ಈ ಚರ್ಚೆಯು ರೆಡ್ಡಿಟ್ ವೇದಿಕೆಗೂ ವಿಸ್ತರಿಸಿದ್ದು, ಅಲ್ಲಿಯೂ ಸಹ ಬಳಕೆದಾರರು ಟೀಸರ್ ಕುರಿತು ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ. ರೆಡ್ಡಿಟ್‌ನ ಕಾಮೆಂಟ್ ಒಂದರಲ್ಲಿ ನನ್ನ ಅಜ್ಜ-ಅಜ್ಜಿ ಮತ್ತು ಮುತ್ತಜ್ಜ-ಮುತ್ತಜ್ಜಿಯರು ಇಂತಹ ದಿನವನ್ನು ನೋಡುವ ಮುನ್ನವೇ ಸ್ವರ್ಗಸ್ಥರಾಗಿದ್ದಕ್ಕೆ ದೇವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿರಬಹುದು ಎಂದು ವ್ಯಂಗ್ಯವಾಗಿ ಬರೆಯಲಾಗಿದೆ. ಮತ್ತೊಬ್ಬ ಬಳಕೆದಾರರು ಮಹಿಳಾ ಪಾತ್ರಗಳಿಗೆ ಟೀಸರ್‌ನಲ್ಲಿ ಯಾವುದೇ ಗಂಭೀರ ಪ್ರಾಮುಖ್ಯತೆ ನೀಡದಿರುವುದನ್ನು ಎತ್ತಿ ತೋರಿಸುತ್ತಾ, ಇಡೀ ಟೀಸರ್‌ನಲ್ಲಿ ಒಬ್ಬೇ ಒಬ್ಬ ಮಹಿಳಾ ಪಾತ್ರವೂ ಮಾತನಾಡಿಲ್ಲ, ಅಷ್ಟೇ ಅಲ್ಲದೆ ಯಾವುದೇ ನಟಿಯನ್ನೂ ಕನಿಷ್ಠ 5 ರಿಂದ 10 ಸೆಕೆಂಡ್‌ಗಳಿಗಿಂತ ಹೆಚ್ಚು ಸಮಯ ಪರದೆಯ ಮೇಲೆ ತೋರಿಸಿಲ್ಲ ಎಂದು ಬೆರಳು ಮಾಡಿದ್ದಾರಲ್ಲದೆ, ಪಾತ್ರಗಳ ಗಾಂಭೀರ್ಯತೆಯ ಕೊರತೆಯನ್ನು ಪ್ರಶ್ನಿಸಿದ್ದಾರೆ.