ಬಿಗ್​ಬಾಸ್​ ಸೀಸನ್​ 12ರ ವಿನ್ನರ್​ ಗಿಲ್ಲಿನಾ? ಅಶ್ವಿನಿನಾ? ಗೂಗಲ್ ಕೊಟ್ಟ ಅಚ್ಚರಿ ಉತ್ತರ ಇಲ್ಲಿದೆ ನೋಡಿ... BBK 12

ಬಿಗ್​ಬಾಸ್​ ಸೀಸನ್​ 12ರ ಸ್ಪರ್ಧಿಗಳಾದ ಗಿಲ್ಲಿ ಹಾಗೂ ಅಶ್ವಿನಿ ಗೌಡ
ಬಿಗ್​ಬಾಸ್​ ಸೀಸನ್​ 12ರ ಸ್ಪರ್ಧಿಗಳಾದ ಗಿಲ್ಲಿ ಹಾಗೂ ಅಶ್ವಿನಿ ಗೌಡ
Published on

ಪ್ರಮುಖ ಮುಖ್ಯಾಂಶಗಳು

  • ಬಿಗ್​ಬಾಸ್​ ಶೋ ಕನ್ನಡ ಕಿರುತೆರೆ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ
  • ವಿವಾದಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುವ ಈ ಶೋ ಭಾರಿ ಜನಪ್ರಿಯತೆ ಪಡೆದುಕೊಂಡಿದೆ
  • ಪ್ರಸ್ತುತ ನಡೆಯುತ್ತಿರುವ 12ನೇ ಆವೃತ್ತಿಯು ಅಂತಿಮ ಹಂತಕ್ಕೆ ಬಂದಿದೆ
  • ಜನವರಿ 18ರಂದು ನಡೆಯಲಿರುವ ಫಿನಾಲೆಯಲ್ಲಿ ವಿನ್ನರ ಯಾರು ಎಂಬುದು ಅಧಿಕೃತ ಘೋಷಣೆಯಾಗಲಿದೆ
ಬೆಂಗಳೂರು: ಬಿಗ್​ಬಾಸ್​ ಶೋ ( BBK 12 ) ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇದು ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ. ವಿವಾದಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುವ ಈ ಶೋ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಪ್ರಸ್ತುತ ನಡೆಯುತ್ತಿರುವ 12ನೇ ಆವೃತ್ತಿಯು ಅಂತಿಮ ಹಂತಕ್ಕೆ ಬಂದಿದೆ. ಇನ್ನೂ ಎರಡು ದಿನದಲ್ಲಿ ತೆರೆಬೀಳಲಿದ್ದು, ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ. ಅಷ್ಟರಲ್ಲೇ ಹಾಸ್ಯ ಕಲಾವಿದ ಗಿಲ್ಲಿ ಗೆದ್ದಿದ್ದಾರೆ ಎಂದು ಹೇಳಲಾಗುತ್ತಿದೆ.
