ಕನಸಿನಲ್ಲೂ ಅವರಿಗೆ ನೆಮ್ಮದಿಯ ಸಾವು ಸಿಗಲ್ಲ: ಜಗತ್ತೇ ಬೆಚ್ಚಿಬೀಳುವ ಸಂದೇಶ ರವಾನಿಸಿದ ಮೊಜ್ತಬಾ ಖಮೇನಿ! Mojtaba Khamenei

ಇರಾನ್ ಹೊಸ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಭೀಕರ ಪ್ರತೀಕಾರದ ಎಚ್ಚರಿಕೆ
ಇರಾನ್ ಹೊಸ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಭೀಕರ ಪ್ರತೀಕಾರದ ಎಚ್ಚರಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಕೊಲೆಗಾರರ ಲಿಸ್ಟ್ ನಮ್ಮ ಬಳಿ ಇದೆ, ಕನಸಿನಲ್ಲೂ ನೆಮ್ಮದಿಯ ಸಾವು ಸಿಗಲ್ಲ!
  • ತಂದೆ ಅಲಿ ಖಮೇನಿ ಅಂತ್ಯಕ್ರಿಯೆ ಬೆನ್ನಲ್ಲೇ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಗುಡುಗಿದ ನೂತನ ಆಯತೊಲ್ಲಾ
  • ಇರಾನ್ ಹೊಸ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಭೀಕರ ಪ್ರತೀಕಾರದ ಎಚ್ಚರಿಕೆ
ತೆಹ್ರಾನ್​: ಕಳೆದ ಕೆಲ ದಿನಗಳಿಂದ ಶಾಂತವಾಗಿದ್ದ ಮಧ್ಯಪ್ರಾಚ್ಯದಲ್ಲಿ ಮತ್ತೆ ಸಂಘರ್ಷದ ಕರಿ ಛಾಯೆ ಕಂಡುಬರುತ್ತಿದೆ. ಇರಾನ್​ನ ಮಾಜಿ ಸುಪ್ರೀಂ ಲೀಡರ್​ ಆಯತೊಲ್ಲಾ ಅಲಿ ಖಮೇನಿ ಅಂತ್ಯಸಂಸ್ಕಾರಕ್ಕೂ ಬರದ ಉತ್ತರಾಧಿಕಾರಿ ಅಯತೊಲ್ಲಾ ಮೊಜ್ತಬಾ ಖಮೇನಿ (Mojtaba Khamenei) ಇದೀಗ ಜಗತ್ತೇ ಬೆಚ್ಚಿ ಬೀಳುವ ಸಂದೇಶವೊಂದನ್ನು ರವಾನಿಸಿದ್ದಾನೆ.

ಕೊಲೆಗಾರರ ಲಿಸ್ಟ್ ನಮ್ಮ ಹತ್ತಿರ ಇದೆ!

ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಮೊಜ್ತಬಾ ಖಮೇನಿ, "ನಮ್ಮ ಹುತಾತ್ಮ ನಾಯಕನನ್ನು ಅನ್ಯಾಯವಾಗಿ ಕೊಂದ ಆ ಅಪರಾಧಿಗಳ ಮತ್ತು ಅವಮಾನಕರ ಕೊಲೆಗಾರರ ಹೆಸರುಗಳು ನಮ್ಮ ಬಳಿ ಇದೆ. ಅವರು ಎಂದಿಗೂ ನೆಮ್ಮದಿಯಿಂದ, ಶಾಂತಿಯುತವಾಗಿ ಸಾಯಲು ನಾವು ಬಿಡುವುದಿಲ್ಲ. ಅವರು ಕನಸಿನಲ್ಲೂ ನೆಮ್ಮದಿಯ ಸಾವು ಕಾಣಲ್ಲ, ಎಂದು ಟ್ವಿಟರ್​ ನಲ್ಲಿ ಗುಡುಗಿದ್ದಾರೆ.
ಸೇಡು ತೀರಿಸಿಕೊಂಡೇ ತೀರುತ್ತೇವೆ!
ತಮ್ಮ ತಂದೆಯನ್ನು "ದೇವರ ಶ್ರೇಷ್ಠ ಸೇವಕ" ಎಂದು ಬಣ್ಣಿಸಿದ ನೂತನ ಸುಪ್ರೀಂ ಲೀಡರ್, ಇಮಾಮ್ ಹುಸೇನ್ ಅವರ ಐತಿಹಾಸಿಕ ಹೋರಾಟವನ್ನು ನೆನಪಿಸಿಕೊಂಡರು. ಇರಾನ್ ದೇಶವು ಎಂದಿಗೂ ಶತ್ರುಗಳ ಮುಂದೆ ಮಂಡಿಯೂರಿಲ್ಲ, ತನ್ನ ತತ್ವಗಳಿಗಾಗಿ ಜನರನ್ನು ತ್ಯಾಗ ಮಾಡಲು ಸಿದ್ಧವಿದೆ ಎಂದರು.
ಇತ್ತೀಚಿನ ಯುದ್ಧಗಳಲ್ಲಿ ಹರಿದ ನಮ್ಮ ನಾಯಕರ ಮತ್ತು ಹುತಾತ್ಮರ ಪ್ರತಿ ಹನಿ ರಕ್ತಕ್ಕೂ ನಾವು ಸೇಡು ತೀರಿಸಿಕೊಳ್ಳುತ್ತೇವೆ. ಈ ಪ್ರತೀಕಾರವನ್ನು ಇರಾನ್‌ನ ಪ್ರತಿಯೊಬ್ಬ ನಾಗರಿಕನೂ ಬಯಸುತ್ತಿದ್ದಾನೆ. ಇದನ್ನು ನಾವು ಮಾಡಿಯೇ ತೀರುತ್ತೇವೆ, ಎಂದು ಪ್ರತಿಜ್ಞೆ ಮಾಡಿದ್ದಾರೆ.

ಅಂತ್ಯಕ್ರಿಯೆಗೆ ಹರಿದು ಬಂದ ಜನಸಾಗರಕ್ಕೆ ಧನ್ಯವಾದ

ಕಳೆದ ಫೆಬ್ರವರಿಯಲ್ಲಿ ನಡೆದ ಅಮೆರಿಕ-ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಅಲಿ ಖಮೇನಿ ಮೃತಪಟ್ಟಿದ್ದರು. ಇದೀಗ ತಿಂಗಳುಗಳ ನಂತರ ನಡೆದ ಅವರ ಅಂತ್ಯಕ್ರಿಯೆಯಲ್ಲಿ ಇರಾನ್ ಮತ್ತು ಇರಾಕ್‌ನಾದ್ಯಂತ ಕೋಟ್ಯಂತರ ಜನರು ಭಾಗವಹಿಸಿದ್ದರು.
ಟೆಹ್ರಾನ್, ಕೋಮ್, ನಜಾಫ್, ಕರ್ಬಲಾ ಮತ್ತು ಮಶಾದ್ ನಗರಗಳಲ್ಲಿ ಜಮಾಯಿಸಿದ್ದ ಲಕ್ಷಾಂತರ ಶೋಕತಪ್ತ ಜನರಿಗೆ ಧನ್ಯವಾದ ಅರ್ಪಿಸಿದ ಮೊಜ್ತಬಾ ಖಮೇನಿ, ಇದೊಂದು ಐತಿಹಾಸಿಕ ದಿನ ಎಂದಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಬಂದಿರುವುದು ದಿವಂಗತ ನಾಯಕನ ಪರಂಪರೆ ಮತ್ತು ಇಸ್ಲಾಮಿಕ್ ಕ್ರಾಂತಿಗೆ ಸಿಕ್ಕ ಜಯ ಎಂದು ಅವರು ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net