ಹುಲಿ ಮತ್ತು ಹಾವಿನ ಬೆರಕೆ ತಳಿಯೇ? ಬಾಂಗ್ಲಾ ಅರಣ್ಯ ರಕ್ಷಕರನ್ನು ನೋಡಿ ನೆಟ್ಟಿಗರು ನಗ್ತಿರೋದ್ಯಾಕೆ? Bangladesh Forest Guard

ಬಾಂಗ್ಲಾದೇಶದ ಅರಣ್ಯ ರಕ್ಷಕರ ಸಮವಸ್ತ್ರ ಫುಲ್​ ವೈರಲ್​
ಬಾಂಗ್ಲಾದೇಶದ ಅರಣ್ಯ ರಕ್ಷಕರ ಸಮವಸ್ತ್ರ ಫುಲ್​ ವೈರಲ್​
Published on

ಪ್ರಮುಖ ಮುಖ್ಯಾಂಶಗಳು

  • ಬಾಂಗ್ಲಾದೇಶದ ಅರಣ್ಯ ರಕ್ಷಕರ ಸಮವಸ್ತ್ರ ಫುಲ್​ ವೈರಲ್​
  • ಹುಲಿ ಚರ್ಮದ ಅಂಗಿ, ಹಾವಿನ ಚರ್ಮದ ಫ್ಯಾಂಟ್​​ನಲ್ಲಿರುವ ಫೋಟೊ ನೋಡಿ ನಕ್ಕ ನೆಟ್ಟಿಗರು
  • ಇದೇನು ಹುಲಿ ಮತ್ತು ಹಾವಿನ ಮಿಶ್ರತಳಿ ಎಂದ ಜನರು
ವೈರಲ್​: ಕಳೆದ ಕೆಲ ದಿನಗಳಿಂದ ಸೋಷಿಯಲ್​ ಮೀಡಿಯಾ ವೇದಿಕೆ ಎಕ್ಸ್​ (ಟ್ವಿಟರ್​) ನಲ್ಲಿ ಬಾಂಗ್ಲಾದೇಶದ ಅರಣ್ಯ ರಕ್ಷಕ (Bangladesh Forest Guard) ರ ಫೋಟೊವೊಂದು ಸಖತ್​ ವೈರಲ್​ ಆಗುತ್ತಿದೆ. ಈ ಫೋಟೊವನ್ನು ನೋಡಿದ ಜನ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಿರುವುದಂತು ನಿಜವಾಗಿದೆ.

ಫೋಟೊದಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುವ ಫೋಟೊನಲ್ಲಿ ಇಬ್ಬರು ಅರಣ್ಯ ರಕ್ಷಕರು ಹುಲಿಯ ಚರ್ಮದ ಬಣ್ಣದ ಅಂಗಿ ಮತ್ತು ಹಾವಿನ ಚರ್ಮದ ಬಣ್ಣದ ಫ್ಯಾಂಟ್​ನ್ನು ಧರಿಸಿದ್ದಾರೆ. ಈ ಸಮವಸ್ತ್ರವು ನೋಡಲು ಬಹಳ ಹಾಸ್ಯಮಯವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫುಲ್​ ವೈರಲ್​ ಆಗುತ್ತಿದೆ.
ಇವರು ಧರಿಸಿರುವ ಬಟ್ಟೆ ನೋಡಲು ದಿಟ್ಟೋ ಪ್ರಾಣಿಗಳ ಚರ್ಮದಂತೆ ಭಾಸವಾಗುತ್ತಿದ್ದು, ಇದರಿಂದಲೇ ಲಕ್ಷಾಂತರ ಜನ ಈ ಫೋಟೊವನ್ನು ನೋಡಿ ಹಾಸ್ಯಭರಿತ ಇಮೋಜಿಗಳನ್ನು ಹಾಗೂ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ಫೋಟೊ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್​ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಯಾರಯ್ಯಾ ಇವರು ಹುಲಿ ಮತ್ತು ಹಾವಿಗೆ ಹುಟ್ಟಿದ ಬೆರಕೆ ತಳಿಗಳು ಎಂದು ಒಬ್ಬ ಬಳಕೆದಾರ ಕಮೆಂಟ್​ ಮಾಡಿದ್ದಾರೆ.
ನನಗೆ ಬೇಸರವಾದಾಗೆಲ್ಲಾ ಈ ಫೋಟೊವನ್ನೇ ನೋಡುತ್ತೇನೆ ನಕ್ಕು ನಕ್ಕು ದುಃಖವೆಲ್ಲಾ ಮಾಯವಾಗುತ್ತದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಇವರೇನಾದರೂ ಈ ವಸ್ತ್ರದಲ್ಲಿ ಕಾಡಿಗೆ ಹೋದರೆ ಪ್ರಾಣಿಗಳೇ ಕನ್ಪ್ಯೂಸ್​ ಆಗುವುದು ಗ್ಯಾರಂಟಿ ಎಂದು ಮತ್ತೊಬ್ಬರು ಹೇಳಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net