30,000 ಅಡಿ ಎತ್ತರದಲ್ಲಿ ಸಚಿನ್ ಬ್ಯಾಟಿಂಗ್! ಸೊಸೆ ಬೌಲಿಂಗ್, ಮಗಳ ಫೀಲ್ಡಿಂಗ್; ವಿಡಿಯೋ ವೈರಲ್​! Sachin Tendulkar

30,000 ಅಡಿ ಎತ್ತರದಲ್ಲಿ, ವಿಮಾನದಲ್ಲಿ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್!
30,000 ಅಡಿ ಎತ್ತರದಲ್ಲಿ, ವಿಮಾನದಲ್ಲಿ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್!
Published on

ಪ್ರಮುಖ ಮುಖ್ಯಾಂಶಗಳು

  • 30,000 ಅಡಿ ಎತ್ತರದಲ್ಲಿ, ವಿಮಾನದಲ್ಲಿ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್!
  • ಸೊಸೆ ಬೌಲಿಂಗ್‌ಗೆ ಬ್ಯಾಟ್ ಬೀಸಿದ ಮಾಸ್ಟರ್ ಬ್ಲಾಸ್ಟರ್
  • ಮಗಳು ಸಾರಾ,ಸೊಸೆ ಸಾನಿಯಾ ಜೊತೆಗಿನ ಸಚಿನ್ ಕ್ರಿಕೆಟ್​ ವಿಡಿಯೋ ವೈರಲ್
ಮುಂಬೈ: ಒಂದು ಕಾಲದಲ್ಲಿ ಜಾಗತಿಕ ಕ್ರಿಕೆಟ್​ನ್ನು ಆಳಿದ, ಕ್ರಿಕೆಟ್​ ದೇವರೆಂದೆ ಖ್ಯಾತಿಗಳಿಸಿದವರೆಂದರೆ ಅದು ಸಚಿನ್​ ರಮೇಶ್​ ತೆಂಡೂಲ್ಕರ್ (Sachin Tendulkar)​. ಕ್ರಿಕೆಟ್​ನಿಂದ ನಿವೃತ್ತರಾಗಿ ದಶಕಗಳೇ ಕಳೆದಿದ್ದರು ಕ್ರಿಕೆಟ್​ ಮೇಲಿನ ಅವರ ಪ್ರೀತಿ ಇನ್ನೂ ಕಡಿಮೆಯಾಗಿಲ್ಲ ಎಂದು ಮತ್ತೊಮ್ಮೆ ಸಾಭೀತಾಗಿದೆ.
ಇತ್ತೀಚೆಗೆ ಕುಟುಂಬ ಸಮೇತ ತಮ್ಮ ಖಾಸಗಿ ವಿಮಾನದಲ್ಲಿ, ಪ್ರವಾಸದಲ್ಲಿರುವ ಸಚಿನ್​ ತೆಂಡೂಲ್ಕರ್​, ವಿಮಾನದಲ್ಲಿಯೇ ಕುಟುಂಬದವರ ಜೊತೆಗೆ ಸುಮಾರು 30,000 ಅಡಿ ಎತ್ತರದಲ್ಲಿ ಬ್ಯಾಟ್​ ಬೀಸಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಧೂಳೆಬ್ಬಿಸುತ್ತಿದೆ.

ಸೊಸೆ ಬೌಲಿಂಗ್​, ಮಗಳ ಫೀಲ್ಡಿಂಗ್​!

