ಐಪಿಎಲ್​ ಕಪ್​ ಗೆಲ್ಲಲ್ಲು ರಾಮನ ಮೊರೆಹೋದ ಎಲ್​ಎಸ್​ಜಿ ಪಾಳಯ: ಟ್ವಿಟರ್‌ನಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ ಪಂತ್​-ಗೋಯಂಕಾ! LSG Team Visit Ayodhya

ಟೂರ್ನಿಗು ಮುನ್ನ ಅಯೋಧ್ಯೆಯ ರಾಮನ ದರ್ಶನ ಪಡೆದ ಎಲ್​ಎಸ್​ಜಿ ತಂಡ
ಟೂರ್ನಿಗು ಮುನ್ನ ಅಯೋಧ್ಯೆಯ ರಾಮನ ದರ್ಶನ ಪಡೆದ ಎಲ್​ಎಸ್​ಜಿ ತಂಡ
Published on

ಪ್ರಮುಖ ಮುಖ್ಯಾಂಶಗಳು

  • ಮಾರ್ಚ್​ 28 ರಿಂದ ಆರಂಬವಾಗಲಿರುವ ಐಪಿಎಲ್​
  • ಟೂರ್ನಿಗು ಮುನ್ನ ಅಯೋಧ್ಯೆಯ ರಾಮನ ದರ್ಶನ ಪಡೆದ ಎಲ್​ಎಸ್​ಜಿ ತಂಡ
  • ಸಾಮಾಜಿಕ ಜಾಲತಾಣದಲ್ಲಿ ಜೈ ಶ್ರೀ ರಾಮ್​ ಎಂದು ಟ್ವಿಟ್ ಮಾಡಿದ ತಂಡ​
ಉತ್ತರ ಪ್ರದೇಶ: ಇನ್ನೇನು ಕೆಲವೇ ದಿನಗಳಲ್ಲಿ ಭಾರತದ ಕ್ರಿಕೆಟ್​ ಹಬ್ಬವಾದ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಆರಂಭವಾಗಲಿದೆ. ಮಾರ್ಚ್​ 28 ರಂದು ಶುರುವಾಗಲಿರುವ ಈ ರಸ ದೌತಣವನ್ನು ಸವಿಯಲು ಕ್ರೀಡಾಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಭಾರತೀಯ ಪರಂಪರೆಯಲ್ಲಿ ಯಾವುದೇ ಒಂದು ಒಳ್ಳೆಯ ಕಾರ್ಯ ಮಾಡುವ ಮೊದಲು ದೇವಸ್ಥಾನಗಳಿಗೆ ಹೋಗುವುದು ಸಾಮಾನ್ಯವಾಗಿದೆ. ಅಂತೆಯೇ ಇಂದು (ಮಾರ್ಚ್​ 21) ರಂದು ಲಖನೌ ಸೂಪರ್​ ಜೈಂಟ್ಸ್ ತಂಡದ ಮಾಲೀಕ ಡಾ. ಸಂಜೀವ್​ ಗೋಯಂಕಾ ಹಾಗೂ ತಂಡದ ನಾಯಕ ರಿಷಭ್​ ಪಂತ ಸೇರಿಂದಂತೆ ಇತರೆ ಆಟಗಾರರು ಅಯೋಧ್ಯೆ (LSG Team Visit Ayodhya) ಯ ಶ್ರೀರಾಮನ ಜನ್ಮ ಭೂಮಿಯ ದರ್ಶನ ಪಡೆದಿದ್ದಾರೆ.

ಜೈ ಶ್ರೀ ರಾಮ್​ ಎಂದು ಟ್ವಿಟ್​!

ಈ ಕುರಿತು ಟ್ವಿಟರ್​ನಲ್ಲಿ ಲಖನೌ ಸೂಪರ್​ ಜೈಂಟ್ಸ್ ನ ಅಧಿಕೃತ ಖಾತೆಯಿಂದ ಫೋಸ್ಟ್​ವೊಂದನ್ನು ಹಂಚಿಕೊಳ್ಳಲಾಗಿದ್ದು, ತಂಡದ ಮಾಲೀಕರಾದ ಡಾ. ಸಂಜೀವ್​ ಗೋಯಂಕಾ, ನಾಯಕ ರಿಷಭ್​ ಪಂತ್​ ಹಾಗೂ ತಂಡದ ಇತರೆ ಆಟಗಾರರೊಂದಿಗೆ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯ ದರ್ಶನ ಪಡೆದಿದ್ದಾರೆ. ಜೈ ಶ್ರೀ ರಾಮ್​ ಎಂದು ಫೋಸ್ಟ್​ನಲ್ಲಿ ಬರೆಯಲಾಗಿದೆ.
ಡೆಲ್ಲಿ ವಿರುದ್ಧ ಮೊದಲ ಪಂದ್ಯ
ಮಾರ್ಚ್​ 28 ರಿಂದ ಐಪಿಎಲ್​ ಟೂರ್ನಿ ಆರಂಭವಾಗಲಿದ್ದು, ಬುಧವಾರ (ಏಪ್ರಿಲ್​ 1) ದಂದು ಲಖನೌ ಸೂಪರ್​ ಜೈಂಟ್ಸ್ ತಂಡ ತನ್ನ ಮೊದಲ ಪಂದ್ಯವನ್ನು ಅಟಲ್​ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ವಿರುದ್ಧ ಆಡಲಿದೆ. 2025 ರ ಐಪಿಎಲ್​ನಲ್ಲಿ ಲಖನೌ ತಂಡ ಆಡಿದ 14 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಗೆದ್ದು 8 ಪಂದ್ಯಗಳಲ್ಲಿ ಸೋಲುವ ಮೂಲಕ 12 ಪಾಯಿಂಟ್​ಗಳನ್ನು ಪಡೆದು, ಪಾಯಿಂಟ್ಸ್ ಪಟ್ಟಿಯಲ್ಲಿ 7 ಸ್ಥಾನ ಪಡೆದುಕೊಂಡಿತ್ತು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net