ಹತ್ತು ದಿನ ಕಳೆದರೂ ತಿಳಿಯದ ಸಾವಿನ ಕಾರಣ Student Death

ಸಿದ್ದಾಪುರದಲ್ಲಿ ಒಕ್ಕಲಿಗರ ಸಮುದಾಯದಿಂದ ನಡೆದ (Student Death) ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಹಿಳೆಯರು.
ಸಿದ್ದಾಪುರದಲ್ಲಿ ಒಕ್ಕಲಿಗರ ಸಮುದಾಯದಿಂದ ನಡೆದ (Student Death) ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಹಿಳೆಯರು.
Published on

ಪ್ರಮುಖ ಮುಖ್ಯಾಂಶಗಳು

  • ಸಿದ್ದಾಪುರ-ಸಾಗರ ರಸ್ತೆ ತಡೆ ನಡೆಸಿ ಒಕ್ಕಲಿಗರ ಸಮುದಾಯದವರಿಂದ ಪ್ರತಿಭಟನೆ
  • ಕಾನಸೂರು ಇಂದಿರಾ ಗಾಂಧಿ ವಸತಿ ಶಾಲೆ
  • ಸಾಗರ ರಸ್ತೆಯಲ್ಲಿ ಸುಮಾರು ಒಂದು ತಾಸು ರಸ್ತೆ ತಡೆ
ಸಿದ್ದಾಪುರ: ತಾಲೂಕಿನ ಕಾನಸೂರು ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಸಾವನ್ನಪ್ಪಿದ ಗೋಕುಲ ಕೃಷ್ಣ ಗೌಡ ಹುತ್ಗಾರ ಸಾವಿಗೆ (Student Death) ನಿಷ್ಪಕ್ಷಪಾತವಾಗಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ತಾಲೂಕು ಒಕ್ಕಲಿಗರ ಸಮುದಾಯದವರಿಂದ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ತಿಮ್ಮಪ್ಪ ನಾಯಕ ವೃತ್ತದಿಂದ ಸಿದ್ದಾಪುರ, ಶಿರಸಿ, ಹೊನ್ನಾವರ, ಕುಮಟಾ, ಸೊರಬ, ಸಾಗರ ಮತ್ತಿತರ ತಾಲೂಕಿನಿಂದ ಆಗಮಿಸಿದ ಐದು ನೂರಕ್ಕೂ ಹೆಚ್ಚು ಜನರು ಮೆರವಣಿಗೆ ಪ್ರಾರಂಭಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ತಹಸೀಲ್ದಾರ ಕಚೇರಿಯ ಎದುರಿನ ಸಾಗರ ರಸ್ತೆಯಲ್ಲಿ ಸುಮಾರು ಒಂದು ತಾಸು ರಸ್ತೆ ತಡೆ ನಡೆಸಿದರು.
ವಿದ್ಯಾರ್ಥಿಯ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗಿದೆ. ಇದರಲ್ಲಿ ಅನುಮಾನ ಇದೆ ಎಂದು ಸ್ವತಃ ಅವರ ತಾಯಿ ಈಗಾಗಲೇ ಪೊಲೀಸರಿಗೆ ದೂರನ್ನು ನೀಡಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಪೊಲೀಸ್ ಇಲಾಖೆ ಏನು ಮಾಡುತ್ತಿದೆ. ನಮಗೆ ನ್ಯಾಯ ದೊರೆತಂತು ನಾವು ಇಲ್ಲಿಂದ ಹೋಗುವುದಿಲ್ಲ. ಎಸ್‌ಪಿ ಅವರು ಸ್ಥಳಕ್ಕೆ ಆಗಮಿಸಿ ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿ ಸಾವಿನ ಕುರಿತು ಸೂಕ್ತ ತನಿಖೆ ಆಗದಿದ್ದರೆ ತಾಲೂಕು ಆಡಳಿತವೇ ಕೊಲೆ ಮಾಡಿದಂತಾಗುತ್ತದೆ. ಬಂಡಲ ವಸತಿ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧ ಪಟ್ಟು ಮೂವರನ್ನು ಅಮಾನತು ಮಾಡಲಾಗಿದೆ.
ಆದರೆ ಕಾನಸೂರು ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಸಾವನ್ನಪ್ಪಿದರೂ ಇಲ್ಲಿಯ ಸಿಬ್ಬಂದಿಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್ ಮಾತನಾಡಿ, ಈಗಾಗಲೇ ಎಲ್ಲ ರೀತಿಯ ತನಿಖೆ ಮಾಡುತ್ತಿದ್ದೇವೆ.
ನಿಮಗೆ ಯಾರ ಮೇಲಾದರೂ ಸಂಶಯ ಇದ್ದರೆ ಹೇಳಿ ಎಂದಾಗ ಮೃತ ವಿದ್ಯಾರ್ಥಿಯ ತಾಯಿ ಜಯಶ್ರೀ ಗೌಡ ಎಲ್ಲ ಶಿಕ್ಷಕರ ಮೇಲೂ ಪ್ರಕರಣ ದಾಖಲಿಸುತ್ತೇನೆ ಎಂದರು.
ಅದಕ್ಕೆ ಅವರು ಒಪ್ಪಿಗೆ ನೀಡಿ ಇನ್ನು ಒಂದು ವಾರದೊಳಗೆ ತನಿಖೆ ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದರು.
\
ಮೋಹನ ಗೌಡ, ಭಾಸ್ಕರ ಪಟಗಾರ, ವಿನಾಯಕ ಪಟಗಾರ, ಶ್ರೀಧರ ಗೌಡ, ಮಹೇಶ ಗೌಡ, ಮಹಾಬಲೇಶ್ವರ ಗೌಡ, ಸುಮ ಗೌಡ, ಪದ್ಮಾವತಿ ಗೌಡ, ಸೀತಾರಾಮ ಗೌಡ, ಅಣ್ಣಪ್ಪ ಗೌಡ, ವಿ.ಆರ್.ಗೌಡ, ಮಂಜುನಾಥ ಗೌಡ, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ತಿಮ್ಮಪ್ಪ ಎಂ.ಕೆ., ತಾಲೂಕು ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಜೆಡಿಎಸ್ ಮುಖಂಡ ಉಪೇಂದ್ರ ಪೈ, ಎನ್‌ಎಸ್‌ಯುಐನ ವಿಶ್ವ ಗೌಡ ಇತರರಿದ್ದರು.
ಸ್ಥಳದಲ್ಲಿ ಸಿದ್ದಾಪುರ ಸಿಪಿಐ ಜೆ.ಬಿ. ಸೀತಾರಾಮ, ಪಿಎಸ್‌ಐ ನಾಗಪ್ಪ, ಶಾಂತಿನಾಥ ಪಾಸನೆ ಹಾಗೂ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net