ಅವರೊಂದಿಗೆ ಮಾತುಕತೆ ಸಾಧ್ಯವಾಗುತ್ತಿಲ್ಲ; ಆರೋಗ್ಯ ಸ್ಥಿತಿ ಗಂಭೀರ; ಸಾವಿಗೆ ಹತ್ತಿರವಾದ ಮೊಜ್ತಬಾ ಖಮೇನಿ? Mojtaba Khamenei

ಇರಾನ್ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಆರೋಗ್ಯ ಗಂಭೀರ!
ಇರಾನ್ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಆರೋಗ್ಯ ಗಂಭೀರ!
Published on

ಪ್ರಮುಖ ಮುಖ್ಯಾಂಶಗಳು

  • ಇರಾನ್ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಆರೋಗ್ಯ ಗಂಭೀರ!
  • ಅಮೆರಿಕ-ಇಸ್ರೇಲ್ ದಾಳಿಯ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ನಾಯಕ
  • ಸಾವಿನ ದವಡೆಯಲ್ಲಿ ಖಮೇನಿ?
ಟೆಹ್ರಾನ್​: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಭೀಕರ ದಾಳಿಯಲ್ಲಿ ತನ್ನ ತಂದೆ ಹಾಗೂ ಹಿಂದಿನ ಸರ್ವೋಚ್ಚ ನಾಯಕ ಅಲಿ ಖಮೇನಿ ಸಾವನ್ನಪ್ಪಿದ ಬಳಿಕ, ಇರಾನ್‌ನ ಹೊಸ ಸುಪ್ರೀಂ ನಾಯಕನಾಗಿ ಅಧಿಕಾರಕ್ಕೇರಿರುವ ಮೊಜ್ತಬಾ ಖಮೇನಿ (Mojtaba Khamenei) ಸುತ್ತ ಅನುಮಾನಗಳ ಕತ್ತಲು ಆವರಿಸಿದೆ.
ಅಧಿಕಾರ ಹಿಡಿದ ನಂತರ ಒಮ್ಮೆಯೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಬೆನ್ನಲ್ಲೇ, ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಹಾಗೂ ಅವರು ಯಾವುದೇ ಕ್ಷಣದಲ್ಲಿ ಸಾವನ್ನಪ್ಪಬಹುದು ಎಂಬ ಆಘಾತಕಾರಿ ವರದಿಗಳು ಇರಾನ್ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿವೆ.

ಮೊಜ್ತಬಾ ಎಲ್ಲಿದ್ದಾರೆ?

ತಂದೆಯ ಸಾವಿಗೆ ಕಾರಣವಾದ ಅದೇ ದಾಳಿಯಲ್ಲಿ ಮೊಜ್ತಬಾ ಖಮೇನಿ ಕೂಡ ಗಾಯಗೊಂಡಿದ್ದಾರೆ ಎನ್ನಲಾಗಿದೆ. ದಾಳಿಯ ಅಪಾಯದಿಂದ ಪಾರಾಗಲು ಅವರು ಸಾರ್ವಜನಿಕ ವಲಯದಿಂದ ಸಂಪೂರ್ಣವಾಗಿ ದೂರವಿದ್ದು, ಕೇವಲ ಲಿಖಿತ ಹೇಳಿಕೆಗಳನ್ನು ಮಾತ್ರ ಬಿಡುಗಡೆ ಮಾಡುತ್ತಿದ್ದಾರೆ.

ಅವರ ಯಾವುದೇ ಅಧಿಕೃತ ಆಡಿಯೋ ಅಥವಾ ವಿಡಿಯೋ ತುಣುಕುಗಳು ಇದುವರೆಗೆ ಹೊರಬಂದಿಲ್ಲ. ಹಿರಿಯ ಅಧಿಕಾರಿಗಳ ಜೊತೆಗೂ ಅವರು ಮಧ್ಯವರ್ತಿಗಳ ಮೂಲಕವೇ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ.


