ಐಪಿಎಲ್​ 2026: ಈ ಸಲ ಪ್ಲೇ-ಆಫ್ಸ್ ಅಲ್ಲ, ಟ್ರೋಫಿಯೇ ಬೇಕು; ನಾಯಕ ರಿಷಬ್​ ಪಂತ್​ಗೆ ಮಾಲೀಕ ರಾಜೀವ್​ ಗೋಯಂಕಾ ಖಡಕ್​ ವಾರ್ನಿಂಗ್​! IPL 2026

ಎಲ್​ಎಸ್​ಜಿ ನಾಯಕ ರಿಷಬ್​ ಪಂತ್​ಗೆ ತಂಡದ ಮಾಲೀಕನಿಂದ ಖಡಕ್​ ವಾರ್ನಿಂಗ್​
ಎಲ್​ಎಸ್​ಜಿ ನಾಯಕ ರಿಷಬ್​ ಪಂತ್​ಗೆ ತಂಡದ ಮಾಲೀಕನಿಂದ ಖಡಕ್​ ವಾರ್ನಿಂಗ್​
Published on

ಪ್ರಮುಖ ಮುಖ್ಯಾಂಶಗಳು

  • ಮಾರ್ಚ್​ 28 ರಿಂದ ಆರಂಭವಾಗಲಿರುವ ಐಪಿಎಲ್​ ಟೂರ್ನಿ
  • ಈ ಸಲ ಕೇವಲ ಪ್ಲೇ-ಆಫ್ಸ್ ಸಾಲಲ್ಲ; ಟ್ರೋಫಿಯೇ ಬೇಕೆಂದ ಲಖನೌ ಮಾಲೀಕ ರಾಜೀವ್​ ಗೋಯಂಕಾ
  • ಎಲ್​ಎಸ್​ಜಿ ನಾಯಕ ರಿಷಬ್​ ಪಂತ್​ಗೆ ತಂಡದ ಮಾಲೀಕನಿಂದ ಖಡಕ್​ ವಾರ್ನಿಂಗ್​
ಲಖನೌ: ಇನ್ನೆರಡು ದಿನಗಳಲ್ಲಿ (ಮಾರ್ಚ್​ 28) ಭಾರತದ ಕ್ರಿಕೆಟ್​ ಹಬ್ಬವಾದ ಐಪಿಎಲ್ (IPL 2026)​ ಆರಂಭವಾಗಲಿದ್ದು, ಕ್ರಿಕೆಟ್​ ಅಭಿಮಾನಿಗಳು ಇದನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಟೂರ್ನಿಯ ಪ್ರಾರಂಭಿಕ ಪಂದ್ಯವು ರಾಯಲ್ ಚಾಂಲೆಂಜರ್ಸ್​ ಬೆಂಗಳೂರು ಮತ್ತು ಸನ್​ ರೈಸರ್ಸ ಹೈದರಾಬಾದ್​ ನಡುವೆ ಜರುಗಲಿದೆ.
ಈ ಟೂರ್ನಾಮೆಂಟ್​ನಲ್ಲಿ ಹತ್ತು ತಂಡಗಳು ಒಂದು ಟ್ರೋಫಿ ಪಡೆಯಲು ಸೆಣೆಸಾಡಲಿದ್ದು, ಮಾರ್ಚ್​ 28 ರಂದು ಆರಂಭವಾಗಲಿರುವ ಈ ಹಣಾಹಣಿ ಮೇ 31 ರಂದು ಕೊನೆಗೊಳ್ಳಲಿದೆ.

ಈ ಸಲ ನನಗೆ ಟ್ರೋಫಿ ಬೇಕು!

