IPL 2027 Auction: ವಿದೇಶದಿಂದ ಭಾರತಕ್ಕೆ ವಾಪಸ್‌: ಐಪಿಎಲ್ ಹರಾಜಿನ ಬಗ್ಗೆ ಬಿಸಿಸಿಐ ಮಹತ್ವದ ತೀರ್ಮಾನ!

ಐಪಿಎಲ್ 2027 ಹರಾಜನ್ನು ಭಾರತದಲ್ಲೇ ನಡೆಸಲು ತೀರ್ಮಾನಿಸಿರುವ ಬಿಸಿಸಿಐ
ಐಪಿಎಲ್ 2027 ಹರಾಜನ್ನು ಭಾರತದಲ್ಲೇ ನಡೆಸಲು ತೀರ್ಮಾನಿಸಿರುವ ಬಿಸಿಸಿಐ
Published on
IPL 2027 Auction: ಐಪಿಎಲ್​ ಎಂದರೆ ಅದು ಕೇವಲ ಒಂದು ಕ್ರಿಕೆಟ್​ ಫಾಮ್ಯಾಟ್​​ ಅಲ್ಲ, ಬದಲಿಗೆ ಭಾರತದ ಕೋಟ್ಯಾಂತರ ಕ್ರಿಕೆಟ್​ ಅಭಿಮಾನಿಗಳಿಗೆ ಅದೊಂದು ರೀತಿ ಕ್ರಿಕೆಟ್​ ಉತ್ಸವವಾಗಿದೆ. ಭಾರತದಲ್ಲಿ ಕ್ರಿಕೆಟ್​ನ​ ಚಿತ್ರಣವನ್ನೇ ಬದಲಿಸಿದ ಕೀರ್ತಿ ಈ ಐಪಿಎಲ್​ಗೆ ಸಲ್ಲುತ್ತದೆ. ಪ್ರತಿ ವರ್ಷ ಎರಡು ತಿಂಗಳ ಮಟ್ಟಿಗೆ ನಡೆಯುವ ಈ ಕ್ರಿಕೆಟ್​ ಹಬ್ಬದ ಕುರಿತಂತೆ ಪ್ರಮುಖ ಸುದ್ದಿಯೊಂದು ವರದಿಯಾಗಿದೆ.
ಐಪಿಎಲ್​ ಟೂರ್ನಿ ಪ್ರಾರಂಭಕ್ಕೂ ಪೂರ್ವದಲ್ಲಿ, ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತದೆ. ಇಲ್ಲಿ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಯಾವ-ಯಾವ ಆಟಗಾರರು ಬೇಕೋ ಅವರನ್ನು ಆಯ್ದುಕೊಳ್ಳುತ್ತಾರೆ. ಆದರೆ ಕಳೆದ ಮೂರು ವರ್ಷಗಳಿಂದ ಈ ಹರಾಜು ಪ್ರಕ್ರಿಯೆ ದುಬೈನಲ್ಲಿ ನಡೆಯುತ್ತಿತ್ತು. ಆದರೆ ಈಗ ಹೊರಬಿದ್ದಿರುವ ಮಾಹಿತಿ ಪ್ರಕಾರ, 2027 ರಲ್ಲಿ ನಡೆಯಲಿರುವ ಐಪಿಎಲ್​ನ ಹಜಾರು ಪ್ರಕ್ರಿಯೆ ಭಾರತದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.

ಭಾರತಕ್ಕೆ ಮರಳಿದ ಹಜಾರು ಪ್ರಕ್ರಿಯೆ!

ಮಂಗಳವಾರ (ಸೆ. 15) ರಂದು ನಡೆದ ಬಿಸಿಸಿಐ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತದೆ. 2023 ರಲ್ಲಿ ಕೊನೆಯ ಬಾರಿಗೆ ಕೊಚ್ಚಿಯಲ್ಲಿ ಹರಾಜು ಪ್ರಕ್ರಿಯೆ ಭಾರತದಲ್ಲಿ ನಡೆದಿದ್ದು, ನಂತರ ಇದನ್ನು ದುಬೈಗೆ ಸ್ಥಳಾಂತರ ಮಾಡಲಾಗಿತ್ತು.
ಆದರೆ, ಈಗ ದೊರೆತಿರುವ ಮಾಹಿತಿ ಅನ್ವಯ, 2027 ರ ಐಪಿಎಲ್​ ಹಜಾರು ಪ್ರಕ್ರಿಯೆ ಮಾತ್ರ ಭಾರತದಲ್ಲಿ ನಡೆಯಲಿದೆ. ಆದರೆ ಎಲ್ಲಿ ನಡೆಯಲಿದೆ ಎಂದು ಹೇಳಲು ಸ್ಥಳವನ್ನು ಇನ್ನೂ ನಿಗಧಿಮಾಡಿಲ್ಲ. ಅಂತೆಯೇ 2028 ರಲ್ಲಿ ಮೆಗಾ ಆಕ್ಷನ್​ (ಹರಾಜು) ನಡೆಯಲಿದ್ದು, ಆಗ ಮತ್ತೆ ಈ ಪ್ರಕ್ರಿಯೆ ವಿದೇಶದಲ್ಲೇ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಭಾರತಕ್ಕೆ ಮರಳಲು ಕಾರಣವೇನು?