ಅಧ್ಯಕ್ಷರ ವಿರೋಧಾಭಾಸದ ಮಾತುಗಳು

ಮತ್ತೊಂದೆಡೆ, ಈ ಎಲ್ಲಾ ಬೆಳವಣಿಗೆಗಳ ನಡುವೆ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಹೇಳಿಕೆಗಳು ಗೊಂದಲ ಮೂಡಿಸಿವೆ. ಮೊಜ್ತಬಾ ಜೊತೆಗೆ ಮಾತುಕತೆ ಈಗ ತುಂಬಾ ಕಷ್ಟಕರವಾಗಿದೆ ಎಂದು ಇತ್ತೀಚೆಗೆ ಅವರು ಒಪ್ಪಿಕೊಂಡಿದ್ದಾರೆ.
ಆದರೆ, ಇದಕ್ಕೂ ಮುನ್ನ ಮೇ ತಿಂಗಳಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ್ದ ಅವರು, ಖಮೇನಿ ಜೊತೆ ಎರಡೂವರೆ ಗಂಟೆಗಳ ಕಾಲ ಅತ್ಯಂತ ಸೌಹಾರ್ದಯುತ ವಾತಾವರಣದಲ್ಲಿ ಮಾತುಕತೆ ನಡೆಸಿದ್ದಾಗಿ ಹೇಳಿದ್ದರು. ಈ ಎರಡು ಹೇಳಿಕೆಗಳ ನಡುವಿನ ವ್ಯತ್ಯಾಸವೇ ಇರಾನ್ ರಾಜಕಾರಣದಲ್ಲಿ ಏನೋ ದೊಡ್ಡ ಮಟ್ಟದ ಬೆಳವಣಿಗೆ ನಡೆಯುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಯಾವ ಕ್ಷಣದಲ್ಲಾದರೂ ಸಾವಿನ ಸುದ್ದಿ ಬರಬಹುದು!

ಮೊಜ್ತಬಾ ಖಮೇನಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದಾರೆ ಮತ್ತು ಯಾವುದೇ ಕ್ಷಣದಲ್ಲಿ ನಿಧನರಾಗಬಹುದು ಎಂಬ ವದಂತಿಗಳು ಆಡಳಿತದ ಉನ್ನತ ಮಟ್ಟದಲ್ಲಿ ಹರಡುತ್ತಿವೆ. ಶೀಘ್ರದಲ್ಲೇ ಅವರು ಹುತಾತ್ಮರಾದ ಸುದ್ದಿ ಹೊರಬಿದ್ದರೆ ಯಾವುದೇ ಆಶ್ಚರ್ಯಪಡುವಂತಿಲ್ಲ ಎನ್ನುವುದು ಆಡಳಿತಕ್ಕೆ ಹತ್ತಿರವಿರುವ ಮೂಲಗಳ ಮಾಹಿತಿಯಾಗಿದೆ.
ಮಧ್ಯಪ್ರಾಚ್ಯದಲ್ಲಿ ಅಮೆರಿಕ ಹಾಗೂ ಇಸ್ರೇಲ್ ವಿರುದ್ಧದ ಸೆಣಸಾಟ ತೀವ್ರಗೊಂಡಿರುವ ಈ ಸಂದರ್ಭದಲ್ಲಿ, ಇರಾನ್‌ನ ಅತ್ಯುನ್ನತ ನಾಯಕನ ಆರೋಗ್ಯದ ಕುರಿತು ಹಬ್ಬಿರುವ ಈ ವದಂತಿಗಳು ಇಡೀ ದೇಶವನ್ನು ಅಸ್ಥಿರತೆಯತ್ತ ತಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಇರಾನ್ ರಾಜಕೀಯದಲ್ಲಿ ಯಾವ ರೀತಿಯ ದೊಡ್ಡ ಸ್ಫೋಟ ಸಂಭವಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net