ಕತ್ತೆಕಿರುಬಗಳಿಗಿಂತ ಕೆಟ್ಟವರು ಈ ಗಂಡಸರು: ನಿಧಿ ಅಗರ್ವಾಲ್​ ಎಳೆದಾಟ, ಚಿನ್ಮಯಿ ಶ್ರೀಪಾದ ಆಕ್ರೋಶ! Nidhi Agarwal

ನಟಿ ನಿಧಿ ಅಗರ್ವಾಲ್​ ಹಾಗೂ ಗಾಯಕಿ ಚಿನ್ಮಯಿ ಶ್ರೀಪಾದ
ನಟಿ ನಿಧಿ ಅಗರ್ವಾಲ್​ ಹಾಗೂ ಗಾಯಕಿ ಚಿನ್ಮಯಿ ಶ್ರೀಪಾದ
Published on

ಪ್ರಮುಖ ಮುಖ್ಯಾಂಶಗಳು

  • ರೆಬೆಲ್ ಸ್ಟಾರ್ ಪ್ರಭಾಸ್ ನಾಯಕನಾಗಿ ನಟಿಸಿರುವ ದಿ ರಾಜಾ ಸಾಬ್​ ಸಿನಿಮಾ ಬಿಡಗಡೆಗೆ ಸಜ್ಜಾಗಿದೆ
  • ಈ ಸಿನಿಮಾದಲ್ಲಿ ಪ್ರಭಾಸ್​ ಜತೆ ನಟಿ ನಿಧಿ ಅಗರ್ವಾಲ್​, ಮಾಳವಿಕಾ ಮೋಹನನ್ ಮತ್ತು ರಿಧಿ ನಟಿಸಿದ್ದಾರೆ
  • ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ವಿಶ್ವ ಪ್ರಸಾದ್ ನಿರ್ಮಾಣ ಮಾಡಿದ್ದಾರೆ
  • ನಾಯಕಿ ನಿಧಿ ಅಗರ್ವಾಲ್ ಜತೆ ಅಭಿಮಾನಿಗಳ ಅನುಚಿತ ವರ್ತನೆ ವಿರುದ್ಧ ಚಿನ್ಮಯಿ ಶ್ರೀಪಾದ ಕಿಡಿ
ಹೈದರಾಬಾದ್​: ಇತ್ತೀಚೆಗೆ ಪ್ರಭಾಸ್​ ನಟನೆಯ "ರಾಜಾಸಾಬ್" ಚಿತ್ರದ ಸಾಂಗ್​ ರಿಲೀಸ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮ ಮುಗಿಸಿ ಮನೆಗೆ ಹೊರಡುವಾಗ ನಟಿ ನಿಧಿ ಅಗರ್ವಾಲ್ ( Nidhi Agarwal ) ಅವರಿಗೆ ಕಹಿ ಅನುಭವವಾಯಿತು. ನಿಧಿಯ ಸುತ್ತ ಸುತ್ತಿಕೊಂಡ ಅಭಿಮಾನಿಗಳು ನೂಕು ನುಗ್ಗಾಟ ನಡೆಸಿದರು. ಈ ವೇಳೆ ನಿಧಿಯನ್ನು ಮುಟ್ಟಲು ಅಭಿಮಾನಿಗಳು ಪ್ರಯತ್ನಿಸಿದರು. ಸ್ಥಳದಲ್ಲಿ ಭಾರಿ ಬಿಗುವಿನ ವಾತಾವರಣ ಉಂಟಾಯಿತು. ನಿಧಿಯನ್ನು ರಕ್ಷಣೆ ಮಾಡಲು ಬೌನ್ಸರ್​ಗಳು ಪ್ರಯತ್ನಿಸಿದರು. ಆದರೂ, ಭಾರಿ ನೂಕು ನುಗ್ಗಲಿನ ನಡುವೆ ಭಾರಿ ಮುಜುಗರಕ್ಕೆ ಒಳಗಾಗ ನಿಧಿ, ಅಂತಿಮವಾಗಿ ಹೇಗೋ ಕಾರು ಏರಿ ಅಲ್ಲಿಂದ ಹೊರಟು ಹೋದರು.
