ಓಟಿಟಿಗೆ ಲಗ್ಗೆಯಿಡಲು ಸಜ್ಜಾದ ಸೂರ್ಯ, ತ್ರಿಷಾ ಅಭಿನಯದ Karuppu ಸಿನಿಮಾ: ಯಾವ ಫ್ಲಾಟ್​ಫಾರ್ಮ್​ನಲ್ಲಿ, ಎಂದು ರಿಲೀಸ್​ ಆಗಲಿದೆ?

Karuppu OTT release date
Karuppu OTT release date
Published on

ಪ್ರಮುಖ ಮುಖ್ಯಾಂಶಗಳು

  • ಜೂನ್​​ 2ನೇ ವಾರದೊಳಗೆ ಸೂರ್ಯ ಅಭಿನಯದ ಕರುಪ್ಪು ಸಿನಿಮಾ ರಿಲೀಸ್.
  • ನೆಟ್​ಫ್ಲಿಕ್ಸ್ ಕರುಪ್ಪು ಸಿನಿಮಾವನ್ನು ಭಾರಿ ಮೊತ್ತಕ್ಕೆ ಖರೀದಿಸಿದೆ ಎನ್ನಲಾಗುತ್ತಿದೆ.
  • ತ್ರಿಷಾ, ಸೂರ್ಯ ಅಭಿನಯದ ಚೊಚ್ಚಲ ಸಿನಿಮಾ ಕರುಪ್ಪುಗೆ ಉತ್ತಮ ಪ್ರತಿಕ್ರಿಯೆ.
Karuppu OTT Release: ನಟ ಸೂರ್ಯ ಮತ್ತು ದಕ್ಷಿಣ ಭಾರರತದ ಹೆಸರಾಂತ ನಟಿ ತ್ರಿಷಾ ನಟನೆಯ ಕರುಪ್ಪು ಸಿನಿಮಾ ಮೇ.15ಕ್ಕೆ ಬೆಳ್ಳಿ ತೆರೆ ಮೇಲೆ ಅಬ್ಬರಿಸಿತ್ತು.  ಸಿನಿಮಾಗೆ ಪಾಸಿಟಿವ್​ ಮತ್ತು ನೆಗೆಟಿವ್​ ರಿಯಾಕ್ಷನ್​ಗಳು ಎರಡು ಕೇಳಿ ಬರುತ್ತಿದೆ. ಸ್ಟಾರ್​ ನಟ ಇಂತಹ ಸಿನಿಮಾ ಒಪ್ಪಿಕೊಳ್ಳಬಾರದಿತ್ತು ಎಂದರೆ, ಇನ್ನು ಕೆಲವರು ಒಳ್ಳೆ ಕಂಬ್ಯಾಕ್ ಎನ್ನುತ್ತಿದ್ದಾರೆ. ಈ ಮಧ್ಯೆ ಸಿನಿಮಾ ಓಟಿಟಿಗೆ ರೀಲಿಸ್​ ಆಗುವ ಮಾಹಿತಿ ಹೊರಬಿದ್ದಿದೆ.

ನೆಟ್​ಪ್ಲಿಕ್ಸ್​ನಲ್ಲಿ ನೋಡಿ?

ಆರ್​ಜೆ ಬಾಲಾಜಿ ನಿರ್ದೇಶನ ಮತ್ತು ಸಾಯಿ ಅಭಯಂಕರ್​ ಅವರ ಸಂಗೀತದ ಸಿನಿಮಾ ಕರುಪ್ಪು ಸಾಕಷ್ಟು ಗೊಂದಲಗಳ ಮಧ್ಯೆ ಬಾಕ್ಸ್​​ ಆಫೀಸ್​ನಲ್ಲಿ ಭಾರಿ ಗಳಿಕೆಯನ್ನು ಕಾಣುತ್ತಿದೆ. ನೆಟ್​​ಫ್ಲಿಕ್ಸ್ ಭಾರಿ ಮೊತ್ತಕ್ಕೆ ಕರುಪ್ಪು ಸಿನಿಮಾವನ್ನು ಖರೀದಿ ಮಾಡಿದೆ ಎನ್ನಲಾಗುತ್ತಿದೆ. ಈ ಹಿಂದೆ ಅಮೆಜಾನ್​ ಸಹ ಖರೀದಿಸುವ ರೇಸ್​​ನಲ್ಲಿತ್ತು ಎನ್ನುವ ಉಹಾಪೋಹವಿತ್ತು. ಆದರೆ ಅಂತಿಮವಾಗಿ ನೆಟ್​ಫ್ಲಿಕ್ಸ್​ನಲ್ಲಿ ನೋಡಬಹುದು.​  ಆದರೆ, ಈ ಬಗ್ಗೆ ಕರುಪ್ಪು ಸಿನಿಮಾ ತಂಡವಾಗಲಿ, ಓಟಿಟಿ ಪ್ಲ್ಯಾಟ್​​ಫಾರ್ಮ್​ ಆಗಲಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. 

