

ಪ್ರಮುಖ ಮುಖ್ಯಾಂಶಗಳು
ಜಲಂಧರ್ನ ಯುವಕನೊಬ್ಬ ಟ್ರಾವೆಲ್ ಏಜೆಂಟ್ನಿಂದ ತನಗಾದ ವಂಚನೆಯ ಬಗ್ಗೆ ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಕುರಿತು ಐದು ವಿಡಿಯೋಗಳ ಸರಣಿಯನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆಕಾಶದೀಪ್, ಇತರ ಯುವಕರು ಇಂತಹ ನಕಲಿ ಏಜೆಂಟರ ಬಲೆಗೆ ಬೀಳಬೇಡಿ ಎಂದು ಕಣ್ಣೀರಿನ ಮೂಲಕ ಎಚ್ಚರಿಕೆ ನೀಡಿದ್ದಾರೆ.
ನಕಲಿ ಉದ್ಯೋಗಗಳ ಆಮಿಷ ಒಡ್ಡಿ ಭಾರತದ ಯುವಕರನ್ನು ರಷ್ಯಾಕ್ಕೆ ಕರೆತರಲಾಗುತ್ತಿದ್ದು, ನಂತರ ಅವರನ್ನು ರಷ್ಯಾದ ಮಿಲಿಟರಿಗೆ ನೇಮಕಾತಿ ಮಾಡಿಕೊಳ್ಳುವ ದೊಡ್ಡ ಜಾಲ ಇದರ ಹಿಂದೆ ಇದೆ ಎಂದು ಆಕಾಶದೀಪ್ ಗಂಭೀರ ಆರೋಪ ಮಾಡಿದ್ದಾರೆ, (ಏಜನ್ಸೀಸ್).