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ವಿಡಿಯೋನಲ್ಲಿ ಸಚಿನ್​ ವಿಮಾನದ ಮಧ್ಯದಲ್ಲಿ ಬ್ಯಾಟ್​ ಹಿಡಿದು ನಿಂತಿದ್ದರೆ, ಸೊಸೆ (ಅರ್ಜುನ್​ ತೆಂಡೂಲ್ಕರ್​ ಪತ್ನಿ) ಸಾನಿಯಾ ಚಾಂದೋಕ್ ಬೌಲಿಂಗ್​ ಮಾಡುತ್ತಿದ್ದಾರೆ. ಹಾಗೆಯೇ ಸಚಿನ್​ ಪುತ್ರಿ ಸಾರಾ ತೆಂಡೂಲ್ಕರ್​ ಫೀಲ್ಡಿಂಗ್​ನಲ್ಲಿ ನಿರತರಾಗಿದ್ದಾರೆ.
ಬ್ಯಾಟಿಂಗ್ ಜೊತೆ ಕಮೆಂಟರಿಯನ್ನೂ ಮಾಡಿರುವ ಸಚಿನ್​, ಅಲ್ಟಿಟ್ಯೂಡ್​​ ಹೇಗೇ ಇರಲಿ ಆದರೆ ಅಟಿಟ್ಯೂಡ್​ ಯಾವತ್ತೂ ಬದಲಾಗಬಾರದು, ನೀನು ನನ್ನನ್ನು ಔಟ್​ ಮಾಡಲು ಸಾಧ್ಯವೇ ಇಲ್ಲ ಎಂದು ಸಚಿನ್​ ವಿನೋಧ ಭರಿತರಾಗಿ ಹೇಳುತ್ತಿರುವುದನ್ನು ಕೇಳಬಹುದಾಗಿದೆ. ಕೆಲ ಸಮಯದ ನಂತರ ಸಚಿನ್​ ಬಾರಿಸಿದ ಚೆಂಡನ್ನು ಸಾರಾ ಕ್ಯಾಚ್​ ಹಿಡಿಯುವ ಮೂಲಕ ತಂದೆಯನ್ನು ಔಟ್​ ಮಾಡಿದ್ದಾರೆ.

ನೆಟ್ಟಿಗರ ಫನ್ನಿ ಕಮೆಂಟ್ಸ್​!

ಸಚಿನ್​ ತೆಂಡಲ್ಕೂಕರ್​ ಅವರ ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಕಮೆಂಟ್​ಗಳ ಸುರಿಮಳೆ ಸುರಿದಿದೆ. ಆಕಾಶದಲ್ಲಿ ಕ್ರಿಕೆಟ್​ ಆಡಿದ ಪ್ರಪಂಚದ ಏಕೈಕ ಆಟಗಾರ ಅದು ನಮ್ಮ ಸಚಿನ್​ ತೆಂಡೂಲ್ಕರ್ ಮಾತ್ರ ಎಂದು ಒಬ್ಬ ಬಳಕೆದಾರ ಕಮೆಂಟ್​ ಮಾಡಿದ್ದಾರೆ.
ಅಂತೂ ಸಚಿನ್​ ಮಗಳಿಂದಲೇ ಔಟಾಗ ಬೇಕಾಯಿತು ಎಂದು ಇನ್ನೊಬ್ಬರು ಕಮೆಂಟ್​ ಮಾಡಿದ್ದಾರೆ, ವಿಶ್ವದ ಬೌಲರ್​ಗಳ ಕೈಯಲ್ಲಿ ಆಗದ ಕೆಲಸವನ್ನು ಸೊಸೆ ಮಾಡಿ ತೋರಿಸಿದ್ದಾಳೆ ಎಂದು ಮತ್ತೊಬ್ಬರು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಕ್ರಿಕೆಟ್​ ದೇವರು ಸಚಿನ್​!
ಕೇವಲ 16 ನೇ ವಯಸ್ಸಿಗೆ ಭಾರತ ತಂಡ ಪ್ರವೇಶಿಸಿದ ಸಚಿನ್​ ರಮೇಶ್​ ತೆಂಡೂಲ್ಕರ್​, 1989 ರಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು.
ವೃತ್ತಿ ಜೀವನದಲ್ಲಿ ನೂರು ಬಾರಿ ಶತಕ ಸಿಡಿಸಿದ ದಾಖಲೆ ಇಂದಿಗೂ ಸಚಿನ್​ ಹೆಸರಿನಲ್ಲಿಯೇ ಇದೆ. 2013 ರಲ್ಲಿ ವಾಂಖಡೆಯಲ್ಲಿ ತಮ್ಮ 200 ಟೆಸ್ಟ್​ ಮ್ಯಾಚ್​​ನೊಂದಿಗೆ ನಿವೃತ್ತಿ ಘೋಷಿಸಿದ ಸಚಿನ್​ ತೆಂಡೂಲ್ಕರ್​ ಸಾಧನೆಗೆ ಭಾರತ ರತ್ನ, ಅರ್ಜುನ್​ ಪ್ರಶಸ್ತಿ ಮೊದಲಾದವುಗಳಿಂದ ಸನ್ಮಾನಿಸಲಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net