ಈ ಘಟನೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ, ಗಾಯಕಿ ಚಿನ್ಮಯಿ ಶ್ರೀಪಾದ ಅವರು ನೇರವಾಗಿ ಪುರಷರನ್ನೇ ಟಾರ್ಗೆಟ್​ ಮಾಡಿ, ಪೋಸ್ಟ್​ ಮಾಡಿರುವ ಟ್ವೀಟ್​ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.  
ಅಂದಹಾಗೆ, ಗಾಯಕಿ ಹಾಗೂ ಡಬ್ಬಿಂಗ್​ ಕಲಾವಿದೆ ಚಿನ್ಮಯಿ ಶ್ರೀಪಾದ ಅವರು ಸಾಮಾಜಿಕ ಜಾಲತಾಣದಲ್ಲಿನ ಅಶ್ಲೀಲತೆ ಹಾಗೂ ಸಮಾಜದಲ್ಲಿ ಹೆಣ್ಣಿನ ವಿರುದ್ಧ ನಡೆಯುತ್ತಿರುವ ಶೋಷಣೆಯ ವಿರುದ್ಧ ಸದಾ ಧ್ವನಿ ಎತ್ತಿ, ಸರ್ಕಾರವನ್ನು ಪ್ರಶ್ನೆ ಮಾಡುತ್ತಿರುತ್ತಾರೆ. ಸ್ತ್ರೀವಾದಿ ಎಂದೇ ಬ್ರ್ಯಾಂಡ್​ ಆಗಿರುವ ಚಿನ್ಮಯಿ, ಇದೀಗ ನಿಧಿ ಅಗರ್ವಾಲ್​ ಘಟನೆಗೆ ಪ್ರತಿಕ್ರಿಯಿಸಿದ್ದಾರೆ.
ಗುಲ್ಟು ಮಾಧ್ಯಮದ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿರುವ ಚಿನ್ಮಯಿ, ವಿಡಿಯೋದಲ್ಲಿ ನಟಿ ನಿಧಿಯನ್ನು ಸುತ್ತುವರಿದ ಗಂಡಸರು ಕತ್ತೆಕಿರುಬಗಳಿಗಿಂತಲೂ ಅತ್ಯಂತ ಕೆಟ್ಟವರು ಎಂದಿದ್ದಾರೆ. ಅಲ್ಲದೆ, ಈ ರೀತಿ ಹೇಳಿ ನಿಜವಾಗಲೂ ಕತ್ತೆಕಿರುಬಗಳನ್ನು ಏಕೆ ಅವಮಾನಿಸಬೇಕು? ಕಿತ್ತೆ ಕಿರುಬಗಳೇ ಎಷ್ಟೋ ವಾಸಿ ಎಂದಿದ್ದಾರೆ. ಇಂತಹ ಸಮಾನ ಮನಸ್ಸಿನ ಪುರುಷರನ್ನು ಗುಂಪಾಗಿ ಸೇರಿಸಿದರೆ ಅವರೆಲ್ಲರು ಮಹಿಳೆಗೆ ಇದೇ ರೀತಿ ಕಿರುಕುಳ ನೀಡುತ್ತಾರೆ. ಈ ದೇವರು ಅವರೆಲ್ಲರನ್ನೂ ಏಕೆ ಕರೆದುಕೊಂಡು ಹೋಗಿ ಬೇರೆ ಗ್ರಹದಲ್ಲಿ ಇಡುವುದಿಲ್ಲ ಎಂದು ಚಿನ್ಮಯಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.  
ಅಷ್ಟಕ್ಕೂ ನಡೆದಿದ್ದೇನು?
