ಬೆಂಕಿಯ ಮೇಲಿಟ್ಟರೂ ಕರಗದ ಪ್ಲಾಸ್ಟಿಕ್ ಗ್ಲಾಸ್! ಮಹಿಳೆಯ 'ಚಹಾ' ಪ್ರಯೋಗ ಕಂಡು ಬೆಚ್ಚಿಬಿದ್ದ ನೆಟ್ಟಿಗರು; ಇದರ ಹಿಂದಿನ ರಹಸ್ಯವೇನು? Plastic Glass Tea

ಉರಿಯುವ ಬೆಂಕಿ ಮೇಲೆ ಪ್ಲಾಸ್ಟಿಕ್​ ಗ್ಲಾಸ್​ನಲ್ಲಿ ಚಹಾ ತಯಾರಿಸುತ್ತಿರುವ ಮಹಿಳೆ
ಉರಿಯುವ ಬೆಂಕಿ ಮೇಲೆ ಪ್ಲಾಸ್ಟಿಕ್​ ಗ್ಲಾಸ್​ನಲ್ಲಿ ಚಹಾ ತಯಾರಿಸುತ್ತಿರುವ ಮಹಿಳೆ
Published on

ಪ್ರಮುಖ ಮುಖ್ಯಾಂಶಗಳು

  • ಪ್ಲಾಸ್ಟಿಕ್​ ಗ್ಲಾಸ್​ನಲ್ಲಿ ಚಹಾ ತಯಾರಿಸಿದ ಮಹಿಳೆ
  • ಉರಿವ ಬೆಂಕಿ ಮೇಲೆ ಇಟ್ಟರು ಕರಗದ ಪ್ಲಾಸ್ಟಿಕ್​ ಗ್ಲಾಸ್
  • ಇದೊಂದು ಅಪಾಯಕಾರಿ ಪ್ರಯೋಗ ಎಂದ ನೆಟ್ಟಿಗರು
  • ಇದರ ಹಿಂದಿರುವ ವೈಜ್ಞಾನಿಕ ಸತ್ಯವೇನು?
Viral Video: ಅಡುಗೆಮನೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವುದು ಈಗಿನ ಟ್ರೆಂಡ್. ಆದರೆ ಇಲ್ಲೊಬ್ಬ ಮಹಿಳೆ ಮಾಡಿರುವ ಸಾಹಸ ಮಾತ್ರ ವಿಜ್ಞಾನವನ್ನೇ ಸವಾಲು ಹಾಕುವಂತಿದೆ. ಹೌದು, ಬೆಂಕಿ ತಗುಲಿದ ಕೂಡಲೇ ಕರಗಿ ಹೋಗುವ ಪ್ಲಾಸ್ಟಿಕ್ ಗ್ಲಾಸ್ (Plastic Glass Tea) ಮೇಲೆ ಈ ಮಹಿಳೆ ಚಹಾ ತಯಾರಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಫುಲ್​ ವೈರಲ್​ ಆಗುತ್ತಿದೆ.

ವಿಡಿಯೋದಲ್ಲೇನಿದೆ?

ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಗ್ಯಾಸ್ ಸ್ಟೌವ್ ಹಚ್ಚಿ, ಅದರ ಮೇಲೆ ಟೀ ಪಾತ್ರೆ ಇಡುವ ಬದಲು ಒಂದು ಪ್ಲಾಸ್ಟಿಕ್ ಗ್ಲಾಸ್ ಇಡುತ್ತಾರೆ. ಎಲ್ಲರೂ ಆ ಗ್ಲಾಸ್ ಈಗ ಕರಗುತ್ತೆ, ಆಗ ಕರಗುತ್ತೆ ಎಂದು ಅಂದುಕೊಳ್ಳುವಷ್ಟರಲ್ಲಿ ಮಹಿಳೆ ಅದಕ್ಕೆ ನೀರು, ಚಹಾ ಪುಡಿ ಮತ್ತು ಹಾಲು ಹಾಕಿ ಕುದಿಸಲು ಶುರು ಮಾಡುತ್ತಾರೆ.
ವಿಚಿತ್ರ ಅಂದರೆ, ಚಹಾ ಕುದಿಯುತ್ತಿದ್ದರೂ ಪ್ಲಾಸ್ಟಿಕ್ ಗ್ಲಾಸ್ ಮಾತ್ರ ಕರಗುವುದಿಲ್ಲ! ನೋಡಿ ನನ್ನ ಚಹಾ ರೆಡಿ ಆಗ್ತಿದೆ, ನೀವು ಕುಡಿಯುವುದಾದರೆ ಕಾಮೆಂಟ್ ಮಾಡಿ ಎಂದು ಆ ಮಹಿಳೆ ಹೇಳುವುದನ್ನು ನಾವು ಕೇಳ ಬಹುದಾಗಿದೆ.
ಗ್ಲಾಸ್ ಕರಗದಿರಲು ಕಾರಣವೇನು?
ಈ ವಿಡಿಯೋ ನೋಡಿದ ಮೇಲೆ ಪ್ರತಿಯೊಬ್ಬರಿಗೂ ಬೆಂಕಿಯ ಮೇಲೆ ಇಟ್ಟರೂ ಪ್ಲಾಸ್ಟಿಕ್ ಗ್ಲಾಸ್ ಏಕೆ ಕರಗಲಿಲ್ಲ? ಎನ್ನುವ ಪ್ರಶ್ನೆ ಕಾಡುತ್ತಿದೆ. ಆದರೆ ಇದರ ಹಿಂದೆ ಒಂದು ಸಣ್ಣ ವಿಜ್ಞಾನ ಅಡಗಿದೆ. ಗ್ಲಾಸ್‌ನಲ್ಲಿರುವ ನೀರು ಬೆಂಕಿಯ ಶಾಖವನ್ನು ತಕ್ಷಣವೇ ಹೀರಿಕೊಳ್ಳುತ್ತದೆ. ನೀರಿನ ತಾಪಮಾನವು 100 ಸೆಲ್ಸಿಯಸ್​ ತಲುಪುವವರೆಗೆ ಅದು ಪ್ಲಾಸ್ಟಿಕ್​ನ್ನು ಕರಗಲು ಬಿಡುವುದಿಲ್ಲ.

ಇದೊಂದು ಡೆಂಜರಸ್ ಪ್ರಯೋಗ, ಹುಷಾರ್!

ಈ ವಿಡಿಯೋ ನೋಡಲು ಮಜವಾಗಿರಬಹುದು ಅಥವಾ ವಿಜ್ಞಾನದ ಮ್ಯಾಜಿಕ್‌ನಂತೆ ಕಾಣಬಹುದು. ಆದರೆ ತಜ್ಞರ ಪ್ರಕಾರ ಇದು ಅತ್ಯಂತ ಅಪಾಯಕಾರಿ ಪ್ರಯೋಗವಾಗಿದೆ. ಪ್ಲಾಸ್ಟಿಕ್​ನ್ನು ಕಾಯಿಸಿದಾಗ ಅದರಿಂದ ಬಿಸ್ಫೆನಾಲ್-ಎ (BPA) ನಂತಹ ಅಪಾಯಕಾರಿ ರಾಸಾಯನಿಕಗಳು ಬಿಡುಗಡೆಯಾಗಿ ಚಹಾದಲ್ಲಿ ಬೆರೆಯುತ್ತವೆ. ಇದು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಪ್ಲಾಸ್ಟಿಕ್ ಸೀಳಿ ಹಾಲು ಅಥವಾ ನೀರು ಸ್ಟೌವ್ ಮೇಲೆ ಬಿದ್ದರೆ ಬೆಂಕಿ ಅವಘಡ ಸಂಭವಿಸುವ ಸಾಧ್ಯತೆ ಸಹ ಇರುತ್ತದೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net