ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ದೂರಿ ಸ್ವಾಗತ Rathayatre

ಬದರಿನಾಥಧಾಮದಿಂದ ಹೊರಟ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ (Rathayatre) ಭಟ್ಕಳದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಬಳಿಯಲ್ಲಿ ಅದ್ದೂರಿ ಸ್ವಾಗತ ದೊರೆಯಿತು.
ಬದರಿನಾಥಧಾಮದಿಂದ ಹೊರಟ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ (Rathayatre) ಭಟ್ಕಳದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಬಳಿಯಲ್ಲಿ ಅದ್ದೂರಿ ಸ್ವಾಗತ ದೊರೆಯಿತು.
Published on
ಭಟ್ಕಳ: ಬದರಿನಾಥಧಾಮದಿಂದ ಅ. 19ರಂದು ಹೊರಟ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ (Rathayatre) ಭಟ್ಕಳದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಬಳಿಯಲ್ಲಿ ಶನಿವಾರ ಅದ್ದೂರಿ ಸ್ವಾಗತ ದೊರೆಯಿತು.
ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಸ್ಥಾಪನೆಯ 550ನೇ ವರ್ಷದ ಆಚರಣೆಯ ಅಂಗವಾಗಿ ಹಮ್ಮಿಕೊಂಡ 550 ಕೋಟಿ ಶ್ರೀರಾಮ ಜಪ ಯಜ್ಞ ಪೂರ್ಣಗೊಂಡಿದೆ.
ಇದರ ಅಂಗವಾಗಿ ಶ್ರೀಮಠದ ಶ್ರೀರಾಮ ದಿಗ್ವಿಜಯ ರಥ ಯಾತ್ರೆ ದೇಶದ ಪ್ರಮುಖ ಕ್ಷೇತ್ರಗಳಲ್ಲಿ ಸಂಚರಿಸಿ ಭಟ್ಕಳಕ್ಕೆ ಆಗಮಿಸುತ್ತಿರುವಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿದೆ.
ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಬಳಿ ಆಗಮಿಸಿದ ರಥಕ್ಕೆ ಮೆರವಣಿಗೆಯ ಮೂಲಕ ಪುಷ್ಪಾಂಜಲಿ ಸರ್ಕಲ್ ಬಳಿಯಿಂದ ವಡೇರ ಮಠಕ್ಕೆ ಆಗಮಿಸಿತು. ವಡೇರ ಮಠದಲಿ ರಥಕ್ಕೆ ಪೂಜೆ ಸಲ್ಲಿಸಿ ಅಲ್ಲಿಂದ ವಡೇರ ಮಠದ ಕಾಮಪೌಂಡ್‌ನಲ್ಲಿ ರಥಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು.
ರಾತ್ರಿ 8 ಗಂಟೆಯಿಂದ ರಾಮಲೀಲಾ ಕಥಾ, ಝೇಂಕಾರ ಮೆಲೋಡಿಸ್ ತಂಡದಿಂದ ಭರತನಾಟ್ಯ, ಸೌಮ್ಯಾ ಹಾಗೂ ರಿತಿಕಾ ಕಿಣಿ ಸಂಗಡಿಗರಿಂದ ರಾಮನ ಕುರಿತ ನೃತ್ಯ ರೂಪಕ ಗಮನ ಸೆಳೆಯಿತು.
ಸಾಂಪ್ರದಾಯಿಕ ಉಡುಗೆ, ಭಜನೆಯೊಂದಿಗೆ ರಥಾರೂಢ ಮಾರುತಿ ಲಕ್ಷ್ಮಣ ಸಹಿತ ಶ್ರೀ ಸೀತಾಪತಿ ರಾಮಚಂದ್ರರ ಮೆರವಣಿಗೆ ಪಟ್ಟಣದಲ್ಲಿ ವಿಶೇಷಕಳೆ ತಂದಿದೆ.
ಪಟ್ಟಣದ ವಡೇರಮಠದ ಬಳಿಯಲ್ಲಿ ಹಬ್ಬದ ವಾತವರಣ ಸೃಷಿಯಾಗಿದ್ದು ಶ್ರೀರಾಮ ದಿಗ್ವಿಜಯ ರಥದ ಸ್ವಾಗತಕ್ಕೆ ಭಟ್ಕಳದ ಜನತೆ ಅಭೂತ ಪೂರ್ವ ಸಹಕಾರ ನೀಡಿದ್ದಾರೆ.
ಆರಂಭದಲ್ಲಿ ಗಿಂಡಿ ನೃತ್ಯ, ಭಜನೆ, ಕೀರ್ತನೆ, ಪುಟ್ಟ ಮಕ್ಕಳ ಸಹಿತರಾಗಿ ರಾಮ, ಲಕ್ಷಣ, ಹನುಮಂತ ದೇವರ ಉಡು ೆತೊಡುಗೆಯ ಟ್ಯಾಬ್ಲೊಗಳು ಆಕರ್ಷಕವಾಗಿತ್ತು.
ನಂತರ ನಡೆದ ಸುಡುಮದ್ದು ಪ್ರದರ್ಶನ ಜನರನ್ನು ತಮ್ಮತ್ತ ಸೆಳೆದಿಟ್ಟುಕೊಂಡಿದೆ. ಭಟ್ಕಳ ತಾಲೂಕಿನಲ್ಲಿ 8 ಜಪಕೇಂದ್ರಗಳಿದ್ದು ಎಲ್ಲಾ ಜಪಕೇಂದ್ರಕ್ಕೂ ರಥ ತೆರಳಿ ಪೂಜೆ ಸ್ವೀಕರಿಸಲಿದೆ.
ಭಾನುವಾರ ಬೆಳಗ್ಗೆ ತಿರುಮಲ ದೇವಸ್ಥಾನ, ಕಾಮಾಕ್ಷಿ ದೇವಸ್ಥಾನ, ರಘುನಾಥ ದೇವಸ್ಥಾನಕ್ಕೆ ಬಂದು ಅಲ್ಲಿ ಪೂಜೆ ಸ್ವೀಕರಿಸಿ ಬಳಿಕ ವೆಂಕಟಾಪುರ ತೆರಳಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net