ಈ ದಂಪತಿಗೆ ಆರ್ಯನ್, ಸುಹಾನಾ ಮತ್ತು ಅಬ್ರಾಮ್ ಎಂಬ ಮೂವರು ಮಕ್ಕಳಿದ್ದಾರೆ. ತಂದೆ-ತಾಯಿ ಇಬ್ಬರ ಧರ್ಮಗಳನ್ನೂ ಮಕ್ಕಳು ಸಮಾನವಾಗಿ ಗೌರವಿಸುತ್ತಾರೆ. ಮನೆಯಲ್ಲಿ ಹಬ್ಬಗಳನ್ನು ಆಚರಿಸುವ ಬಗ್ಗೆ ಮಾತನಾಡಿರುವ ಗೌರಿ, ನಮ್ಮ ಮನೆಯಲ್ಲಿ ದೀಪಾವಳಿ ಬಂದರೆ ನಾನು ಪೂಜೆಯ ನೇತೃತ್ವ ವಹಿಸುತ್ತೇನೆ, ಉಳಿದವರು ನನ್ನನ್ನು ಹಿಂಬಾಲಿಸುತ್ತಾರೆ. ಅದೇ ರೀತಿ ಈದ್ ಹಬ್ಬ ಬಂದರೆ ಶಾರುಖ್ ಮುಂದೆ ನಿಲ್ಲುತ್ತಾರೆ, ನಾವೆಲ್ಲರೂ ಜೊತೆಯಾಗುತ್ತೇವೆ. ಮಕ್ಕಳು ಎರಡೂ ಹಬ್ಬಗಳನ್ನು ಅಷ್ಟೇ ಸಡಗರದಿಂದ ಆಚರಿಸುತ್ತಾರೆ," ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ (ಏಜೆನ್ಸೀಸ್).