ರೆಬೆಲ್ ಸ್ಟಾರ್ ಪ್ರಭಾಸ್ ನಾಯಕನಾಗಿ ನಟಿಸಿರುವ ದಿ ರಾಜಾ ಸಾಬ್​ ಸಿನಿಮಾ ಬಿಡಗಡೆಗೆ ಸಜ್ಜಾಗಿದೆ. ಮಾರುತಿ ನಿರ್ದೇಶನದ ಹಾರರ್​, ಹಾಸ್ಯ ಮತ್ತು ಪ್ರೇಮ ಕಥಾಹಂದರವುಳ್ಳ ಈ ಸಿನಿಮಾದಲ್ಲಿ ಪ್ರಭಾಸ್​ ಜತೆ ನಟಿ ನಿಧಿ ಅಗರ್ವಾಲ್​, ಮಾಳವಿಕಾ ಮೋಹನನ್ ಮತ್ತು ರಿಧಿ ನಾಯಕಿಯರಾಗಿ ನಟಿಸಿದ್ದಾರೆ. ಬಾಲಿವುಡ್ ನಟ ಸಂಜಯ್ ದತ್ ಈ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ತಮನ್ ಸಂಗೀತ ನೀಡಿರುವ ಈ ಚಿತ್ರವನ್ನು ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ವಿಶ್ವ ಪ್ರಸಾದ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಎರಡನೇ ಹಾಡು ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಹೈದರಾಬಾದ್‌ನ ಲುಲು ಮಾಲ್‌ನಲ್ಲಿ ನಡೆಯಿತು. ನಿರ್ಮಾಪಕ ವಿಶ್ವ ಪ್ರಸಾದ್, ನಿರ್ದೇಶಕ ಮಾರುತಿ, ಸಂಗೀತ ನಿರ್ದೇಶಕ ತಮನ್ ಮತ್ತು ನಾಯಕಿಯರಾದ ನಿಧಿ ಅಗರ್ವಾಲ್ ಹಾಗೂ ರಿದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಭಿಮಾನಿಗಳ ಭಾರಿ ಗದ್ದಲದ ನಡುವೆ ಎರಡನೇ ಹಾಡನ್ನು ಬಿಡುಗಡೆ ಮಾಡಲಾಯಿತು. ಆದಾಗ್ಯೂ, ಈ ಕಾರ್ಯಕ್ರಮ ಜನರಿಂದ ಭಾರಿ ಟೀಕೆಗೆ ಗುರಿಯಾಯಿತು. ಇದು ಸಾರ್ವಜನಿಕ ಕಾರ್ಯಕ್ರಮವಾಗಿದ್ದರಿಂದ ಅಭಿಮಾನಿಗಳು ಘರ್ಷಣೆ ನಡೆಸಿ ಜಗಳವಾಡಿ, ಗದ್ದಲ ಎಬ್ಬಸಿದರು. ಇದರ ಪರಿಣಾಮವಾಗಿ, ಈ ಕಾರ್ಯಕ್ರಮವನ್ನು ನಿರೀಕ್ಷೆಗಿಂತ ಸ್ವಲ್ಪ ಮುಂಚಿತವಾಗಿಯೇ ಮುಗಿಸಲಾಯಿತು. ಇನ್ನು ಈ ಕಾರ್ಯಕ್ರಮದಿಂದ ಹಿಂತಿರುಗುವ ಸಂದರ್ಭದಲ್ಲಿ ಅಭಿಮಾನಿಗಳು ನಾಯಕಿ ನಿಧಿ ಅಗರ್ವಾಲ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದರು. ನಿಧಿಯ ಸುತ್ತ ಸುತ್ತಿಕೊಂಡ ಅಭಿಮಾನಿಗಳು ನೂಕು ನುಗ್ಗಾಟ ನಡೆಸಿದರು. ಈ ವೇಳೆ ನಿಧಿ ಅವರನ್ನು ಮುಟ್ಟಲು ಅಭಿಮಾನಿಗಳು ಪ್ರಯತ್ನಿಸಿದರು. ಸ್ಥಳದಲ್ಲಿ ಭಾರಿ ಬಿಗುವಿನ ವಾತಾವರಣ ಉಂಟಾಯಿತು. ಈ ವೇಳೆ ನಿಧಿ ಅವರನ್ನು ರಕ್ಷಣೆ ಮಾಡಲು ಬೌನ್ಸರ್​ಗಳು ಪ್ರಯತ್ನಿಸಿದರು. ಆದರೂ, ಭಾರಿ ನೂಕು ನುಗ್ಗಲಿನ ನಡುವೆ ಭಾರಿ ಮುಜುಗರಕ್ಕೆ ಒಳಗಾಗ ನಿಧಿ ಅಂತಿಮವಾಗಿ ಹೇಗೋ ಕಾರು ಏರುವಲ್ಲಿ ಯಶಸ್ವಿಯಾದರು. ನೂಕು ನುಗ್ಗಾಟದ ಸಮಯದಲ್ಲಿ ಕೆಲವರು ದುರುದ್ದೇಶದಿಂದ ನಿಧಿ ಅಗರ್ವಾಲ್ ಅನ್ನು ಮುಟ್ಟಲು ಪ್ರಯತ್ನಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ.  

