ಭಾರತ ಮೂಲದ ಯುವತಿ ಈ ಘಟನೆ ವಿಡಿಯೋ ಮಾಡುತ್ತಿದ್ದಂತೆ ಸೋಷಿಯಲ್ ಮೀಡಿಯಾನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಆದರೆ, ಅಮೆರಿಕದ ಆರ್ಲಿಂಗ್ಟನ್, ವರ್ಜಿನೀಯಾ ಸೇರಿದಂತೆ ದೇಶದ ತುಂಬೆಲ್ಲಾ ಕ್ರಿಸ್ಟಲ್ ಗೌಸ್ ಅವರ ಕಟ್ಟಡಗಳಿರುವುದರಿಂದ, ಈ ಘಟನೆ ನಿಖರವಾಗಿ ಎಲ್ಲಿ ನಡೆದಿದೆ? ಎಂದು ಇಲ್ಲಿವರೆಗೆ ತಿಳಿದು ಬಂದಿಲ್ಲ. ಹಾಗೆಯೇ, ಈ ವೈರಲ್ ಸೋಷಿಯಲ್ ಮೀಡಿಯಾ ಪೋಸ್ಟ್ ಹೊರತಾಗಿ, ಯಾವುದೇ ಸ್ಥಳೀಯ ಮಾಧ್ಯಮ ವರದಿ ಹಾಗೂ ಪೊಲೀಸರಲ್ಲಿ ದೂರನ್ನು ದಾಖಲಿಸಿದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.