ಯಾವುದೇ ನಟನಿಗೆ ಡಿವೋರ್ಸ್​ ಆದ್ರೂ ಅಲ್ಲಿ ನನ್ನ ಹೆಸರೇ ಕೇಳಿಬರುತ್ತೆ... ನಟಿ ಮೀನಾ ಬೇಸರ! Actress Meena

ನಟಿ ಮೀನಾ
ನಟಿ ಮೀನಾ
Published on

ಪ್ರಮುಖ ಮುಖ್ಯಾಂಶಗಳು

  • 90ರ ದಶಕದ ಬಹುಬೇಡಿಕೆ ನಟಿ ಮೀನಾ ಇಂದಿಗೂ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ
  • ಕೇವಲ ಸಾಂಪ್ರದಾಯಿಕ ಪಾತ್ರಗಳಲ್ಲದೆ ಬೋಲ್ಡ್​ ಪಾತ್ರಗಳಲ್ಲೂ ನಟಿ ಮೀನಾ ನಟಿಸಿದ್ದಾರೆ
  • 2022ರಲ್ಲಿ ಮೀನಾ ಅವರ ಪತಿ ವಿದ್ಯಾ ಸಾಗರ್ ಅನಾರೋಗ್ಯಕ್ಕೆ ಒಳಗಾಗಿ ನಿಧನರಾದರು
  • ತಮ್ಮ ಎರಡನೇ ಮದುವೆ ಬಗ್ಗೆ ಸದಾ ಕೇಳಿಬರುವ ವದಂತಿಗಳಿಗೆ ಮೀನಾ ಮೌನ ಮುರಿದಿದ್ದಾರೆ
ಚೆನ್ನೈ: ಖ್ಯಾತ ಬಹುಭಾಷಾ ನಟಿ ಹಾಗೂ 90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿ ರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ಮೀನಾ ( Actress Meena ), ಇಂದಿಗೂ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಮೀನಾ ಅವರು 90ರ ದಶಕದಲ್ಲಿ ಸಿನಿರಸಿಕರ ಕನಸಿನ ಕನ್ಯೆಯಾಗಿದ್ದರು. ರಜಿನಿಕಾಂತ್​, ಕಮಲ್​ ಹಾಸನ್​ ಹಾಗೂ ಕನ್ನಡದಲ್ಲಿ ವಿಷ್ಣುವರ್ಧನ್​ ಹಾಗೂ ರವಿಚಂದ್ರನ್​ರಂತಹ ಪ್ರಮುಖ ನಟರೊಂದಿಗೆ ನಟಿಸಿದ್ದಾರೆ. ಕೇವಲ ಸಾಂಪ್ರದಾಯಿಕ ಪಾತ್ರಗಳಲ್ಲದೆ ಬೋಲ್ಡ್​ ಪಾತ್ರಗಳಲ್ಲೂ ನಟಿ ಮೀನಾ ನಟಿಸಿದ್ದಾರೆ.
ವೃತ್ತಿಜೀವನದ ಉತ್ತುಂಗದಲ್ಲಿ ಇರುವಾಗಲೇ ಮೀನಾ ಅವರು ಉದ್ಯಮಿ ವಿದ್ಯಾಸಾಗರ್ ಅವರನ್ನು ವಿವಾಹವಾದರು. ದಂಪತಿಗೆ ನೈನಿಕಾ ಎಂಬ ಮಗಳಿದ್ದಾಳೆ. ಹೀಗಿರುವಾಗ ಮೀನಾ ಬಾಳಲ್ಲಿ ದುರಂತವೊಂದು ಘಟಿಸಿತು. ಅದೇನೆಂದರೆ, 2022ರಲ್ಲಿ ಮೀನಾ ಅವರ ಪತಿ ವಿದ್ಯಾ ಸಾಗರ್ ಅನಾರೋಗ್ಯಕ್ಕೆ ಒಳಗಾಗಿ ನಿಧನರಾದರು. ಸದ್ಯ ಮೀನಾ ಅವರು ತಮ್ಮ ಮಗಳೊಂದಿಗೆ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದಾರೆ ಮತ್ತು ಬಣ್ಣದ ಜಗತ್ತಿನಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ.
