ಸಿ-ಸೆಕ್ಷನ್ ಹೆರಿಗೆಯ ನಂತರ ತೂಕ ಇಳಿಸುವುದು ಕಷ್ಟ ಅಂದುಕೊಂಡಿದ್ದೀರಾ? ಈ ವೈದ್ಯೆಯ ಸಕ್ಸಸ್ ಸ್ಟೋರಿ ಓದಿ! Weight Loss

ಚಿತ್ರ Instagram
ಚಿತ್ರ Instagram
Published on

ಪ್ರಮುಖ ಮುಖ್ಯಾಂಶಗಳು

  • ಗರ್ಭಧಾರಣೆಯ ನಂತರ ತೂಕ ಇಳಿಸಿಕೊಳ್ಳುವುದು ನಿಜವಾದ ಸವಾಲಾಗಿರಬಹುದು
  • ಈ ಸಮಯದಲ್ಲಿ ಹಾಮೋನುಗಳು ಸ್ಥಾನಪಲ್ಲಟ, ನಿದ್ರೆ, ಹಸಿವು ಎಲ್ಲವೂ ವಿರಳವಾಗಿರುತ್ತದೆ
  • ಚಹದಿಂದ ಕಪ್ಪು ಕಾಫಿಗೆ ಬದಲಾವಣೆಯ ಸಿ-ಸೆಕ್ಷನ್ ನಂತರ 15 ಕೆಜಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡಿತು
  • ಕಪ್ಪು ಕಾಫಿ ಪಾಲಿಫಿನಾಲ್‌ಗಳಲ್ಲಿ ಸಮೃದ್ಧವಾಗಿರುತ್ತದೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ
Weight Loss: ಗರ್ಭಧಾರಣೆಯ ನಂತರ ತೂಕ ಇಳಿಸಿಕೊಳ್ಳುವುದು ನಿಜವಾದ ಸವಾಲಾಗಿರಬಹುದು. ಈ ಸಮಯದಲ್ಲಿ ಹಾಮೋನುಗಳು ಸ್ಥಾನಪಲ್ಲಟ, ನಿದ್ರೆ, ಹಸಿವು ಎಲ್ಲವೂ ವಿರಳವಾಗಿರುತ್ತದೆ. ಆದಾಗ್ಯೂ, ಈ ಎಲ್ಲಾ ಸಮಸ್ಯೆಗಳಿಂದ ತೂಕ ಇಳಿಸಲು ಸಾಧ್ಯವಾಗದೇ ಇರಬಹುದು. ಆದರೆ, ಸಿ ಸೆಕ್ಸನ್​ ಮಾಡಿಸಿಕೊಂಡ ನಂತರ ವೈದ್ಯೆಯೊಬ್ಬರು ಸುಮಾರು 15 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಅಪರಾಜಿತಾ ಲಂಬಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಚಹದಿಂದ ಕಪ್ಪು ಕಾಫಿಗೆ ಬದಲಾವಣೆಯ ಸಿ-ಸೆಕ್ಷನ್ ನಂತರ 15 ಕೆಜಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡಿತು. ಇದು ಚರ್ಮಕ್ಕೆ ಉತ್ತಮವಾಗುವುದರ ಜೊತೆಗೆ ಹೃದಯದ ಆರೋಗ್ಯಕ್ಕೂ ಒಳ್ಳೆಯದು ಎಂದು ಶಿರ್ಷಿಕೆ ಬರೆದು ಪೋಸ್ಟ್​ ಮಾಡಿದ್ದಾರೆ.

ಕಪ್ಪು ಕಾಫಿಯ ಪ್ರಯೋಜನಗಳು

1. ಚರ್ಮದ ಆರೋಗ್ಯ

ಕಪ್ಪು ಕಾಫಿ ಪಾಲಿಫಿನಾಲ್‌ಗಳಲ್ಲಿ ಸಮೃದ್ಧವಾಗಿರುತ್ತದೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಮತ್ತು ಕಾಲಜನ್ ಉತ್ಪಾದಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಇದರ ನಿಯಮಿತ ಸೇವನೆಯಿಂದ ಚರ್ಮದ ಸುಕ್ಕುಗಳನ್ನು ಕಡಿಮೆಯಾಗುತ್ತವೆ. ಜೊತೆಗೆ ಮೊಡವೆಗಳನ್ನು ಕಡಿಮೆ ಮಾಡಿ, ಕಣ್ಣಿನ ಕಪ್ಪು ವರ್ತುಲಗಳಿಂದ ರಕ್ಷಣೆ ನೀಡುತ್ತದೆ. ಜೊತೆಗೆ ಕಣ್ಣುಗಳು ಉಬ್ಬುವುದನ್ನು ಕಡಿಮೆ ಮಾಡಲು ಹಾಗೂ UV ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.

