ಅಜೀರ್ಣ, ಮಲಬದ್ಧತೆಗೆ ಶಾಶ್ವತವಾಗಿ ಹೇಳಿ ಗುಡ್‌ಬೈ! ಪ್ರತಿದಿನ ಈ ಯೋಗ ಆಸನಗಳ ಅಭ್ಯಾಸ ಮಾಡಿ.. Yoga asana

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಚಳಿಗಾಲದಲ್ಲಿ ಬಹಳಷ್ಟು ಜನ ಜೀರ್ಣಕಾರಿ ಸಮಸ್ಯೆಯಿಂದ ಬಳಲುತ್ತಾರೆ
  • ಈ ಸಮಯದಲ್ಲಿ ಜನರು ಭಾರವಾದ ಆಹಾರಗಳನ್ನು ಸೇವಿಸಲು ಪ್ರಾರಂಭಿಸುತ್ತಾರೆ
  • ಇದು ಉಬ್ಬುವುದು ಮತ್ತು ಆಮ್ಲೀಯತೆಯನ್ನು ಉಂಟು ಮಾಡುತ್ತದೆ
Yoga asana: ಚಳಿಗಾಲದ ಆರಂಭವಾಗಿದೆ. ಈ ದಿನಗಳಲ್ಲಿ ಬಹಳಷ್ಟು ಜನ ಜೀರ್ಣಕಾರಿ ಸಮಸ್ಯೆಯಿಂದ ಬಳಲುತ್ತಾರೆ. ಈ ಸಮಸ್ಯೆಯು ತೀವ್ರ ಅಸ್ವಸ್ಥತೆಯನ್ನು ಉಂಟು ಮಾಡುತ್ತದೆ. ಈ ಸಮಯದಲ್ಲಿ ಜನರು ಭಾರವಾದ ಆಹಾರಗಳನ್ನು ಸೇವಿಸಲು ಪ್ರಾರಂಭಿಸುತ್ತಾರೆ. ಇದು ಇನ್ನಷ್ಟು ಹೊಟ್ಟೆಯನ್ನು ಹೊರೆ ಮಾಡಿ ಭಾರವಾಗುವುದು, ಉಬ್ಬುವುದು ಮತ್ತು ಆಮ್ಲೀಯತೆಯನ್ನು ಉಂಟು ಮಾಡುತ್ತದೆ.
ಯಾವುದೇ ವ್ಯಕ್ತಿಯು ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿರಿಸಿಕೊಳ್ಳಬಹುದು. ಈ ಯೋಗ ಆಸನವು ಅತ್ಯಂತ ಪ್ರಯೋಜನಕಾರಿಯಾಗಿದ್ದು, ಜೀರ್ಣಕ್ರಿಯೆಯನ್ನು ಉತ್ತೇಜಿಸುವ, ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಈ ಆಸನಗಳನ್ನು ಪ್ರಯತ್ನಿಸಿ ಇದು ನಿಮ್ಮನ್ನು ಆರೋಗ್ಯದಿಂದ ಇರಿಸುವಂತೆ ಮಾಡುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸಲು ಯೋಗ ಆಸನಗಳು

1. ಪವನಮುಕ್ತಾಸನ (Wind-Relieving Pose)
ಜೀರ್ಣಕ್ರಿಯೆ ತೊಂದರೆ ಅನುಭವಿಸುವಂತವರು ಈ ಆಸನವನ್ನು ಮಾಡುವುದರಿಂದ ಇದು ನಿಮ್ಮ ಹೊಟ್ಟೆಯ ಮೇಲೆ ಸೌಮ್ಯ ಒತ್ತಡವನ್ನು ಬೀರಿ ಜೀರ್ಣಕಾರಿ ಅಂಗಗಳಿಗೆ ಪ್ರಯೋಜನಗಳನ್ನು ನೀಡುತ್ತದೆ. ಇದು ದೇಹದಲ್ಲಿ ಅನಿಲ ಬಿಡುಗಡೆಯನ್ನು ಉತ್ತೇಜಿಸಿ, ಉಬ್ಬುವಿಕೆಯನ್ನು ಕಡಿಮೆ ಮಾಡುತ್ತದೆ. ಪವನಮುಕ್ತಾಸನವು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

2. ಮಾರ್ಜರ್ಯಾಸನ-ಬಿಟಿಲಾಸನ (Cat-Cow Stretch)

ಮಾರ್ಜರ್ಯಾಸನ-ಬಿಟಿಲಾಸನವನ್ನು ಮಾಡುವುದರಿಂದ ಇದು ಜೀರ್ಣಾಂಗವ್ಯೂಹವನ್ನು ಮಸಾಜ್​ ಮಾಡುತ್ತದೆ. ಇದು ಬೆನ್ನುಮೂಳೆಯ ನಮ್ಯತೆಯನ್ನು ಹೆಚ್ಚಿಸುತ್ತದೆ. ಕಿಬ್ಬೊಟ್ಟೆಯ ಪ್ರದೇಶವನ್ನು ಪರ್ಯಾಯವಾಗಿ ಸಂಕುಚಿತಗೊಳಿಸುವ ಮತ್ತು ಹಿಗ್ಗಿಸುವ ಮೂಲಕ ಜೀರ್ಣವಾಗುವಂತೆ ಮಾಡುತ್ತದೆ.

