ನಟ ಜಯಂ ರವಿ ಜೊತೆಗಿನ ಒಡನಾಟದ ಬಗ್ಗೆ ಸ್ಪಷ್ಟನೆ ನೀಡಿರುವ ಕೆನಿಶಾ, ತಾವು ಮೊದಲ ಬಾರಿಗೆ ಆಡಿಯೋ ಲಾಂಚ್ ಒಂದರಲ್ಲಿ ಭೇಟಿಯಾಗಿದ್ದಾಗಿ ಮತ್ತು ನಂತರ ರವಿ ಅವರು ಚಿಕಿತ್ಸೆಗಾಗಿ ತಮ್ಮ ಬಳಿಗೆ ಪೇಷೆಂಟ್ ಆಗಿ ಬಂದಾಗ ಉಂಟಾದ ಸ್ನೇಹವಿದು ಎಂದು ತಿಳಿಸಿದ್ದಾರೆ. ರವಿ ಸಂಕಷ್ಟದಲ್ಲಿದ್ದಾಗ ತಾನು ಸ್ನೇಹಿತೆಯಾಗಿ ಜೊತೆಗಿದ್ದೆ ಎಂದಿರುವ ಅವರು, ತಮ್ಮ ವಿರುದ್ಧ ಬೆಂಗಳೂರಿಗೆ ಡಿಟೆಕ್ಟಿವ್‌ಗಳನ್ನು ಕಳುಹಿಸಿ ತನಿಖೆ ಮಾಡಿಸಲಾಗಿದೆ ಹಾಗೂ ಸೋಶಿಯಲ್ ಮೀಡಿಯಾ ಅಕೌಂಟ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ, ಜಯಂ ರವಿಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದಾರೆ, ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ ಎಂಬಿತ್ಯಾದಿ ಸುಳ್ಳು ವದಂತಿಗಳನ್ನು ಹರಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕೆನಿಶಾ, "ಗರ್ಭದಲ್ಲೇ ಮಗುವನ್ನು ಕಳೆದುಕೊಂಡಿರುವ ನಾನು, ಮತ್ತೊಬ್ಬ ವ್ಯಕ್ತಿಯನ್ನು ಆತನ ಮಕ್ಕಳಿಂದ ದೂರ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ತಮ್ಮ 34 ವರ್ಷದ ಜೀವನದಲ್ಲಿ ಕಳೆದ ಒಂದು ವರ್ಷದಿಂದ ನೆಮ್ಮದಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಅವರು, ಸದ್ಯ ಸಂಗೀತ, ಥೆರಪಿ, ಸೋಶಿಯಲ್ ಮೀಡಿಯಾ ಹಾಗೂ ಜಯಂ ರವಿ ಸೇರಿದಂತೆ ಎಲ್ಲರನ್ನೂ ಮತ್ತು ಎಲ್ಲವನ್ನೂ ತೊರೆದು ದೂರ ಸರಿಯುತ್ತಿರುವುದಾಗಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ, (ಏಜೆನ್ಸೀಸ್).