ಊಟ ಮಾಡಿದ ನಂತರ 10 ನಿಮಿಷಗಳ ಕಾಲ ನಡೆಯುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯಾ? Walking

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ನಾವು ಸೇವಿಸಿದ ಆಹಾರ ಜೀರ್ಣಗೊಳ್ಳದೇ, ಇದ್ದರೆ ಹಲವಾರು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ
  • ಪ್ರತಿದಿನ ಊಟ ಮಾಡಿದ ನಂತರ ನಡೆಯುವುದು ಸರಳ ಅಭ್ಯಾಸ
  • ಜನರ ಕಾಲಿನ ಸ್ನಾಯುಗಳಿಗೆ ರಕ್ತದ ಹರಿವನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
Walking: ಜನರು ಊಟ ಮಾಡಿದ ತಕ್ಷಣವೇ ಮಲಗಲು ಪ್ರಾರಂಭಿಸುತ್ತಾರೆ. ಇದು ಒಳ್ಳೆಯ ಅಭ್ಯಾಸವಲ್ಲ. ಇದರಿಂದ ನಾವು ಸೇವಿಸಿದ ಆಹಾರ ಜೀರ್ಣಗೊಳ್ಳದೇ, ಇದರ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಪ್ರತಿದಿನ ಊಟ ಮಾಡಿದ ನಂತರ ನಡೆಯುವುದು ಸರಳ ಅಭ್ಯಾಸವಾಗಿದ್ದರೂ ಕೂಡಾ ತುಂಬಾ ಪರಿಣಾಮಕಾರಿಯಾಗಿದೆ. ಇದು ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹಾಗೆಯೇ ಜನರ ಕಾಲಿನ ಸ್ನಾಯುಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದರಿಂದ ಜೀರ್ಣಕ್ರಿಯೆ ಸುಲಭವಾಗಿ ಸಾಗುತ್ತದೆ.
ಕರುಳಿನ ವೈದ್ಯ ಎಂದು ಜನಪ್ರಿಯರಾಗಿರುವ ಮತ್ತು AIIMS, ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ತರಬೇತಿ ಪಡೆದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ, ಅವರು ಸೂಚಿಸಿದಂತೆ ಊಟ ಮಾಡಿದ ನಂತರ ಕೇವಲ 10 ನಿಮಿಷಗಳ ಕಾಲ ನಡೆಯುವುದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಎಂದು ತೋರಿಸುತ್ತದೆ.
ಊಟದ ನಂತರ ನಡೆಯುವುದರಿಂದ ಆಗುವ ಪ್ರಯೋಜನಗಳೇನು

1. ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ

ಊಟದ ನಂತರ ನಡೆಯುವುದರಿಂದ ಇದು ದೇಹದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ಮಧುಮೇಹಿಗಳು ಈ ಅಭ್ಯಾಸವನ್ನು ಮಾಡಿಕೊಳ್ಳುವುದರಿಂದ ಗ್ಲೂಕೋಸ್ ರಕ್ತಪ್ರವಾಹಕ್ಕೆ ಪ್ರವೇಶಿಸುವ ವೇಗವನ್ನು ನಿಧಾನಗೊಳಿಸುತ್ತದೆ ಮತ್ತು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಶೇ.30ಕ್ಕೆ ಇಳಿಸುತ್ತದೆ. ಇದರಿಂದ ದೇಹದಲ್ಲಿ ಸ್ಥಿರವಾದ ಶಕ್ತಿ ಬಿಡುಗಡೆಯಾಗಿ ಕಡಿಮೆ ಉರಿಯೂತ ಆಗುವಂತೆ ಮಾಡುತ್ತದೆ.

2. ಇನ್ಸುಲಿನ್ ಸ್ಪೈಕ್‌ಗಳನ್ನು ಕಡಿಮೆ ಮಾಡುತ್ತದೆ

ಒಂದು ಸಣ್ಣ ನಡಿಗೆಯು ಸ್ನಾಯುಗಳಿಗೆ ಹೆಚ್ಚು ಇನ್ಸುಲಿನ್ ಅಗತ್ಯವಿಲ್ಲದೆಯೇ ರಕ್ತದಿಂದ ಗ್ಲೂಕೋಸ್ ಅನ್ನು ಹೊರತೆಗೆಯುವಂತೆ ಸಹಾಯ ಮಾಡುತ್ತದೆ. ಇದು ಗ್ಲೂಕೋಸ್ ವಕ್ರರೇಖೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಇದರಿಂದ ನಿಮ್ಮ ಸ್ನಾಯುಗಳಿಗೆ ಬಲ ನೀಡುವುದರ ಜೊತೆಗೆ ಚಯಾಪಚಯ ಕ್ರಿಯೆಯನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ.

3. ಜೀರ್ಣಕ್ರಿಯೆ ಸುಧಾರಣೆ

ನಡಿಗೆಯು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ, ಹೊಟ್ಟೆ ಮತ್ತು ಕರುಳಿನ ಮೂಲಕ ಆಹಾರದ ಚಲನೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಿಸುತ್ತದೆ. ಇದು ಹೊಟ್ಟೆ ಉಬ್ಬುವುದು, ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಧಾನವಾಗಿ ನಡೆಯುವುದರಿಂದ ಇದು ಜಠರದ ಕರುಳಿನ ಪ್ರದೇಶವನ್ನು ಸಕ್ರಿಯಗೊಳಿಸಿ ಜೀರ್ಣಕ್ರಿಯೆಯನ್ನು ತಡೆಯುತ್ತದೆ. ಹೊಟ್ಟೆ ಖಾಲಿಯಾಗುವಿಕೆಯನ್ನು ಉತ್ತೇಜಿಸುತ್ತದೆ.

4. ನಿದ್ರೆ ಹೆಚ್ಚಳ

ನಡಿಗೆ ಸೇರಿದಂತೆ ದೈಹಿಕ ಚಟುವಟಿಕೆಗಳು ಉತ್ತಮ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ರಾತ್ರಿ ಊಟದ ನಂತರ ನಿಧಾನವಾಗಿ ಚಲಿಸುವುದರಿಂದ ಇದು ಗ್ಲೂಕೋಸ್ ಅನ್ನು ಸ್ಥಿರಗೊಳಿಸಿ, ರಿಫ್ಲೆಕ್ಸ್ ಮಾಡುತ್ತದೆ. ಇದು ಅತಿಯಾದ ಹೊಟ್ಟೆ ನೋವನ್ನು ನಿಯಂತ್ರಿಸಿ, ಕರುಳಿನ ಚಲನಶೀಲತೆಯನ್ನು ಹೆಚ್ಚಿಸುತ್ತದೆ.

5. ಆಮ್ಲ ಹಿಮ್ಮುಖ ಹರಿವನ್ನು ಕಡಿಮೆ ಮಾಡುತ್ತದೆ

ಯಾವುದೇ ವ್ಯಕ್ತಿಯು ಊಟ ಆದ ನಂತರ ತಕ್ಷಣವೇ ಮಲಗಿದರೆ, ಅಥವಾ ಕುಳಿತುಕೊಂಡರೆ ಎದೆ ಉರಿ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಊಟ ಆದ ತಕ್ಷಣ ನಡೆಯುವ ಅಭ್ಯಾಸವನ್ನು ಮಾಡಿಕೊಂಡರೆ, ಇದು ಆಮ್ಲೀಯತೆಗೆ ಒಳಗಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net