ಗಂಡನ ಜತೆ ವಿಡಿಯೋ ಕಾಲ್​ನಲ್ಲಿ ಮಾತನಾಡಿದ ಬೆನ್ನಲ್ಲೇ ಸಾವಿಗೆ ಶರಣಾದ ಕಿರುತೆರೆ ನಟಿ ಸುಭಾಷಿಣಿ! Actress Subashini Death

ಗಂಡನ ಜತೆ ವಿಡಿಯೋ ಕಾಲ್​ನಲ್ಲಿ ಮಾತನಾಡಿದ ಬೆನ್ನಲ್ಲೇ ಸಾವಿಗೆ ಶರಣಾದ ಕಿರುತೆರೆ ನಟಿ ಸುಭಾಷಿಣಿ! Actress Subashini Death
ಗಂಡನ ಜತೆ ವಿಡಿಯೋ ಕಾಲ್​ನಲ್ಲಿ ಮಾತನಾಡಿದ ಬೆನ್ನಲ್ಲೇ ಸಾವಿಗೆ ಶರಣಾದ ಕಿರುತೆರೆ ನಟಿ ಸುಭಾಷಿಣಿ! Actress Subashini Death
Published on

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡಿನ ಜನಪ್ರಿಯ ಕಿರುತೆರೆ ನಟಿ ಸುಭಾಷಿಣಿ ಸಾವಿಗೆ ಶರಣು
  • ನಟಿಯ ಸಾವಿನಿಂದ ಕಾಲಿವುಡ್​ ಮನರಂಜನಾ ಲೋಕಕ್ಕೆ ಬಡಿದ ಬರಸಿಡಿಲು
  • ಶೂಟಿಂಗ್​ಗೆಂದು ಚೆನ್ನೈ ಬಂದ ಸುಭಾಷಿಣಿ ಅಪಾರ್ಟ್​ಮೆಂಟ್​ನಲ್ಲಿ ಆತ್ಮಹತ್ಯೆ
  • ಗಂಡನ ಜತೆ ವಿಡಿಯೋ ಕರೆಯಲ್ಲಿ ಮಾತನಾಡಿದ ಕೆಲವೇ ಕ್ಷಣಗಳಲ್ಲಿ ನೇಣಿಗೆ ಕೊರಳೊಡ್ಡಿದ ಸುಭಾಷಿಣಿ
Actress Subashini Death : ತಮಿಳುನಾಡಿನ ಜನಪ್ರಿಯ ಕಿರುತೆರೆ ನಟಿ ಸುಭಾಷಿಣಿ ಅವರು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಈ ಆಘಾತಕಾರಿ ಸುದ್ದಿ ಕಾಲಿವುಡ್​ ಮನರಂಜನಾ ಲೋಕಕ್ಕೆ ಬರಸಿಡಿಲು ಬಡಿದಂತಾಗಿದೆ.
36 ವರ್ಷದ ನಟಿ ಸುಭಾಷಿಣಿ ಅವರು ಚೆನ್ನೈನ ಪೋರೂರ್ ಬಳಿಯ ಜನಪ್ರಿಯ ಅಪಾರ್ಟ್‌ಮೆಂಟ್​ನಲ್ಲಿ ತಂಗಿದ್ದರು. ಮೂಲತಃ ಶ್ರೀಲಂಕಾದವರಾದ ಸುಭಾಷಿಣಿ, ಚಿತ್ರೀಕರಣದ ನಿಮಿತ್ತ ಅಪಾರ್ಟ್‌ಮೆಂಟ್​ನಲ್ಲಿ ಉಳಿದುಕೊಂಡಿದ್ದರು. ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ತಮ್ಮ ಕೋಣೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಅವರ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸುಭಾಷಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಕೊಲೆಯಾಗಿದ್ದಾರೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆರಂಭಿಕ ತನಿಖೆಯಲ್ಲಿ, ಸುಭಾಷಿಣಿ ಅವರು ತಮ್ಮ ಪತಿಯೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡಿದ ಬೆನ್ನಲ್ಲೇ ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಕೌಟುಂಬಿಕ ಕಲಹದಿಂದ ಉಂಟಾದ ಒತ್ತಡದಿಂದಾಗಿ ಅವರು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಪತಿಯೊಂದಿಗೆ ವಾಸಿಸುತ್ತಿದ್ದ ನಟಿ ಸುಭಾಷಿಣಿ, ಶೂಟಿಂಗ್‌ಗಾಗಿ ತಮಿಳುನಾಡಿಗೆ ಬಂದಿದ್ದರು. ಆದರೆ, ಶೂಟಿಂಗ್​ ನಡುವೆಯೇ ಸಾವಿಗೆ ಶರಣಾಗಿದ್ದು, ಈ ಸುದ್ದಿ ಭಾರಿ ಸಂಚಲನ ಮೂಡಿಸಿದೆ. ಸುಭಾಷಿಣಿ ಅವರು 'ಖಯಾಲ್' ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಹೀಗಾಗಿ, ಖಯಾಲ್​ ಎಂದೇ ತಮಿಳುನಾಡಿನಲ್ಲಿ ಖ್ಯಾತಿ ಗಳಿಸಿದ್ದರು. ಅಲ್ಲದೆ, ಸಿನಿಮಾಗಳಲ್ಲಿಯೂ ನಟಿಸಿದ್ದರು.
ಇನ್​ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳಲ್ಲಿಯೂ ಬಹಳ ಜನಪ್ರಿಯತೆ ಗಳಿಸಿದ್ದರು. ಇದೀಗ ಸುಭಾಷಿಣಿ ಆತ್ಮಹತ್ಯೆ ಮಾಡಿಕೊಂಡಿರುವುದು ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ. ಇದೀಗ ಅವರ ಸಾವಿಗೆ ನಿಖರ ಕಾರಣ ಏನು ಅನ್ನೋದು ತನಿಖೆಯಿಂದ ತಿಳಿದುಬರಬೇಕಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net