ಎಂದು ರಿಲೀಸ್?

ಕರುಪ್ಪು ಸಿನಿಮಾವು ರಿಲೀಸ್ ಆಗಿ ನಾಲ್ಕುವಾರದ ನಂತರ ಅಂದರೆ ಜೂನ್​ 2ನೇ ವಾರದಲ್ಲಿ ಓಟಿಟಿಯಲ್ಲಿ ನೋಡಬಹುದು. ಸಿನಿಮಾಗೆ ಥಿಯೇಟರ್​ಗಳಲ್ಲು ಹೆಚ್ಚಾಗಿಯೇ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ತ್ರಿಷಾ, ಸೂರ್ಯ, ಆರ್​ಜೆ ಬಾಲಾಜಿಯವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕರುಪ್ಪು ಸಿನಿಮಾದ ಕಲೆಕ್ಷನ್ ಹೇಗಿದೆ?

ಕರುಪ್ಪು ಸಿನಿಮಾವು ಮೊದಲ ದಿನ 15.5 ಕೋಟಿ ಗಳಿಕೆ ಮಾಡಿದೆ. ಮೂರನೇ ದಿನ24.15 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ಕರುಪ್ಪು ಸಿನಿಮಾ ಮೇ.14ರಂದೇ ರಿಲೀಸ್​ ಆಗಬೇಕಿತ್ತು. 9 ಗಂಟೆಗೆ ವಿಶೇಷ ಪ್ರದರ್ಶನಕ್ಕೆ ಸಿಎಂ ವಿಜಯ್​ ಅವರು ಅಸ್ತು ಎಂದಿದ್ದರು. ಈ ಮಧ್ಯೆ ಕಾರಣಾಂತರಗಳಿಂದ ಅಂದು ಶೋ ರದ್ದಾಯಿತು.

ಕರುಪ್ಪು ಸಿನಿಮಾದ ಕತೆಯೇನು? 

ಭ್ರಷ್ಟ ಕಾನೂನು ವ್ಯವಸ್ಥೆ ಬಗ್ಗೆ ಹೋರಾಡುವ ಜನರ ಬಗ್ಗೆ ಕತೆ ಇದು. ಅನ್ಯಾಯ ಹೆಚ್ಚಾಗುತ್ತಲೇ  ಸಮಸ್ಯೆ ಪರಿಹರಿಸಲು ಸಾಧ್ಯವಾಗದೆ ಇದ್ದಾಗ ದೇವರ ರೂಪದಲ್ಲಿ 'ವೆಟ್ಟೈ ಕರುಪ್ಪುಸ್ವಾಮಿ' ಅದೇ ಸೂರ್ಯ ಎಂಟ್ರಿ ಕೊಡುತ್ತಾರೆ. ಮುಂದೇನಾಗುತ್ತದೆ ಎನ್ನುವುದೇ ಕತೆಯ ಹಂದರ. ಈ  ಸಿನಿಮಾದಲ್ಲಿ ಎಂದಿನಂತೆ ತಮ್ಮದೇ ಚಾರ್ಮ್​ ಲುಕ್​ನಲ್ಲಿ ತ್ರಿಷಾ ವಕೀಲೆಯಾಗಿ ನಟಿಸಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net