ಅರೇ ಇನ್ನು ಘೋಷಣೆಯೇ ಆಗಿಲ್ಲ ಅಷ್ಟರಲ್ಲಿ ಗಿಲ್ಲಿ ಗೆಲ್ಲಲು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಉತ್ತರ ತಿಳಿಯಬೇಕಾದರೆ ಮುಂದಿದೆ. ಅಷ್ಟಕ್ಕೂ ಗಿಲ್ಲಿ ಗೆದ್ದಿದ್ದಾರೆ ಅಂತ ಕಲರ್ಸ್​ ಕನ್ನಡ ಆಗಲಿ, ನಾವಾಗಲಿ ಹೇಳುತ್ತಿಲ್ಲ. ಜನರಿಗೆ ಏನೇ ಸಂದೇಹಗಳಿದರೂ ಮೊದಲು ಸರ್ಚ್​ ಮಾಡುವ ಗೂಗಲ್ಲೇ (Google) ಇಂಥದ್ದೊಂದು ಉತ್ತರವನ್ನು ತಮ್ಮ ಪೇಜ್​ನಲ್ಲಿ ಪ್ರದರ್ಶಿಸುತ್ತಿದೆ. ಇದನ್ನು ಕೇಳಿ ನಿಮಗೆ ಅಚ್ಚರಿ ಎನಿಸಬಹುದು. ಆದರೆ, ಇದೇ ಸತ್ಯ.
ಹೌದು, ಬಿಗ್​ಬಾಸ್​ ಸೀಸನ್​ 12ರ ವಿನ್ನರ್​ ಗಿಲ್ಲಿ ನಟ ಎಂದು ಗೂಗಲ್​ ತೋರಿಸುತ್ತಿದೆ. ಗೂಗಲ್​ ಸರ್ಚ್​ ಇಂಜಿನ್​ನಲ್ಲಿ ಬಿಗ್​ಬಾಸ್​ ಸೀಸನ್​ 12ರ ವಿನ್ನರ್​ ಯಾರು ಎಂದು ಇಂಗ್ಲಿಷ್​ನಲ್ಲಿ ಟೈಪ್​ ಮಾಡಿ, ಸರ್ಚ್​ ಮಾಡಿದರೆ, ಗಿಲ್ಲಿ ಎಂಬ ಉತ್ತರ ಗೂಗಲ್​ ಪುಟದಲ್ಲಿ ತೆರೆದುಕೊಳ್ಳುತ್ತಿದೆ. ಈಗಾಗಲೇ ಬಹುತೇಕ ಜನರ ಅಭಿಪ್ರಾಯ ಗಿಲ್ಲಿ ಪರವಾಗಿಯೇ ಇದೆ. ಗಿಲ್ಲಿಯೇ ವಿನ್ನರ್​ ಎಂದು ಹೆಚ್ಚಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಇದೀಗ ಗೂಗಲ್​ ಕೂಡ ಗಿಲ್ಲಿನೇ ವಿನ್ನರ್​ ಎಂದು ತೋರಿಸುತ್ತಿದೆ. ಹೀಗಾಗಿ, ಈ ಬಾರಿ ಗಿಲ್ಲಿ ಗೆಲ್ಲುವುದು ಖಚಿತ, ಅಧಿಕೃತ ಘೋಷಣೆಯೊಂದೇ ಬಾಕಿ ಎಂಬ ಮಾತುಗಳು ಕೇಳಿಬರುತ್ತಿವೆ.
ವಿನ್ನರ್​ ಗಿಲ್ಲಿ ಎಂದು ತೋರಿಸುತ್ತಿರುವ ಗೂಗಲ್​, ರನ್ನರ್​ ಅಪ್​ ಆಗಿ ಅಶ್ವಿನಿ ಗೌಡ ಹೆಸರನ್ನು ತೋರಿಸುತ್ತಿದೆ. ಇದು ಎಷ್ಟು ನಿಜ ಎಂದು ಗೊತ್ತಾಗಬೇಕಾದರೆ, ಈ ವೀಕೆಂಡ್​ವರೆಗೆ ಕಾಯಬೇಕಿದೆ. ಏಕೆಂದರೆ, ಇದೇ ವೀಕೆಂಡ್ ಗ್ರ್ಯಾಂಡ್​ ಫಿನಾಲೆಯಲ್ಲಿ ನಡೆಯಲಿದೆ. ಈ ವೇಳೆ ಬಿಗ್​ಬಾಸ್ 12ರ ವಿನ್ನರ್ ಹೆಸರನ್ನು ನಿರೂಪಕ ಕಿಚ್ಚ ಸುದೀಪ್ ಅವರು ಘೋಷಣೆ ಮಾಡಲಿದ್ದಾರೆ. ಆದರೆ, ಅಧಿಕೃತವಾಗಿ ಬಿಗ್​ಬಾಸ್ ಟೀಮ್​ ಘೋಷಣೆ ಮಾಡುವುದಕ್ಕೂ ಮುಂಚೆಯೇ ವಿನ್ನರ್ ಯಾರು ಎಂದು ಗೂಗಲ್​ ಹೇಳಿದೆ. ಆದರೂ, ಜನರಲ್ಲಿ ಕುತೂಹಲ ಹಾಗೇ ಉಳಿದಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net