ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ ಆರೋಪ: ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಕೀಪರ್ ಅಭಿಷೇಕ್ ಪೊರೆಲ್​​ಗೆ ಬಂಧನದ ಭೀತಿ! Abhishek Porel

ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಕೀಪರ್ ಅಭಿಷೇಕ್ ಪೊರೆಲ್ ಮೇಲೆ ಅತ್ಯಾಚಾರ ಹಾಗೂ ಬ್ಲಾಕ್‌ಮೇಲ್ ಆರೋಪ
ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಕೀಪರ್ ಅಭಿಷೇಕ್ ಪೊರೆಲ್ ಮೇಲೆ ಅತ್ಯಾಚಾರ ಹಾಗೂ ಬ್ಲಾಕ್‌ಮೇಲ್ ಆರೋಪ
Published on

ಪ್ರಮುಖ ಮುಖ್ಯಾಂಶಗಳು

  • ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಕೀಪರ್ ಅಭಿಷೇಕ್ ಪೊರೆಲ್ ಮೇಲೆ ಅತ್ಯಾಚಾರ ಹಾಗೂ ಬ್ಲಾಕ್‌ಮೇಲ್ ಆರೋಪ
  • ವೈದ್ಯಕೀಯ ವಿದ್ಯಾರ್ಥಿನಿ ನೀಡಿದ ಅತ್ಯಾಚಾರ ಮತ್ತು ನಗ್ನ ವಿಡಿಯೋ ಬ್ಲಾಕ್‌ಮೇಲ್ ದೂರಿನ ಹಿನ್ನೆಲೆ ಕಲ್ಕತ್ತಾ ಹೈಕೋರ್ಟ್ ಆದೇಶ
ಪಶ್ಚಿಮ ಬಂಗಾಳ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ವಿಕೆಟ್​ ಕೀಪರ್​ ಅಭಿಷೇಕ್ ಪೊರೆಲ್ (Abhishek Porel) ​ನನ್ನು ವಶಕ್ಕೆ ಪಡೆಯುವಂತೆ ಕಲ್ಕತ್ತಾ ಹೈಕೋರ್ಟ್​ ತನಿಖಾಧಿಕಾರಿಗೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ.
ಮೊಗ್ರಾ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಎಫ್​ಐಆರ್​ ಸಂಖ್ಯೆ 346/2026 ಪ್ರಕಾರ ಪೊರೆಲ್​ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಾಗಿರುವ ಹಿನ್ನಲೆ, ಆತನಿಗೆ ಸಂಬಂಧಪಟ್ಟ ಇಲೆಕ್ಟ್ರಾನಿಕ್​ ವಸ್ತುಗಳನ್ನು, ಮತ್ತು ಸಂತ್ರಸ್ತೆಗೆ ಸಂಬಂಧಿಸಿದ ಸಾಮಾಗ್ರಿಗಳನ್ನು ಜಫ್ತಿ ಮಾಡುವಂತೆ ತಿಳಿಸಲಾಗಿದೆ.

ಪ್ರಕರಣದ ಹಿನ್ನಲೆ

ಕ್ರಿಕೆಟರ್​ ಅಭಿಷೇಕ್​ ಪೊರೆಲ್​ ಮೇಲೆ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಯೊಬ್ಬಳು ಅತ್ಯಾಚಾರದ ಆರೋಪವನ್ನು ಮಾಡಿದ್ದಾಳೆ.
ಅಭಿಷೇಕ್​ ಮೊದಲು ನನ್ನ ಜೊತೆ ಮೆಸೇಜ್​ ಮಾಡುತ್ತಿದ್ದ, ನಂತರ ಅವನು ನನ್ನ ಅನುಮತಿ ಇಲ್ಲದೆ, ನನ್ನ ನಗ್ನ- ಅರೆ ನಗ್ನ ಫೋಟೊ ಹಾಗೂ ವಿಡಿಯೋಗಳನ್ನು ಸೆರೆ ಹಿಡಿದಿದ್ದಾನೆ. ನಂತರ ಅದನ್ನು ಇಟ್ಟುಕೊಂಡು ನನ್ನನ್ನು ಬ್ಲಾಕ್​ಮೇಲ್​ ಮಾಡಿದ್ದಾನೆಂದು ಯುವತಿ ದೂರಿನಲ್ಲಿ ದಾಖಲಿಸಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ವಿಚಾರಣೆಯಲ್ಲಿ, ಪೊಲೀಸರು ನಾವು ಆರೋಪಿಯನ್ನು ಬಂಧಿಸುವ ಹಾಗೂ ಸಾಕ್ಷಿಗಳನ್ನು ಕಲೆಹಾಕುವ ಪ್ರಯತ್ನದಲ್ಲಿದ್ದೆವೆಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ಎರಡು ಪಕ್ಷಗಳ ವಾದವನ್ನು ಆಲಿಸಿದ ನ್ಯಾಯಾಲಯವು, ಇಲ್ಲಿವರೆಗೆ ಈ ಪ್ರಕರಣದಲ್ಲಿ ಏನು ಕ್ರಮ ಕೈಗೊಂಡಿದ್ದಿರೆಂದು ಮುಂದಿನ ವಿಚಾರಣೆಯಲ್ಲಿ ತಿಳಿಸಬೇಂದು ನಿರ್ದೇಶಿಸಿ, ವಿಚಾರಣೆಯನ್ನು ಆಗಸ್ಟ್​ 11 ಕ್ಕೆ ಮುಂದೂಡಿದೆ, (ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net