ಅಂದಹಾಗೆ, ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಬಿಜಿಯಾಗಿರುವ ಮೀನಾ ಅವರಿಗೆ ಆಗಾಗ ಒಂದು ವಿಚಾರ ಕಾಡುತ್ತಲೇ ಇರುತ್ತದೆ. ಅದೇನೆಂದರೆ, ಎರಡನೇ ಮದುವೆ ಕುರಿತಾದ ವದಂತಿಗಳು ಹೆಚ್ಚಾಗಿ ಹರಡುತ್ತಲೇ ಇರುತ್ತವೆ. ಹಿಂದೊಮ್ಮೆ ನಟ ಧನುಷ್​ ಜತೆ ಮೀನಾ ಅವರ ಹೆಸರು ಕೇಳಿಬಂದಿತ್ತು. ಹಲವು ಯೂಟ್ಯೂಬ್​​ ಚಾನೆಲ್​ಗಳಲ್ಲಿ ಈ ಬಗ್ಗೆ ಪ್ರಸ್ತಾಪ ಆಗಿತ್ತು. ಆದರೆ, ಇದುವರೆಗೂ ಮೀನಾ ಮಾತ್ರ ಎಲ್ಲಿಯೂ ಸ್ಪಷ್ಟನೆ ನೀಡುವ ಗೋಜಿಗೆ ಹೋಗಲಿಲ್ಲ. ಆದರೆ, ಮೊದಲ ಬಾರಿಗೆ ಎರಡನೇ ಮದುವೆ ಬಗ್ಗೆ ಮೀನಾ ಮೌನ ಮುರಿದಿದ್ದಾರೆ.
ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಮೀನಾ, ಈ ಜನರು ನನ್ನನ್ನೇಕೆ ಅರ್ಥಮಾಡಿಕೊಳ್ಳುವುದಿಲ್ಲ? ಅವರು ಯಾವಾಗಲೂ ನನ್ನ ಮದುವೆಯ ಬಗ್ಗೆಯೇ ಮಾತನಾಡುತ್ತಾರೆ. ನನಗೆ ಏನು ಆಸಕ್ತಿ ಇದೆ ಎಂದು ಅವರಿಗೆ ಅರ್ಥವಾಗುವುದಿಲ್ಲ. ಪ್ರಸ್ತುತ, ನಾನು ನನ್ನ ಮಗಳೊಂದಿಗೆ ತುಂಬಾ ಸಂತೋಷದಿಂದ ಬದುಕುತ್ತಿದ್ದೇನೆ. ಇನ್ನೊಂದು ಮದುವೆ ಆಗಬೇಕೆಂಬ ಯೋಚನೆ ನನಗಿಲ್ಲ. ಆದರೆ, ಯಾವಾಗಲೂ ನನ್ನ ಬಗ್ಗೆ ಒಂದಲ್ಲ ಒಂದು ರೀತಿಯಲ್ಲಿ ಜನರು ಮಾತನಾಡುತ್ತಾರೆ ಎಂದು ಬೇಸರ ಹೊರಹಾಕಿದರು.
ಡಿವೋರ್ಸ್​​ ಪಡೆಯುವ ಯಾವುದೇ ನಾಯಕನ ಜೊತೆ ನನ್ನನ್ನು ತಳುಕು ಹಾಕಲಾಗುತ್ತಿದೆ. ನಾನು ಆ ನಟನನ್ನು ಮದುವೆಯಾಗುತ್ತಿದ್ದೇನೆ ಎಂದು ವದಂತಿಗಳನ್ನು ಹರಡುತ್ತಾರೆ. ಆದರೆ, ಅದರಲ್ಲಿ ಯಾವುದೇ ಸತ್ಯವಿಲ್ಲ. ಪ್ರಸ್ತುತ ನನಗೆ ನಟಿಯಾಗಿ ಉತ್ತಮ ಅವಕಾಶಗಳು ಸಿಗುತ್ತಿವೆ. ನಟಿಯಾಗಿ, ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ನೀಡುವ ಕಥೆಗಳನ್ನು ನಾನು ಆಯ್ಕೆ ಮಾಡುತ್ತಿದ್ದೇನೆ ಎಂದು ಮೀನಾ ಅವರು ಹೇಳಿದರು.
ಅಂದಹಾಗೆ, ಈ ಹಿಂದೆ ಸಿನಿಮಾ ವಿಮರ್ಶಕ ಮತ್ತು ನಟ ಬೈಲ್ವಾನ್​ ರಂಗನಾಥನ್​ ಅವರು ಮೀನಾ ಅವರ ಎರಡನೇ ವಿವಾಹದ ಬಗ್ಗೆ ಮಾತನಾಡಿದರು. ಅಂದಿನಿಂದ ಮೀನಾ ಅವರ ಮದುವೆ ವದಂತಿ ಆಗಾಗ ಹರಡುತ್ತಲೇ ಇದೆ. ತನ್ನ ಪತ್ನಿಯಿಂದ ವಿಚ್ಛೇದನ ಪಡೆದ ಪ್ಯಾನ್ ಇಂಡಿಯಾ ನಾಯಕ ಧನುಷ್​ ಮತ್ತು ಮೀನಾ ಶೀಘ್ರದಲ್ಲೇ ಎರಡನೇ ಬಾರಿಗೆ ಮದುವೆಯಾಗಲಿದ್ದಾರೆ ಎಂದು ರಂಗನಾಥನ್​ ಬಹಿರಂಗ ಹೇಳಿಕೆ ನೀಡಿದ್ದ. ಅಂದಿನಿಂದ, ಮೀನಾ ಅವರ ಎರಡನೇ ವಿವಾಹದ ಸುದ್ದಿಗಳು ಆಗಾಗ ಕೇಳಿಬರುತ್ತಿವೆ. ಇದೀಗ ಆ ವಂದತಿಗಳಿಗೆ ಮೀನಾ ಅವರು ತೆರೆ ಎಳೆದಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net