿಡಿಯೋ! Preity Zinta

ಪ್ರಿಯಾಂಶ್​ ಆರ್ಯಾ ಹೊಟ್ಟೆಗೆ ಪಂಚ್​ ಕೊಟ್ಟ ಪ್ರೀತಿ ಜಿಂಟಾ
ಪ್ರಿಯಾಂಶ್​ ಆರ್ಯಾ ಹೊಟ್ಟೆಗೆ ಪಂಚ್​ ಕೊಟ್ಟ ಪ್ರೀತಿ ಜಿಂಟಾ
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿ ವಿರುದ್ಧ ಗೆದ್ದು ಬೀಗಿದ ಪಂಜಾಬ್​ ಕಿಂಗ್ಸ್
  • ಪ್ರಿಯಾಂಶ್​ ಆರ್ಯಾ ಹೊಟ್ಟೆಗೆ ಪಂಚ್​ ಕೊಟ್ಟ ಪ್ರೀತಿ ಜಿಂಟಾ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
ದೆಹಲಿ: ನಿನ್ನೆ (ಏ.25) ದೆಹಲಿಯ ಅರುಣ್​ ಜೇಟ್ಲಿ ಸ್ಟೇಡಿಯಂ ಅತ್ಯಂತ ರೋಚಕ ಹಾಗೂ ಅಮೋಘ ಪಂದ್ಯವೊಂದಕ್ಕೆ ನಿನ್ನೆ ಸಾಕ್ಷಿಯಾಯಿತು. ದೆಹಲಿ ಕ್ಯಾಪಿಟಲ್ಸ್​ ತಂಡ ನೀಡಿದ್ದ 264 ಬೃಹತ್​ ಮೊತ್ತವನ್ನು ಪಂಜಾಬ್​ ಕಿಂಗ್ಸ್​ ತಂಡ ಕೇವಲ 18.5 ಓವರ್​ಗಳಲ್ಲಿ ಗುರಿಯನ್ನು ತಲುಪುವ ಮೂಲಕ ಭರ್ಜರಿ ಜಯವನ್ನು ಗಳಿಸಿತು.

ಪ್ರಿಯಾಂಶ್​ ಹೊಟ್ಟೆಗೆ ಪಂಚ್​ ಕೊಟ್ಟ ಜಿಂಟಾ!

ಪಂದ್ಯ ಮುಗಿದ ನಂತರ, ಮೈದಾನಕ್ಕೆ ಬಂದ ಪಂಜಾಬ್​ ಕಿಂಗ್ಸ್​ ಮಾಲಕಿ, ಬಾಲಿವುಡ್ ನಟಿ ಪ್ರೀತಿ ಜಿಂಟಾ (Preity Zinta) ತಂಡದ ಆಟಗಾರರಿಗೆ ಶುಭಾಯಶವನ್ನು ಕೋರಿದ್ದಾರೆ. ಹಾಗೆಯೇ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದ ಓಪನಿಂಗ್​ ಬ್ಯಾಟರ್​ ಪ್ರಿಯಾಂಶ್​ ಆರ್ಯಾ ಜೊತೆಗೆ ಮಾತನಾಡುತ್ತಾ ಪ್ರೀತಿ, ಪ್ರಿಯಾಂಶ್​ನ ಹೊಟ್ಟೆಗೆ ತಮಾಷೆಯಾಗಿ ಒಂದು ಪಂಚ್​ ಕೊಟ್ಟಿದ್ದಾರೆ. ಇದನ್ನು ಗಮನಿಸಿದ ಕಮೆಂಟೆಟರ್​ ರವಿ ಶಾಸ್ತ್ರೀ, ಇದೊಂದು ಅದ್ಭುತವಾದ ಪಂಚ್​ (Oh, that was a good punch) ಎಂದಿದ್ದಾರೆ.
ದಾಖಲೆ ಬರೆದ ರಾಹುಲ್​!
ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ದೆಹಲಿ ತಂಡದ ಪರ, ಕೆ.ಎಲ್​. ರಾಹುಲ್ ಕೇವಲ 67 ಎಸೆತಗಳಿಗೆ ಅಜೇಯ 152 ರನ್​ ಗಳಿಸುವ ಮೂಲಕ ಈ ಅತಿ ಹೆಚ್ಚು ರನ್​ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರೊಟ್ಟಿಗೆ ನಿತೀಶ್​ ರಾಣಾ 91 ರನ್​ ಗಳಿಸಿ ಉಳಿದ ಆಟಗಾರರ ಸಹಕಾರದಿಂದ ದೆಹಲಿ ತಂಡ ನಿಗಧಿತ ಓವರ್​ಗಳಲ್ಲಿ 264 ರನ್​ಗಳ ಬೃಹತ್​ ಮೊತ್ತವನ್ನು ಕಲೆಹಾಕಿತು.

ಸಂಘಟಿತ ಹೋರಾಟದಿಂದ ಗೆದ್ದ ಪಂಜಾಬ್​!

265 ರನ್​ಗಳ ಬೃಹತ್​ ಮೊತ್ತದ ಚೇಸಿಂಗ್​ ಆರಂಭಿಸಿದ ಪಂಜಾಬ್​ ಬ್ಯಾಟರ್​ಗಳು ಸಂಘಟಿತ ಹೋರಾಟ ತೋರಿದರು. ಓಪನರ್​ಗಳಾದ ಪ್ರಿಯಾಂಶ್​ ಆರ್ಯಾ 17 ಎಸೆತಗಳಲ್ಲಿ 43 ರನ್​ ಗಳಿಸಿದರೆ ಪ್ರತ್​ಸಿಮ್ರನ್​ ಸಿಂಗ್​ 26 ಬಾಲಗಳಿಗೆ 76 ರನ್​ ಚಚ್ಚಿದರು. ನಂತರ ನಾಯಕ ಶ್ರೇಯಸ್​ ಅಯ್ಯರ್​ 36 ಎಸೆಗಳಲ್ಲಿ ಅಜೇಯ 71 ಗಳಿಸಿದರೆ ನೆಹಾಲ್​ ವಡೇರಾ 15 ಬಾಲಗಲ್ಲಿ 25 ರನ್​ಗಳಿಸಿ ತಂಡದ ಗೆಲುವಿಗೆ ಕಾರಣರಾದರು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net