ಅಂತ್ಯವಿಲ್ಲದ ಯುದ್ಧಕ್ಕೆ ಅಂತ್ಯಹಾಡಿ: ಮೋದಿ-ಪುಟಿನ್​ ದ್ವಿಪಕ್ಷೀಯ ಮಾತುಕತೆ; ರಷ್ಯಾ ಅಧ್ಯಕ್ಷರಿಗೆ ಭಾರತದ ಪ್ರಧಾನಿ ಸಲಹೆ! PM Modi and Vladimir Putin

ಭಾರತದ ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​
ಭಾರತದ ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​
Published on
ಕಜಕಿಸ್ತಾನ: ರಷ್ಯಾ ಮತ್ತು ಉಕ್ರೇನ್ ನಡುವಿನ ಕದನ ವಿರಾಮಕ್ಕೆ ಭಾರತ ಮತ್ತೊಮ್ಮೆ ತನ್ನ ಬಲವಾದ ಬೆಂಬಲ ವ್ಯಕ್ತಪಡಿಸಿದೆ. ಸೋಮವಾರ (ಆಗಸ್ಟ್​​ 31) ಕಜಕಿಸ್ತಾನದ ಬಿಷ್ಕೆಕ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (PM Modi and Vladimir Putin) ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಸುಮಾರು 30 ನಿಮಿಷಗಳ ಕಾಲ ನಡೆದ ಈ ಸಭೆಯಲ್ಲಿ ಯುದ್ಧದ ಭೀಕರತೆ ಹಾಗೂ ಶಾಂತಿಯ ಮಹತ್ವದ ಕುರಿತು ಜಾಗತಿಕ ಗಮನ ಸೆಳೆಯುವ ಮಾತುಗಳು ಕೇಳಿಬಂದಿವೆ.

ಮಾತುಕತೆ ಆರಂಭವಾಗುತ್ತಿದ್ದಂತೆ ಪ್ರಧಾನಿ ಮೋದಿ, ಪುಟಿನ್ ಅವರ ಬಳಿಗೆ ಉತ್ಸಾಹದಿಂದ ನಡೆದುಹೋಗಿ ಅಪ್ಪುಗೆ ಹಾಗೂ ಹಸ್ತಲಾಘವದ ಮೂಲಕ ಆತ್ಮೀಯತೆ ಮೆರೆದರು. ನಂತರ ಇಬ್ಬರೂ ನಾಯಕರು ಜಾಗತಿಕ ವಿದ್ಯಮಾನಗಳು ಹಾಗೂ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದರು.

ಯುದ್ಧದಿಂದ ಮಾನವೀಯತೆಗೆ ಹಿನ್ನಡೆ: ಪ್ರಧಾನಿ ಮೋದಿ

ಸಭೆಯ ಬಳಿಕ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಯುದ್ಧದ ವಿರುದ್ಧ ಮತ್ತೊಮ್ಮೆ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಯುದ್ಧದ ಪ್ರತಿ ದಿನವೂ ಮಾನವೀಯತೆಯನ್ನು ಹಿಂದಕ್ಕೆ ತಳ್ಳುತ್ತದೆ.

ಆದರೆ, ಶಾಂತಿಯ ಕಡೆಗೆ ಇಡುವ ಪ್ರತಿಯೊಂದು ಹೆಜ್ಜೆಯೂ ಲೋಕಕ್ಕೆ ಹೊಸ ಭರವಸೆ ನೀಡುತ್ತದೆ. ನಾವು ಈಗ ಅಂತ್ಯವಿಲ್ಲದ ಯುದ್ಧದಿಂದ ಯುದ್ಧದ ಅಂತ್ಯದ ಕಡೆಗೆ ಹೆಜ್ಜೆಹಾಕಬೇಕಿದೆ ಎಂದು ಮೋದಿ ದೃಢವಾಗಿ ನುಡಿದಿದ್ದಾರೆ.

ಬುದ್ಧ ಮತ್ತು ಮಹಾತ್ಮ ಗಾಂಧಿಯವರ ಹೆಮ್ಮೆಯ ಭೂಮಿಯಿಂದ ಬಂದಿರುವ ನಾವು ಸದಾ ಶಾಂತಿಯ ಸಂದೇಶವನ್ನೇ ಸಾರುತ್ತೇವೆ. ಜಗತ್ತಿನಲ್ಲಿರುವ ಎಲ್ಲಾ ಬಿಕ್ಕಟ್ಟುಗಳಿಗೆ ಆದಷ್ಟು ಬೇಗ ಶಾಂತಿಯುತ ಪರಿಹಾರ ಕಂಡುಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಪುಟಿನ್ ಎದುರು ಮೋದಿ ಅಭಿಪ್ರಾಯಪಟ್ಟಿದ್ದಾರೆ


ಭಾರತ-ರಷ್ಯಾ ಬಾಂಧವ್ಯ ಮತ್ತಷ್ಟು ಗಟ್ಟಿ!

ಪ್ರಧಾನಿ ಮೋದಿ ಜತೆಗಿನ ಭೇಟಿ ಬಗ್ಗೆ ಸಂತಸ ವ್ಯಕ್ತಪಡಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಭಾರತದ ಜತೆಗಿನ ರಾಜತಾಂತ್ರಿಕ ಹಾಗೂ ಆರ್ಥಿಕ ಸಂಬಂಧಗಳು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿರುವುದಕ್ಕೆ ಪ್ರಧಾನಿ ಮೋದಿಯವರ ವೈಯಕ್ತಿಕ ಕಾಳಜಿಯೇ ಕಾರಣ ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕಳೆದ ವರ್ಷ ಎರಡೂ ದೇಶಗಳ ನಡುವಿನ ಪ್ರವಾಸಿ ವಿನಿಮಯ ಶೇ. 16ರಷ್ಟು ಹೆಚ್ಚಾಗಿರುವುದು ಉಭಯ ದೇಶಗಳ ಬಾಂಧವ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದಿದ್ದಾರೆ.

ಮುಂದಿನ ವಾರ ವಾರ್ಷಿಕ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದು, ಭಾರತೀಯರು ಅವರ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ ಎಂದು ಮೋದಿ ಆಹ್ವಾನ ನೀಡಿದ್ದಾರೆ. ಈ ಭೇಟಿಯು ಮಾಸ್ಕೋ ಮತ್ತು ನವದೆಹಲಿ ನಡುವಿನ ವ್ಯಾಪಾರ, ಹೂಡಿಕೆ, ಇಂಧನ ಹಾಗೂ ರಕ್ಷಣಾ ಕ್ಷೇತ್ರಗಳ ಬಾಂಧವ್ಯವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಲಾಯಿದೆ,

(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net