ತಿಹಾರ್​ನಿಂದ ಹೊರಬಿದ್ದ ರಾಜ್​ಪಾಲ್​ ಯಾದವ್​! ಹಾಸ್ಯ ನಟನಿಗೆ ಜಾಮೀನು ನೀಡಿದ ದೆಹಲಿ ನ್ಯಾಯಾಲಯ | Rajpal Yadav

ಬಾಲಿವುಡ್​ ಹಾಸ್ಯನಟ ರಾಜ್​ಪಾಲ್​ ಯಾದವ್​
ಬಾಲಿವುಡ್​ ಹಾಸ್ಯನಟ ರಾಜ್​ಪಾಲ್​ ಯಾದವ್​
Published on

ಪ್ರಮುಖ ಮುಖ್ಯಾಂಶಗಳು

  • ಆರ್ಥಿಕ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ರಾಜ್​ಪಾಲ್​ ಯಾದವ್​
  • ಹಾಸ್ಯನಟನಿಗೆ ಜಾಮೀನು ಮಂಜೂರು ಮಾಡಿದ ದೆಹಲಿ ಹೈಕೋರ್ಟ್​
  • ರಾಜ್​ಪಾಲ್​ ಬೆನ್ನಿಗೆ ನಿಂತಿದ್ದ ಬಾಲಿವುಡ್​
ನವದೆಹಲಿ: ಆರ್ಥಿಕ ವಂಚನೆ ಪ್ರಕರಣದಲ್ಲಿ ತಿಹಾರ್​ ಜೈಲು ಸೇರಿದ್ದ ಬಾಲಿವುಡ್​ ಹಾಸ್ಯನಟ ರಾಜ್​ಪಾಲ್​ ಯಾದವ್​ (Rajpal Yadav) ಗೆ ಸೋಮವಾರ(ಫೆ.16) ದೆಹಲಿ ಹೈಕೋರ್ಟ್​ ಮಂಧ್ಯಂತರ ಜಾಮೀನನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ರಾಜಪಾಲ್​ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದ ದೂರುದಾರರಿಗೆ 1.5 ಕೋಟಿ ಹಣವನ್ನು ಸಂದಾಯ ಮಾಡಿದ ಬಳಿಕ ನ್ಯಾಯಪೀಠ ರಾಜ್​ಪಾಲ್​ ಯಾದವ್​ಗೆ ಮಂಧ್ಯಂತರ ಜಾಮೀನನ್ನು ನೀಡಿದೆ.
ಮಾರ್ಚ್​ 19 ರಂದು ರಾಜಪಾಲ್ ತನ್ನ ಸೊಸೆಯ ಮದುವೆಗೆ ತೆರಳಬೇಕು ಎಂದು ಸಲ್ಲಿಸಿದ್ದ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಾಲಯ, ನೀವು ಮದುವೆಗೆ ಖಂಡಿತವಾಗಿ ಹೋಗಬಹುದು ಆದರೆ ಮಾರ್ಚ್​ 18 ರಂದು ಈ ಪ್ರಕರಣದ ವಿಚಾರಣೆ ನಡೆಯಲಿದ್ದು ಅದನ್ನು ನೀವು ದೈಹಿಕವಾಗಿ ಅಥವಾ ವಿಡಿಯೋ ಕಾನ್ಫರೆನ್ಸ್​ ಮೂಲಕ ಹಾಜರಿರಬೇಕೆಂದು ನ್ಯಾಯಾಲಯ ತಿಳಿಸಿದೆ.