ಸೆಲೆಬ್ರಿಟಿಗಳಿಗೆ ರಕ್ಷಣೆ ಎಲ್ಲಿ?

ಸಿನಿಮಾ ಪ್ರಚಾರವಾಗಿರಬಹುದು, ಯಾವುದೇ ಶಾಪಿಂಗ್ ಮಾಲ್ ಉದ್ಘಾಟನೆಯಾಗಿರಬಹುದು ಅಥವಾ ಆಭರಣ ಅಂಗಡಿಗಳಾಗಿರಬಹುದು ಯಾವುದೇ ಕಾರ್ಯಕ್ರಮಗಳು ನಡೆದಾಗಲೆಲ್ಲ ಸಿನಿಮಾ ಕಲಾವಿದರು ಭದ್ರತಾ ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದಾರೆ. ಅವರ ರಕ್ಷಣೆಗಾಗಿ ಬೌನ್ಸರ್‌ಗಳನ್ನು ಕರೆತಂದರು ಕೂಡ ಅಭಿಮಾನಿಗಳು ತಮ್ಮ ಅತಿಯಾದ ವರ್ತನೆಯಿಂದ ಕಲಾವಿದರನ್ನು ಮುಜುಗರಕ್ಕೀಡುಮಾಡುತ್ತಿದ್ದಾರೆ. ಸೆಲ್ಫಿ ತೆಗೆದುಕೊಳ್ಳುವ ಆಸೆಗೆ ಹುಚ್ಚುಚ್ಚಾಗಿ ವರ್ತಿಸುವುದು ನಿಜಕ್ಕೂ ಸರಿಯಲ್ಲ. ಇದು ಸೆಲೆಬ್ರಿಟಿಗಳ ರಕ್ಷಣೆಯ ಕಳವಳವನ್ನು ಉಂಟುಮಾಡುತ್ತದೆ. 
ಯಾರೇ ಸೆಲೆಬ್ರಿಟಿಗಳು ಬರಲಿ ಅಭಿಮಾನಿಗಳಾದವರು ಸಂಯಮವನ್ನು ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ, ಏನಾಗುತ್ತದೆ ಎಂಬುದಕ್ಕೆ ಒಂದು ದೊಡ್ಡ ಉದಾಹರಣೆ ಹೈದರಾಬಾದ್​ನ ಸಂಧ್ಯಾ ಥಿಯೇಟರ್ ಬಳಿ ನಡೆದ ಕಾಲ್ತುಳಿತ ಪ್ರಕರಣ. ಪುಷ್ಪ2 ಚಿತ್ರದ ಬಿಡುಗಡೆ ಸಮಯದಲ್ಲಿ ಅಲ್ಲು ಅರ್ಜುನ್​ ಬಂದಾಗ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಇದರಿಂದ ಮಹಿಳೆಯೊಬ್ಬರ ಜೀವ ಹೋಯಿತು. ಹೀಗಾಗಿ, ಈ ರೀತಿ  ಸಂಭವಿಸದಂತೆ ತಡೆಯಲು ಹಾಗೂ ಅಭಿಮಾನಿಗಳ ಅತಿರೇಕವನ್ನು ನಿಯಂತ್ರಣಕ್ಕೆ ತರಲು ಒಂದು ಕಾರ್ಯವಿಧಾನವನ್ನೂ ಅಳವಡಿಸಬೇಕಿದೆ, (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net