3. ಬಾಲಾಸನ (Child's Pose)

ಬಾಲಾಸನವನ್ನು ಮಾಡುವುದರಿಂದ ಇದು ನಿಮ್ಮ ಹೊಟ್ಟೆಯನ್ನು ನಿಧಾನವಾಗಿ ಸಂಕುಚಿತಗೊಳ್ಳುವಂತೆ ಮಾಡುತ್ತದೆ. ಇದು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಒತ್ತಡ, ಹೊಟ್ಟೆಯ ಉಬ್ಬರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಆಸನವನ್ನು ಪ್ರತಿನಿತ್ಯ ಮಾಡುವುದರಿಂದ ಇದು ನರಮಂಡಲವನ್ನು ಶಾಂತಿಗೊಳಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

4. ಪಶ್ಚಿಮೋತ್ತನಾಸನ (Seated Forward Bend)

ಪಶ್ಚಿಮೋತ್ತನಾಸನವನ್ನು ಪ್ರತಿನಿತ್ಯ ಮಾಡುವುದರಿಂದ ಇದು ಸೊಂಟ, ತೊಡೆ, ಕಾಲುಗಳ ಕೊಬ್ಬು ಕರಗಿಸುತ್ತದೆ. ಈ ಆಸನವು ಹೊಟ್ಟೆಯ ಅಂಗಗಳಿಗೆ ಮಸಾಜ್​ ಮಾಡಿ ಅಜೀರ್ಣ, ಗ್ಯಾಸ್, ಮಲಬದ್ಧತೆಯಿಂದ ದೂರ ಇರಿಸುತ್ತದೆ. ಹಾಗೆಯೇ ಇದು ಆತಂಕ, ಒತ್ತಡವನ್ನು ಕಡಿಮೆ ಮಾಡಿ ಮನಸ್ಸನ್ನು ಶಾಂತವಾಗಿರುವಂತೆ ಮಾಡುತ್ತದೆ. ಚಳಿಗಾಲದಲ್ಲಿ ಈ ಆಸನವನ್ನು ಮಾಡುವುದರಿಂದ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

5. ಅರ್ಧ ಮತ್ಸ್ಯೇಂದ್ರಾಸನ (Half Lord of the Fishes Pose)

ಈ ಆಸನವನ್ನು ಪ್ರತಿನಿತ್ಯ ಮಾಡುವುದರಿಂದ ಇದು ದೇಹದಲ್ಲಿರುವ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಕರುಳನ್ನು ಉತ್ತೇಜಿಸುವುದರ ಜೊತೆಗೆ ಸಿಕ್ಕಿಬಿದ್ದ ಅನಿಲವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಈ ಆಸನವು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಹೊಟ್ಟೆಯ ಉಬ್ಬರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಖಾಲಿ ಹೊಟ್ಟೆಯಲ್ಲಿ ಈ ಆಸಗಳನ್ನು ಅಭ್ಯಾಸ ಮಾಡಿ

* ಪ್ರತಿ ಭಂಗಿಯನ್ನು ಮಾಡುವಾಗಲೂ ನಿಧಾನ ಮತ್ತು ಆಳವಾದ ಉಸಿರಾಟದ ಮೇಲೆ ಕೇಂದ್ರೀಕರಿಸಿ ಏಕೆಂದರೆ, ಇದು ಉಸಿರಾಟದ ವ್ಯಾಯಾಮಗಳು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
* ಶಿಸ್ತಿನಿಂದ ಈ ಆಸನಗಳನ್ನು ಮಾಡುವುದನ್ನು ಅಭ್ಯಾಸ ಮಾಡಿ ಇದು ಉತ್ತಮ ಫಲಿತಾಂಶವನ್ನು ನೀಡಲು ಸಹಾಯ ಮಾಡುತ್ತದೆ.
* ಯೋಗ ಆಸನಗಳನ್ನು ಮಾಡುವುದರ ಜೊತೆಗೆ, ಹೆಚ್ಚು ನೀರು ಕುಡಿಯುವುದು, ಗಿಡಮೂಲಿಕೆ ಚಹಾಗಳು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net