2008 ರಿಂದ ಆರಂಭವಾಗಿರುವ ಈ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಐದು ಬಾರಿ ಟ್ರೋಫಿಗಳನ್ನು ಪಡೆದಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮೂರು ಸಲ ಐಪಿಎಲ್​ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಹಾಗೆಯೇ, ರಾಜಸ್ಥಾನ್ ರಾಯಲ್ಸ್, ಡೆಕ್ಕನ್ ಚಾರ್ಜರ್ಸ್, ಸನ್ ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್ ಹಾಗೂ ರಾಯಲ್​ ಚಾಂಲೆಜರ್ಸ ಬೆಂಗಳೂರು ತಂಡ ತಲಾ ಒಂದು ಬಾರಿ ಈ ಟೂರ್ನಿಯಲ್ಲಿ ಚಾಂಪಿಯನ್​ಗಳಾಗಿ ಹೊರಹೊಮ್ಮಿದ್ದಾರೆ.
ಈ ಹಿನ್ನಲೆಯಲ್ಲಿ ಲಖನೌ ಸೂಪರ್​ ಜೈಂಟ್ಸ್​ ತಂಡದ ಮಾಲೀಕ ಸಂಜೀವ್​ ಗೋಯಂಕಾ, ತಂಡದ ನಾಯಕ ರಿಷಬ್​ ಪಂತ್​ಗೆ ಈ ಬಾರಿ ನಮ್ಮ ತಂಡ ಕೇವಲ ಪ್ಲೇ-ಆಫ್ಸ್​ ತಲುಪಿದರೆ ಸಾಲದು ನನ್ನ ಕೈಗೆ ಐಪಿಎಲ್​ ಟ್ರೋಫಿ ಬಂದು ಸೇರಬೇಕೆಂದು ತಾಕೀತು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಟೂರ್ನಿ ಮೊದಲು ಶ್ರೀ ರಾಮನ ದರ್ಶನ ಮಾಡಿದ ತಂಡ

ಐಪಿಎಲ್​ ಪ್ರಾರಂಭಕ್ಕೂ ಮುನ್ನ ಲಖನೌ ತಂಡದ ಮಾಲೀಕ ಸಂಜೀವ್​ ಗೋಯಂಕಾ ಸಹಿತ ತಂಡದ ಆಟಗಾರರು ಅಯೋಧ್ಯೆಯ ರಾಮ ಜನ್ಮಭೂಮಿಯ ದರ್ಶನ ಪಡೆದುಕೊಂಡು ಬಂದಿದ್ದು, ಈ ಬಾರಿಯ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿಯನ್ನು ಹೊಂದಿರುವುದಾಗಿ ತಂಡದ ಮ್ಯಾನೇಜ್​ಮೆಂಟ್​ ತಿಳಿಸಿತ್ತು.
ಡೆಲ್ಲಿ ವಿರುದ್ಧ ಮೊದಲ ಪಂದ್ಯ
ಮಾರ್ಚ್​ 28 ರಿಂದ ಐಪಿಎಲ್​ ಟೂರ್ನಿ ಆರಂಭವಾಗಲಿದ್ದು, ಬುಧವಾರ (ಏಪ್ರಿಲ್​ 1) ದಂದು ಲಖನೌ ಸೂಪರ್​ ಜೈಂಟ್ಸ್ ತಂಡ ತನ್ನ ಮೊದಲ ಪಂದ್ಯವನ್ನು ಅಟಲ್​ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ವಿರುದ್ಧ ಆಡಲಿದೆ.
2025 ರ ಐಪಿಎಲ್​ನಲ್ಲಿ ಲಖನೌ ತಂಡ ಆಡಿದ 14 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಗೆದ್ದು 8 ಪಂದ್ಯಗಳಲ್ಲಿ ಸೋಲುವ ಮೂಲಕ 12 ಪಾಯಿಂಟ್​ಗಳನ್ನು ಪಡೆದು, ಪಾಯಿಂಟ್ಸ್ ಪಟ್ಟಿಯಲ್ಲಿ 7 ಸ್ಥಾನ ಪಡೆದುಕೊಂಡಿತ್ತು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net