ಧುರಂಧರ್ 2 ಗೆ ಕಾನೂನು ಸಂಕಷ್ಟ: ಸಿನಿಮಾಗೆ ಮುಳುವಾಗುತ್ತಾ ಆ ಒಂದು ದೃಶ್ಯ? ರಣವೀರ್​ ಮೇಲೆ ಸಿಖ್​ ಸಮುದಾಯ ಕೆಂಡ ಕಾರುತ್ತಿರುವುದೇಕೆ? Dhurandhar 2

ಮಾರ್ಚ್​ 19 ರಂದು ಬಿಡುಗಡೆಗೆ ಸಿದ್ಧವಾದ ಧುರಂಧರ್​ 2 ಸಿನಿಮಾ
ಮಾರ್ಚ್​ 19 ರಂದು ಬಿಡುಗಡೆಗೆ ಸಿದ್ಧವಾದ ಧುರಂಧರ್​ 2 ಸಿನಿಮಾ
Published on

ಪ್ರಮುಖ ಮುಖ್ಯಾಂಶಗಳು

  • ಮಾರ್ಚ್​ 19 ರಂದು ಬಿಡುಗಡೆಗೆ ಸಿದ್ಧವಾದ ಧುರಂಧರ್​ 2 ಸಿನಿಮಾ
  • ಸಿನಿಮಾದ ಹಾಡೊಂದರಲ್ಲಿ ಸಿಖ್​ ಪಾತ್ರದಲ್ಲಿ ಸಿಗರೇಟ್​ ಸೇದುತ್ತಿರುವ ರಣವೀರ್​ ಸಿಂಗ್
  • ಇದು ನಮ್ಮ ಧರ್ಮಕ್ಕೆ ಮಾಡಿರುವ ಅಪಚಾರ ಎಂದ ಶಿರೋಮಣಿ ಅಕಾಲಿದಳ
  • ಕ್ಷಮೆ ಕೇಳಿ ಮತ್ತು ಈ ದೃಶ್ಯವನ್ನು ಸಿನಿಮಾದಿಂದ ಕೈಬಿಡಿ ಎಂದ ಸಿಖ್ ನಾಯಕ
ಬಾಲಿವುಡ್​: ರಣವೀರ್​ ಸಿಂಗ್​ ಮುಖ್ಯ ಭೂಮಿಕೆಯಲ್ಲಿ ನಟಿಸಲಿರುವ, ಆಧಿತ್ಯ ಧರ್​ ನಿರ್ದೇಶನದ ಧುರಂಧರ್​ 2 (Dhurandhar 2), ಮಾರ್ಚ್​ 19 ರಂದು ಪ್ರಪಂಚದಾದ್ಯಂತ ತೆರೆಕಾಣಲು ತುದಿಗಾಲಲ್ಲಿ ನಿಂತಿದೆ. ಆದರೆ ಈ ಸಿನಿಮಾಗೆ ಹೊಸದೊಂದು ಕಾನೂನಿನ ತೊಡಕು ಉಂಟಾಗಿದ್ದು, ಇದು ಸಿನಿಮಾದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದು ನೋಡ ಬೇಕಾಗಿದೆ.

ಏನಿದು ಸಮಸ್ಯೆ?

ಧುರಂಧರ್​ 2 ತೆರೆಕಾಣುವ ಪೂರ್ವದಲ್ಲಿ ಸಿನಿಮಾದ ಟ್ರೇಲರ್​ನ್ನು ಬಿಡುಗಡೆ ಮಾಡಲಾಗಿದ್ದು, ಈ ಸಿನಿಮಾದಲ್ಲಿ ರಣವೀರ್​ ಸಿಂಗ್​, ಹಮ್ಜಾ ಅಲಿ ಮಜಾರಿ ಪಾತ್ರದ ಜೊತೆಗೆ ಜಸ್ಕಿರತ್​ ಸಿಂಗ್​ ರಂಗಿ ಎಂಬ ಸಿಖ್​ ಪಾತ್ರದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ.
ಟ್ರೇಲರ್​ ಮತ್ತು ಬಿಡುಗಡೆ ಮಾಡಿರುವ ಪೋಸ್ಟರ್​ನಲ್ಲಿ ಜಸ್ಕಿರತ್​ ಸಿಂಗ್​ ರಂಗಿ ಎಂಬ ಪಾತ್ರದಲ್ಲಿ ರಣವೀರ್ ಸಿಂಗ್​ ಸಿಗರೇಟನ್ನ ಸೇದುತ್ತಿರುವುದು ಸಿಖ್ಖರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಶಿರೋಮಣಿ ಅಕಾಲಿದಳ ಕಾನೂನಿನ ಮೊರೆ ಹೋಗಿದೆ. ಸಿಖ್​​ ಧರ್ಮದಲ್ಲಿ ತಂಬಾಕಿನ ಸೇವನೆ ನಿಷಿದ್ಧವಾಗಿದ್ದು, ಸಿನಿಮಾದಲ್ಲಿ ಸಿಖ್​ ಪಾತ್ರದಲ್ಲಿರುವ ವ್ಯಕ್ತಿ ಸಿಗರೇಟ್​ ಸೇದುತ್ತಿರುವ ದೃಶ್ಯ ತಮಗೆ ಅತೀಮ ಬೇಸರ ತರಿಸಿದೆ ಎಂದು ಅಕಾಲಿದಳ ತಿಳಿಸಿದೆ.