2. ಹೃದಯದ ಆರೋಗ್ಯ

ನಿಯಮಿತ ಕಪ್ಪು ಕಾಫಿಯ ಸೇವನೆಯು ಹೃದಯ ರಕ್ತನಾಳದ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಗೂ ಆಕ್ಸಿಡೇಟಿವ್​ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಇದರ ಉತ್ತಮ ಕೆಫೇನ್​ಗಳು ಹೃದಯ ರಕ್ತನಾಳದ ಅಂಗಾಂಶವನ್ನು ರಕ್ಷಿಸುವುದರ ಜೊತೆಗೆ ಕೊಲೆಸ್ಟ್ರಾಲ್​ ಮಟ್ಟವನ್ನು ಕಾಪಾಡಲು ಸಹಾಯ ಮಾಡುತ್ತದೆ.

3. ದೀರ್ಘಾಯುಷ್ಯ

ಕಾಫಿಯಲ್ಲಿರುವ ಕೆಫೀನ್ ಮತ್ತು ಕ್ಲೋರೊಜೆನಿಕ್ ಆಮ್ಲವು ದೇಹದಲ್ಲಿ 'ಆಟೋಫಗಿ' ಎಂಬ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ. ಇದು ಕೋಶಗಳ ಮಟ್ಟದಲ್ಲಿ ಶುಚಿಗೊಳಿಸುವ ಕಾರ್ಯವಾಗಿದೆ. ಸೌಮ್ಯವಾದ ಕ್ಯಾಲೋರಿ ನಿರ್ಬಂಧ ಮಾಡಿದಾಗ ದೇಹವು ಹೇಗೆ ಹಳೆಯ ಕೋಶಗಳನ್ನು ಮರುಬಳಕೆ ಮಾಡುತ್ತದೆಯೋ, ಹಾಗೆಯೇ ಕಾಫಿ ಕೂಡ ಈ ಪರಿಣಾಮವನ್ನು ಸ್ವಲ್ಪ ಮಟ್ಟಿಗೆ ಅನುಕರಿಸುತ್ತದೆ. ಆದಾಗ್ಯೂ, ಸಂಶೋಧನೆಗಳ ಪ್ರಕಾರ, ಕಪ್ಪು ಕಾಫಿ ಕುಡಿಯುವವರಲ್ಲಿ ಹಠಾತ್​ ಸಾವಿನ ಅಪಾಯಗಳು ಕಡಿಮೆ ಎಂದು ತಿಳಿದುಬಂದಿದೆ.

4. ದೈಹಿಕ ಕಾರ್ಯಕ್ಷಮತೆ

ವ್ಯಾಯಾಮ ಮಾಡುವ ಸುಮಾರು 30-60 ನಿಮಿಷಗಳ ಮೊದಲು ಕಪ್ಪು ಕಾಫಿ ಕುಡಿಯುವುದರಿಂದ ನಿಮ್ಮ ರಕ್ತದಲ್ಲಿ ಅಡ್ರಿನಾಲಿನ್ ಮಟ್ಟ ಹೆಚ್ಚಾಗುತ್ತದೆ. ಇದು ದೇಹವನ್ನು 'Fight or Flight' ಸ್ಥಿತಿಗೆ ಸಿದ್ಧಪಡಿಸುತ್ತದೆ. ಇದರಿಂದ ಸ್ನಾಯುಗಳಿಗೆ ಹೆಚ್ಚಿನ ರಕ್ತ ಸಂಚಾರ ಉಂಟಾಗಿ, ನೀವು ಹೆಚ್ಚು ಹೊತ್ತು ಮತ್ತು ಹೆಚ್ಚು ತೀವ್ರವಾಗಿ ವ್ಯಾಯಾಮ ಮಾಡಲು ಸಾಧ್ಯವಾಗುತ್ತದೆ.

5. ತೂಕ ನಿರ್ವಹಣೆ

ಕಪ್ಪು ಕಾಫಿಯು ವಾಸ್ತವಿಕವಾಗಿ ಕ್ಯಾಲೋರಿ ಮುಕ್ತವಾಗಿದೆ. ಇದು ಚಯಾಪಚಯ ದರವನ್ನು ಶೇ 3 ರಿಂದ 11 ರಷ್ಟು ಹೆಚ್ಚಿಸುವುದರ ಜೊತೆಗೆ ಥರ್ಮೋಜೆನೆಸಿಸ್ ಅನ್ನು ಉತ್ತೇಜಿಸುತ್ತದೆ. ಇದು ದೇಹದಲ್ಲಿ ಹೆಚ್ಚುವರಿಯಾಗಿ ಶೇಖರಣೆಗೊಂಡಿರುವಂತಹ ಕೊಬ್ಬನ್ನು ಸುಡಲು ಪ್ರಯತ್ನಿಸುತ್ತದೆ. ಹಸಿವನ್ನು ಕಡಿಮೆ ಮಾಡುವುದರ ಜೊತೆಗೆ ಕಡು ಬಯಕೆಗಳನ್ನು ನಿಯಂತ್ರಿಸುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net