ಮದುವೆಯ ಬಳಿಕ, ಮಾರ್ಚ್ 4ರಂದು ಹೈದರಾಬಾದ್ನ ಖಾಸಗಿ ಹೋಟೆಲ್ನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ಈ ವೇಳೆ ಟಾಲಿವುಡ್ ಸೇರಿದಂತೆ ವಿವಿಧ ಸಿನಿಮಾ ರಂಗದ ಗಣ್ಯರು ಆರತಕ್ಷತೆಗೆ ಆಗಮಿಸಿ, ನವಜೋಡಿಗೆ ಶುಭ ಹಾರೈಸಲಿದ್ದಾರೆ. ಈಗಾಗಲೇ ವಿಜಯ್-ರಶ್ಮಿಕಾ ಮನೆಯಲ್ಲಿ ಮದುವೆ ಸಿದ್ಧತೆಯು ಅಂತಿಮ ಹಂತಕ್ಕೆ ಬಂದಿದೆ. ವಿಜಯ್ ಮನೆಯಲ್ಲಿ ಲೈಟಿಂಗ್ಸ್ ಅಲಂಕಾರಗಳನ್ನು ಮಾಡಲಾಗಿದ್ದು, ಮದುವೆಯ ಕಾರ್ಡ್ಗಳನ್ನು ಸಹ ವಿತರಿಸಲಾಗುತ್ತಿದೆ.