ಎರಡು ಕೈಗಳಿಲ್ಲದಿದ್ದರೂ ಕರಾರುವಕ್ ಬೌಲಿಂಗ್: ಕಾಶ್ಮೀರದ ಈ 'ಅಮೀರ್' ನ ಆಟಕ್ಕೆ ಕ್ರಿಕೆಟ್ ದೇವರೇ ಫಿದಾ! Amir Hussain

ಎರಡೂ ಕೈಗಳಿಲ್ಲದಿದ್ದರೂ ಬೌಲಿಂಗ್​ ಮಾಡುವ ಅಮೀರ್ ಹುಸೇನ್​
ಎರಡೂ ಕೈಗಳಿಲ್ಲದಿದ್ದರೂ ಬೌಲಿಂಗ್​ ಮಾಡುವ ಅಮೀರ್ ಹುಸೇನ್​
Published on

ಪ್ರಮುಖ ಮುಖ್ಯಾಂಶಗಳು

  • ಎರಡೂ ಕೈಗಳಿಲ್ಲದಿದ್ದರೂ ಬೌಲಿಂಗ್​ ಮಾಡುವ ಅಮೀರ್ ಹುಸೇನ್​
  • ಕಾಶ್ಮೀರದ ಈ ಹುಡುಗನ ಬೌಲಿಂಗ್​ಗೆ ಮನಸೋತ ಸಚಿನ್​ ತೆಂಡೂಲ್ಕರ್​
  • ಗೌತಮ್​ ಅದಾನಿಯಿಂದ 67 ಲಕ್ಷ ಧನ ಸಹಾಯ
ಜಮ್ಮು-ಕಾಶ್ಮೀರ: ಕ್ರಿಕೆಟ್​ನಲ್ಲಿ ಕೈಕಾಲುಗಳು ಸರಿಯಿದ್ದರೂ ಸರಿಯಾಗಿ ಆಟವಾಡಲು ಕಷ್ಟಪಡುವ ಆಟಗಾರರನ್ನು ನಾವು ನೋಡಿದ್ದೆವೆ. ಈ ಕ್ರೀಡೆಯಲ್ಲಿ ಮಾನಸಿಕವಾಗಿ ಎಷ್ಟೇ ಸಹಿಷ್ಣುತೆ ಹೊಂದಿದ್ದರೂ ಸಹ ದೈಹಿಕ ಸಾಮರ್ಥ್ಯ ಬಹಳ ಮುಖ್ಯವಾಗಿರುತ್ತದೆ.
ಆದರೆ, ಎರಡು ಕೈಗಳನ್ನು ಹೊಂದಿಲ್ಲದಿದ್ದರೂ ಸಹ ತನ್ನ ಕಾಲಿನ ಮೂಲಕವೇ ಖರಾರುವಕ್ಕಾಗಿ ಬೌಲಿಂಗ್​ ಮಾಡುತ್ತಿರುವ ವ್ಯಕ್ತಿಯೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಹಾಗೆಯೇ ಇತನ ವಿಡಿಯೋ ನೋಡಿರುವ ಕ್ರಿಕೆಟ್ ದೇವರು ಸಚಿನ್​ ತೆಂಡೂಲ್ಕರ್​ ಅವರೇ ಇವನನ್ನು ಬಾಯ್ತುಂಬ ಹೊಗಳಿದ್ದಾರೆ.

ಯಾರು ಈ ಅಮೀರ್​ ಹುಸೇನ್​?

