ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಟ ಸಲ್ಮಾನ್ ಖಾನ್ ತುಂಬಾ ತೆಳ್ಳಗೆ ಕಾಣಿಸಿಕೊಂಡಿದ್ದಾರೆ. ಕ್ಲೀನ್-ಶೇವ್ ಮಾಡಿರುವ ಅವರ ಈ ಹೊಸ ಲುಕ್ ಹಾಗೂ ಆಯಾಸವಾದಂತಹ ಅವರ ಕಣ್ಣುಗಳು ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದಾಗ್ಯೂ, ಕಾರ್ಯಕ್ರಮದಲ್ಲಿ ತಿಳಿ ಬಣ್ಣದ ಶರ್ಟ್ ಮತ್ತು ಬ್ಲೂ ಜೀನ್ಸ್ ಧರಿಸಿದ್ದ ಅವರು ಅಲ್ಲಿದ್ದ ಜನರೊಂದಿಗೆ ಸಂವಹನ ನಡೆಸುತ್ತಿದ್ದು, ಅವರ ಮುಖದಲ್ಲಿನ ಬದಲಾವಣೆಗಳು ನೆಟ್ಟಿಗರ ಗಮನ ಸೆಳೆದಿದೆ.