ಧುರಂಧರ್ ಸ್ಟಾರ್ಗೆ ರಾಜಾತಿಥ್ಯ: ಸಂಜಯ್ ದತ್ ಕೆನ್ನೆಗೆ ಮುತ್ತಿಟ್ಟು, ಗೋಲ್ಟನ್ ಐಫೋನ್ ಕೊಟ್ಟ ಪಾಕ್ ಅಭಿಮಾನಿ | Sanjay Dutt
ಸಂಜು ಬಾಬಾ ಖ್ಯಾತಿಯ ಬಾಲಿವುಡ್ ನಟ ಸಂಜಯ್ ದತ್ (Sanjay Dutt)
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ದುಬೈ ಪ್ರವಾಸದಲ್ಲಿರುವ ನಟ ಸಂಜಯ್ ದತ್
ಚಿನ್ನ ಲೇಪಿತ ಐಫೋನ್ ಉಡುಗೊರೆ ನೀಡಿದ ಪಾಕ್ ಅಭಿಮಾನಿ
ಸಂಜು ಬಾಬಾ ಕೆನ್ನೆಗೆ ಮುತ್ತಿಕ್ಕಿದ ಕಾಶಿಫ್ ಜಮೀರ್
ದುಬೈ: ಸಂಜು ಬಾಬಾ ಖ್ಯಾತಿಯ ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಅವರಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅಭಿಮಾನಿಗಳಿರುವುದು ಹೊಸ ಸುದ್ದಿಯಲ್ಲ. ಆದರೆ ಇತ್ತೀಚೆಗೆ ದುಬೈನಲ್ಲಿ ವಿಶೇಷ ಅಭಿಮಾನಿಯೊಬ್ಬ ಸಂಜಯ್ ದತ್ರನ್ನು ಭೇಟಿಯಾಗಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗುತ್ತಿದೆ.
ಚಿನ್ನದ ಐಫೋನ್ ಕೊಟ್ಟ ಅಭಿಮಾನಿ!
ಸಂಜಯ್ ದತ್ ಇತ್ತೀಚೆಗೆ ದುಬೈಗೆ ಹೋಗಿದ್ದಾಗ ಕಾಶಿಫ್ ಜಮೀರ್ ಎಂಬ ಪಾಕಿಸ್ತಾನ ಮೂಲದ ಅಭಿಮಾನಿ ಭೇಟಿಯಾಗಿದ್ದು, ಇವನು ಸಂಜು ಬಾಬಾಗೆ ಚಿನ್ನ ಲೇಪಿತ ಐಫೋನ್ 17 ನ್ನು ಉಡುಗೊರೆಯಾಗಿ ನೀಡಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೊಗಳಲ್ಲಿ ಕಾಶಿಫ್ ಜಮೀರ್ ಸಂಜಯ್ ದತ್ ಅವರ ಬಳಿ ಕುಳಿತುಕೊಂಡಿದ್ದು, ಸ್ವರ್ಣ ಲೇಪಿತ ಐಫೋನ್ನ್ನು ನೀಡಿ, ಬಾಬಾನ ಕೆನ್ನೆಗೆ ಮತ್ತು ಕೊಟ್ಟಿರುವ ಫೋಟೊ ಸಖತ್ ವೈರಲ್ ಆಗುತ್ತಿದೆ.
ಇದರ ಜೊತೆಗೆ ಸಂಜಯ್ ದತ್ ಅವರ ಪತ್ನಿ ಮಾನ್ಯತಾ ಅವರಿಗೆ ದುಬಾರಿ ಆಭರಣದ ಸೆಟ್ನ್ನು ನೀಡಿರುವುದಾಗಿ ತಿಳಿದು ಬಂದಿದೆ. ಈ ಉಡುಗೊರೆಯನ್ನು ನೀಡುತ್ತಿರುವ ವಿಡಿಯೋವನ್ನು ಖುದ್ದು ಕಾಶಿಫ್ ಜಮೀರ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ.
ಯಾರಿ ಕಾಶಿಫ್ ಜಮೀರ್ ?
ಸಾಮಾಜಿಕ ಜಾಲತಾಣದಲ್ಲಿ ತನ್ನ ಐಷಾರಾಮಿ ಜೀವನದ ಪ್ರದರ್ಶನದ ಮೂಲಕ ಖ್ಯಾತಿ ಗಳಿಸಿರುವ ಕಾಶಿಫ್ ಜಮೀರ್, ಮೂಲತಃ ಪಾಕಿಸ್ತಾನದವರು. ಇವರು ಇಂರ್ಟನೆಟ್ ಲೋಕದಲ್ಲಿ ಐಷಾರಾಮಿ ಕಾರುಗಳು, ದುಬಾರಿ ಉಡುಗೊರೆಗಳನ್ನು ನೀಡುವ ಮೂಲಕವೇ ಜನಪ್ರೀಯತೆಯನ್ನು ಗಳಿಸಿದ್ದಾರೆ.
ರಣವೀರ್ ಸಿಂಗ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಹಾಗೂ ಆದಿತ್ಯ ಧರ್ ನಿರ್ದೇಶನದ ಧುರಂಧರ್ ಸಿನಿಮಾದಲ್ಲಿ ಸಂಜಯ್ ದತ್ ಪಾಕಿಸ್ತಾನದ ಖಡಕ್ ಪೊಲೀಸ್ ಅಧಿಕಾರಿ ಚೌಧರಿ ಅಸ್ಲಂ ಪಾತ್ರವನ್ನು ಮಾಡಿ ಮಿಂಚಿದ್ದರು.
ಈಗ ಈ ಸಿನಿಮಾದ ಮುಂದಿನ ಭಾಗ ಮಾರ್ಚ್ 19 ರಂದು ಬಿಡುಗಡೆಯಾಗಲಿದ್ದು, ಈ ಭಾಗದಲ್ಲಿ ಸಹ ಸಂಜಯ್ ದತ್ ತಮ್ಮ ಜಬರ್ದಸ್ತ್ ಆಕ್ಷನ್ ಮೂಲಕ ಪ್ರೇಕ್ಷಕರ ಹೃದಯ ಗೆಲ್ಲುವುದು ಖಚಿತ ಎನ್ನುವುದು ಬಾಬಾರ ಅಭಿಮಾನಿಗಳ ಭವಿಷ್ಯವಾಣಿಯಾಗಿದೆ,(ಏಜನ್ಸೀಸ್).