ವೈರಲ್​ ಆಗುತ್ತಿರುವ ವಿಡಿಯೋನಲ್ಲಿರುವ ಆಟಗಾರನ ಹೆಸರು ಅಮೀರ್​ ಹುಸೇನ್ (Amir Hussain)​, ಇವನು ಜಮ್ಮು-ಕಾಶ್ಮೀರ ಪಾರಾ ಕ್ರಿಕೆಟ್​ ತಂಡದ ನಾಯಕನಾಗಿದ್ದಾನೆ. ಇವನು ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದು, ಕಾಲಿನ ಸಹಾಯದಿಂದ ಇವನು ಮಾಡುವ ಕರಾರುವಕ್ಕ್ ಬೌಲಿಂಗ್​​ಗೆ ನೆಟ್ಟಿಗರು ಆಶ್ಚರ್ಯ ಚಕಿತರಾಗಿದ್ದಾರೆ.
ಇವನ ಈ ವಿಶಿಷ್ಟ ಕೌಶಲ್ಯವನ್ನು ಗಮನಿಸಿದ ಉದ್ಯಮಿ ಗೌತಮ್​ ಅದಾನಿ ಇತನಿಗೆ ಸುಮಾರು 67 ಲಕ್ಷ ರೂಪಾಯಿ ಧನ ಸಹಾಯ ಮಾಡಿದ್ದು, ಇದನ್ನು ಬಳಸಿಕೊಂಡಿ ಅಮೀರ್​ ತನ್ನದೆ ಆದ ಒಂದು ಕ್ರಿಕೆಟ್​ ತರಬೇತಿ ಕೇಂದ್ರವನ್ನು ತೆರೆಯುವ ಯೋಜನೆ ರೂಪಿಸಿದ್ದಾನೆ.

ಅಮೀರ್​ ತನ್ನ ಕೈಗಳನ್ನು ಹೇಗೆ ಕಳೆದುಕೊಂಡ?

ಅದು 1997 ನೇ ಇಸವಿ, ಒಂದು ದಿನ ಅಮೀರ್​ ತನ್ನ ಸಹೋದರ ಕೆಲಸ ಮಾಡುವ ಕಾರ್ಖಾನೆಗೆ ತೆರಳಿ ಊಟ ನೀಡಲು ಹೋಗಿದ್ದ. ಆ ಸಂದರ್ಭದಲ್ಲಿ ಅಲ್ಲಿದ್ದ ಗರಗಸದಿಂದ ಉಂಟಾದ ಅಪಘಾತದಲ್ಲಿ ಅಮೀರ್​ ತನ್ನೆರಡು ಕೈಗಳನ್ನು ಕಳದುಕೊಂಡ.
ಈ ಘಟನೆ ಬಳಿಕ ಊರ ಜನರು ಇವನನ್ನು ಬಿಟ್ಟುಬಿಡಿ, ಇವನ ಮೇಲೆ ಏಕೆ ಹಣವನ್ನು ಖರ್ಚು ಮಾಡುತ್ತಿರಿ ಎಂದು ನೆರೆ ಹೊರೆಯವರು ನನ್ನ ತಂದೆ ಬಳಿ ಹೇಳುತ್ತಿದ್ದರು ಎಂದು ಅಮೀರ್​ ನೆನಪಿಸಿಕೊಳ್ಳುತ್ತಾರೆ. ಹಾಗೆಯೇ, ಒಮ್ಮೆ ಒಬ್ಬ ಶಿಕ್ಷಕರು ಅಂಗವಿಕಲ ಮಕ್ಕಳು ಶಾಲೆಗೆ ಬರಬಾರದು ಎಂದು ಅಮೀರ್​ಗೆ ಹೇಳಿದ್ದರಂತೆ.

ಕ್ರಿಕೆಟ್​ ದೇವರನ್ನು ಬೇಟಿ ಮಾಡಿದ ಅಮೀರ್​!

2024 ರಂದು ಕ್ರಿಕೆಟ್ ದೇವರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನನ್ನನ್ನು ಅವರು ಮಾತನಾಡಿಸಿದರು ಎಂದು ಅಮೀರ್​ ಹೇಳಿದ್ದಾರೆ. ನೀನು ಕ್ರಿಕೆಟ್​ ಆಡಲೆಂದೇ ಹುಟ್ಟಿದ್ದಿಯಾ, ಯಾವತ್ತು ಈ ಕ್ರೀಡೆಯನ್ನು ನೀನು ಬಿಡಬೇಡ ಎಂದು ಸಚಿನ್​ ತೆಂಡೂಲ್ಕರ್​ ಹೇಳಿದ್ದರು ಎಂದು ಅಮೀರ್​ ತಿಳಿಸಿದ್ದಾರೆ, (ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net