ದೃಶ್ಯವನ್ನು ತೆಗೆಯಿರಿ; ಕ್ಷಮೆಯನ್ನು ಕೇಳಿ

ದೆಹಲಿಯ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಪರಮ್​ಜಿತ್​ ಸಿಂಗ್​ ಸರ್ನಾ, ಧುರಂಧರ್ 2 ಚಿತ್ರದ ಪ್ರಳಯ್ ಹಾಡಿನ ಪೋಸ್ಟರ್‌ನಲ್ಲಿ ಪೇಟ ಧರಿಸಿದ ಸಿಖ್ ಪಾತ್ರವು ಸಿಗರೇಟ್ ಹಿಡಿದಿರುವುದನ್ನು ಚಿತ್ರಿಸಲಾಗಿದೆ. ಈ ಚಿತ್ರಣವು ಸಿಖ್ ಧಾರ್ಮಿಕ ತತ್ವಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಪರಮಜಿತ್ ಸಿಂಗ್ ಸರ್ನಾ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.
ಪಗಡಿ ಧರಿಸಿ ಸಿಗರೇಟ್ ಹಿಡಿದುಕೊಂಡಿರುವ ದೃಶ್ಯ, ಸಿಖ್ ಗುರುತಿನ ಸ್ಪಷ್ಟ ತಪ್ಪು ನಿರೂಪಣೆಯಾಗಿದೆ ಮತ್ತು ಇದು ವಿಶ್ವಾದ್ಯಂತ ಸಿಖ್ಖರ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಆದ್ದರಿಂದ ಈ ದೃಶ್ಯವನ್ನು ಸಿನಿಮಾದಿಂದ ತೆಗೆದು ಹಾಕಬೇಕು ಮತ್ತು ಸಿನಿಮಾ ತಂಡ ಸಿಖ್​ ಸಮುದಾಯಕ್ಕೆ ಮಾಡಿರುವ ಅವಮಾನಕ್ಕೆ ಕ್ಷಮೆ ಕೇಳಬೇಕೆಂದು ಅವರು ಆಗ್ರಹಿಸಿದ್ದಾರೆ.

ಧುರಂಧರ್​ ಬಗ್ಗೆ

ಧುರಂಧರ್​ ಇದೊಂದು ಸ್ಪೈ-ಥ್ರಿಲ್ಲರ್​ ಸಿನಿಮಾವಾಗಿದ್ದು, ಪಾಕಿಸ್ತಾನದಲ್ಲಿ ಭಾರತೀಯ ಗೂಢಚರ ಹೇಗೆ ಕೆಲಸ ಮಾಡುತ್ತಾನೆ ಎನ್ನುವುದೇ ಈ ಸಿನಿಮಾದ ಕಥಾ ವಸ್ತುವಾಗಿದೆ. ಈ ಸಿನಿಮಾದ ಮೊದಲ ಭಾಗವು 2025 ರ ಡಿಸೆಂಬರ್​ನಲ್ಲಿ ತೆರೆಕಂಡು ಸುಮಾರು 1,000 ಕೋಟಿ ಕಲೆಕ್ಷನ್​ ಮಾಡಿತ್ತು. ಈಗ ಈ ಸಿನಿಮಾದ ಎರಡನೆ ಭಾಗ ಮಾರ್ಚ್​ 19 ರಂದು ಬಿಡುಗಡೆಯಾಗಲಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್​, ಅಕ್ಷನ್​ ಖನ್ನಾ,ಆರ್.ಮಾಧವನ್​, ಅರ್ಜುನ್​ ರಾಂಪಾಲ್​, ಸಂಜಯ್​ ದತ್ತ್, ಸಾರಾ ಅರ್ಜುನ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಉರಿ ಖ್ಯಾತಿಯ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net