ಮೂರು ವರ್ಷಗಳಿಂದ ವಿದೇಶದಲ್ಲಿ ನಡೆಯುತ್ತಿದ್ದ ಈ ಪ್ರಕ್ರಿಯೆ ಏಕೆ ಭಾರತಕ್ಕೆ ಮರಳಿದೆ ಎಂಬ ಪ್ರಶ್ನೆ ಮೂಡುವುದು ಸಹಜವಾಗಿದೆ. ಮಾಹಿತಿ ಪ್ರಕಾರ, ಫ್ರಾಂಚೈಸಿಗಳೇ ಈ ಪ್ರಸ್ತಾಪವನ್ನು ಮಾಡಿದ್ದು, ಕೆಲವೇ ದಿನ ನಡೆಯುವ ಈ ಪ್ರಕ್ರಿಯೆಗೆ ಸುಮಾರು 50 ಕ್ಕೂ ಅಧಿಕ ಸಿಬ್ಬಂದಿಗಳನ್ನು ವಿದೇಶಕ್ಕೆ ಕರೆದುಕೊಂಡು ಹೋಗುವುದು, ಅವರ ವಾಸಕ್ಕೆ ವ್ಯವಸ್ಥೆ ಮಾಡುವುದು ಮತ್ತೆ ಭಾರತಕ್ಕೆ ಕರೆತರುವುದು ತಂಡದ ಮಲೀಕರಿಗೆ ಅಧಿಕ ಆರ್ಥಿಕ ಹೊರೆಯಾಗುತ್ತಿದೆ ಎನ್ನಲಾಗಿದೆ.
ಹಾಗೆಯೇ, 2028 ರಲ್ಲಿ ಮೆಗಾ ಆಕ್ಷನ್​, ಇವರು ಕಾರಣ ಈ ಮಿನಿ ಆಕ್ಷನ್​ ಅನ್ನು ಭಾರತದಲ್ಲೇ ನಡೆಸಿದರೆ ಏನು ಸಮಸ್ಯೆಯಾಗುವುದಿಲ್ಲ ಎನ್ನುವುದು ತಂಡದ ಮಾಲೀಕರ ಒತ್ತಾಯವಾಗಿದೆ. ಫ್ರಾಂಚೈಸಿಗಳ ಮಾತನ್ನು ಒಪ್ಪಿಕೊಂಡಿರುವ ಬಿಸಿಸಿಐ ಕೂಡ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆ ಭಾರತದಲ್ಲಿ ನಡೆಸಲು ಮುಂದಾಗಿದೆ ಎನ್ನಲಾಗಿದೆ.

ಇಂಪ್ಯಾಕ್ಟ್​ ಪ್ಲೇಯರ್​ ಬಗ್ಗೆ ನಿರ್ಧಾರವಾಗಿಲ್ಲ!

ಮಂಗಳವಾರ ನಡೆದ ಬಿಸಿಸಿಐ ಸಭೆಯಲ್ಲಿ ಕೇವಲ ಆಟಗಾರರ ಹರಾಜಿನ ಬಗ್ಗೆ ಮಾತ್ರ ಚರ್ಚೆ ನಡೆದಿದ್ದು, ಐಪಿಎಲ್​ನಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಇಂಪ್ಯಾಕ್ಟ್​ ಪ್ಲೇಯರ್ ನಿಯಮದ ಕುರಿತು ಯಾವುದೇ ಚರ್ಚೆಯಾಗಿಲ್ಲ ಎನ್ನಲಾಗಿದೆ.
ಭಾರತ ತಂಡದ ಹಾಗೂ ಐಪಿಎಲ್​ನ ಸ್ಟಾರ್​ ಆಟಗಾರರಾದ ಶುಭಮನ್​ ಗಿಲ್​, ರೋಹಿತ್​ ಶರ್ಮಾ ಸೇರಿದಂತೆ ಹಲವು ಆಟಗಾರರು ಈ ನಿಯಮವನ್ನು ರದ್ದುಪಡಿಸಬೇಕೆಂದು ಹೇಳಿದ್ದರು. ಈ ನಿಯಮದಿಂದಾಗಿ, ಆಲ್​-ರೌಂಡರ್​ ಆಟಗಾರರಿಗೆ ಅನ್ಯಾಯವಾಗುತ್ತಿದೆ, ಐಪಿಎಲ್​ ಎಂದರೆ ಕೇವಲ ಬ್ಯಾಟರ್​ಗಳ ಟೂರ್ನಿ ಎನ್ನುವ ಹಣೆಪಟ್ಟಿ ಬರುತ್ತಿದೆ ಎಂದು ಅನೇಕ ಮಾಜಿ ಆಟಗಾರರು ವಿರೋಧ ವ್ಯಕ್ತಪಡಿಸಿದ್ದರು.
ಹೀಗಾಗಿ ಬಿಸಿಸಿಐ ನ ಮುಂದಿನ ಸಭೆಗಳಲ್ಲಿ ಈ ವಿವಾದಾತ್ಮಕ ಇಂಪ್ಯಾಕ್ಟ್​ ಪ್ಲೇಯರ್​ ನಿಯಮದ ಮುಂದುವರಿಕೆ, ಬದಲಾವಣೆ ಅಥವಾ ರದ್ದತಿ ಕುರಿತಂತೆ ತೀರ್ಮಾನವಾಗಲಿದೆ ಎಂದು ಹೇಳಬಹುದಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net