ಪ್ರಕರಣದ ಹಿನ್ನಲೆ

2010 ರಲ್ಲಿ ರಾಜ್​ಪಾಲ್​ ಯಾದವ್​ ಅತಾ ಪತಾ ಲಾಪತಾ ಎಂಬ ಸಿನಿಮಾವನ್ನು ನಿರ್ಮಾಣ ಮತ್ತು ನಿರ್ದೇಶಿಸಲು, ಮುರಳಿ ಪ್ರಾಜೆಕ್ಟ್​ ಎಂಬ ಸಂಸ್ಥೆಯಿಂದ 5 ಕೋಟಿ ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದರು.
ಆದರೆ ಬಿಡುಗಡೆಯಾದ ಈ ಸಿನಿಮಾ ನೆಲಕಚ್ಚಿದ ಪರಿಣಾಮ, ಹಣವನ್ನು ಹಿಂದಿರುಗಿಸಲು ಸಾಧ್ಯವಾಗಲಿಲ್ಲ. ಸಾಕಷ್ಟು ಸಮಯವಕಾಶ ನೀಡಿದ ಬಳಿಕವು ರಾಜ್​ಪಾಲ್​ ಹಣವನ್ನು ಮರಳಿ ನೀಡದಿದ್ದಾಗ, ಮುರಳಿ ಪ್ರಾಜೆಕ್ಟ್​ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತು. ನ್ಯಾಯಾದಲ್ಲಿ ಸಹ ರಾಜ್​ಪಾಲ್​ ಹಣವನ್ನು ಖಂಡಿತವಾಗಿ ಹಿಂದಿರುಗಿಸುತ್ತೇನೆ ಎಂದು ಹೇಳಿದ ಮೇಲೂ, ಸಾಲವನ್ನು ಮರುಪಾವತಿ ಮಾಡುವಲ್ಲಿ ವಿಫಲರಾದರು.
ಕೊನೆಗೆ ಪ್ರಕರಣ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದಾಗ ರಾಜ್​ಪಾಲ್​, ನನ್ನ ಬಳಿ ಹಣವಿಲ್ಲ, ಇದ್ದರೆ ಖಂಡಿತವಾಗಿ ಇವರ ಹಣವನ್ನು ಹಿಂದಿರುಗಿಸುತ್ತೇನೆ ಎಂಬ ಹೇಳಿಕೆಯನ್ನು ನೀಡಿದಾಗ, ನ್ಯಾಯಾಲಯ ನೀವು ಹಣವನ್ನು ಮರು ಪಾವತಿ ಮಾಡುವವರೆಗೆ ಜೈಲಿನಲ್ಲಿ ಇರಿ ಎಂದು ಹೇಳಿ, ರಾಜ್​ಪಾಲ್​ನನ್ನು ತಿಹಾರ್​ ಜೈಲಿಗೆ ಶರಣಾಗುವಂತೆ ಆದೇಶಿಸಿತು.

ಹಾಸ್ಯನಟನ ಬೆಂಬಲಕ್ಕೆ ನಿಂತ ಬಾಲಿವುಡ್

ರಾಜ್​ಪಾಲ್​ನನ್ನು ತಿಹಾರ್ ಜೈಲಿಗೆ ಕಳುಹಿಸಿದ ನಂತರ, ಹಲವಾರು ನಟರು ಯಾದವ್‌ಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದರು. ಮತ್ತು ಈ ಕಠಿಣ ಸಮಯದಲ್ಲಿ ಅವರಿಗೆ ಸಹಾಯ ಮಾಡುವಂತೆ ಉದ್ಯಮದ ಸಹ ಸದಸ್ಯರಿಗೆ ಸಾರ್ವಜನಿಕವಾಗಿ ಮನವಿ ಮಾಡಿದರು. ಸೋನು ಸೂದ್, ಅಜಯ್ ದೇವಗನ್ ಮತ್ತು ಸಲ್ಮಾನ್ ಖಾನ್‌ನಿಂದ ಹಿಡಿದು ಗುರ್ಮೀತ್ ಚೌಧರಿಯವರೆಗೆ ಅನೇಕರು ಅವರಿಗೆ ಬೆಂಬಲ ನೀಡಿದರು. ಈ ಮಧ್ಯೆ, ಅನೇಕ ಗಾಯಕರು ಮತ್ತು ಚಲನಚಿತ್ರ ನಿರ್ಮಾಪಕರು ಅವರಿಗೆ ಮುಂಗಡ ಹಣ ನೀಡಿ ತಮ್ಮ ಮುಂಬರುವ ಸಿನಿಮಾಗಳಲ್ಲಿ ಅವಕಾಶವನ್ನು ಸಹ ನೀಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net