ತನಗಿಂತ 20 ವರ್ಷ ಕಿರಿಯವಳ ಜತೆ ಲವ್​, ಬೆಂಗಳೂರಲ್ಲಿ ಲಿವಿಂಗ್ ಟುಗೆದರ್​​: ಪ್ರೀತಿಯ ಗುಟ್ಟು ಬಿಚ್ಚಿಟ್ಟ ಅನುರಾಗ್ ಕಶ್ಯಪ್! Anurag Kashyap

ತನಗಿಂತ 20 ವರ್ಷ ಕಿರಿಯವಳ ಜತೆ ಲವ್​, ಬೆಂಗಳೂರಲ್ಲಿ ಲಿವಿಂಗ್ ಟುಗೆದರ್​​: ಪ್ರೀತಿಯ ಗುಟ್ಟು ಬಿಚ್ಚಿಟ್ಟ ಅನುರಾಗ್ ಕಶ್ಯಪ್! Anurag Kashyap
ತನಗಿಂತ 20 ವರ್ಷ ಕಿರಿಯವಳ ಜತೆ ಲವ್​, ಬೆಂಗಳೂರಲ್ಲಿ ಲಿವಿಂಗ್ ಟುಗೆದರ್​​: ಪ್ರೀತಿಯ ಗುಟ್ಟು ಬಿಚ್ಚಿಟ್ಟ ಅನುರಾಗ್ ಕಶ್ಯಪ್! Anurag Kashyap
Published on

ಪ್ರಮುಖ ಮುಖ್ಯಾಂಶಗಳು

  • ಅನುರಾಗ್ ಕಶ್ಯಪ್ ಜೊತೆಗಿನ ಪ್ರೇಮಕಥೆ ಬಿಚ್ಚಿಟ್ಟ ಶುಭ್ರಾ ಶೆಟ್ಟಿ
  • ವಯಸ್ಸಿನ ಅಂತರದ ನಡುವೆಯೂ ಗಟ್ಟಿಯಾದ ಇವರ ವಿಶಿಷ್ಟ ಬಂಧ
  • ಪೋಷಕರ ಪ್ರತಿಕ್ರಿಯೆ ಹಾಗೂ ಟ್ರೋಲ್ ಗಳ ಬಗ್ಗೆ ಮುಕ್ತ ಮಾತು
  • ಮುಂಬೈ ತೊರೆದು ತಮಗೆ ತಾವೇ ಸಮಯ ನೀಡುತ್ತಿರುವ ನಿರ್ದೇಶಕ
ಮುಂಬೈ: ಬಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ಅನುರಾಗ್ ಕಶ್ಯಪ್ ( Anurag Kashyap ) ತಮ್ಮ ವೃತ್ತಿಜೀವನದ ಜೊತೆಗೆ ವೈಯಕ್ತಿಕ ಜೀವನದ ಕಾರಣಕ್ಕೂ ಸದಾ ಸುದ್ದಿಯಲ್ಲಿರುತ್ತಾರೆ. 'ಗ್ಯಾಂಗ್ಸ್ ಆಫ್ ವಾಸೇಪುರ್', 'ದೇವ್ ಡಿ'ಯಂತಹ ಹಿಟ್ ಸಿನಿಮಾಗಳನ್ನು ನೀಡಿದ ಇವರು, ಎರಡು ವಿಚ್ಛೇದನಗಳ ಬಳಿಕ ಕಳೆದ 11 ವರ್ಷಗಳಿಂದ ಒಂಟಿಯಾಗಿದ್ದರು, ಆದರೆ ಸದ್ಯ ಅವರು ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.
ಅನುರಾಗ್ ಕಶ್ಯಪ್ ತಮಗಿಂತ 20 ವರ್ಷ ಕಿರಿಯವಳಾದ ಶುಭ್ರಾ ಶೆಟ್ಟಿ ಎಂಬುವವರನ್ನು ಪ್ರೀತಿಸುತ್ತಿದ್ದು, ಇಬ್ಬರೂ ಬೆಂಗಳೂರಿನಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಜೆನಿಸ್ ಸೆಕ್ವೆರಾ ಅವರಿಗೆ ನೀಡಿದ ಸಂದರ್ಶನದಲ್ಲಿ ಶುಭ್ರಾ ತಮ್ಮ ಸಂಬಂಧ, ಎದುರಿಸಿದ ಟ್ರೋಲ್‌ಗಳು ಹಾಗೂ ಪೋಷಕರ ಪ್ರತಿಕ್ರಿಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ನಾವು ನಮ್ಮ ಸಂಬಂಧವನ್ನು ರಹಸ್ಯವಾಗಿಡಲು ಪ್ರಯತ್ನಿಸಿದ್ದೆವು. ಪಾರ್ಟಿ ಅಥವಾ ಕಾರ್ಯಕ್ರಮಗಳಿಗೆ ಹೋದರೂ ಮಾಧ್ಯಮಗಳಿಂದ ದೂರವಿರುತ್ತಿದ್ದೆವು. ಆದರೆ, ಪತ್ರಕರ್ತೆಯೊಬ್ಬರು ಈ ಸುದ್ದಿಯನ್ನು ಹೊರಹಾಕಿದರು. ಅನುರಾಗ್ ಜತೆ ಡೇಟಿಂಗ್ ಮಾಡುತ್ತಿರುವ ವಿಚಾರ ತಿಳಿದು ಪೋಷಕರು ಹೇಗೆ ಪ್ರತಿಕ್ರಿಯಿಸಿದರು ಎಂಬ ಪ್ರಶ್ನೆಗೆ ಉತ್ತರಿಸಿರುವ ಶುಭ್ರಾ, ನನ್ನ ತಾಯಿ ಈಗ ಅನುರಾಗ್, ಹೆಂಡತಿಯ ಮಾತಿನಂತೆ ನಡೆಯುವ ಗಂಡನಂತೆ ವರ್ತಿಸುತ್ತಿದ್ದಾರೆ ಎಂದು ಭಾವಿಸುತ್ತಾರೆ. ಆದರೆ ಆರಂಭದಲ್ಲಿ, ನಾನೇನಾದರೂ ಪೋಷಕಳಾಗಿದ್ದು, ನನ್ನ 20 ವರ್ಷದ ಮಗಳು ಈಗಾಗಲೇ ಎರಡು ಬಾರಿ ಮದುವೆಯಾಗಿ, ಒಂದು ಮಗುವಿದ್ದು, ಇತರೆ ಹಲವಾರು ವದಂತಿಗಳಿಗೂ ಗುರಿಯಾಗಿರುವ 40 ವರ್ಷದ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರೆ ನನ್ನ ಪ್ರತಿಕ್ರಿಯೆ ಹೇಗಿರುತ್ತಿತ್ತು? ನನ್ನ ಪೋಷಕರು ಈ ವಿಷಯದಲ್ಲಿ ಬಹಳಷ್ಟು ಚೆನ್ನಾಗಿಯೇ ನಡೆದುಕೊಂಡಿದ್ದಾರೆ ಎಂದೇ ನಾನು ಭಾವಿಸುತ್ತೇನೆ ಎಂದು ಶುಭ್ರಾ ಶೆಟ್ಟಿ ತಿಳಿಸಿದ್ದಾರೆ.
ತಮ್ಮ ಪ್ರೇಮಕಥೆ ಮತ್ತು ಅದು ಹೇಗೆ ಪ್ರಾರಂಭವಾಯಿತು ಎಂಬುದರ ಕುರಿತು ಮತ್ತಷ್ಟು ಮುಕ್ತವಾಗಿ ಮಾತನಾಡಿರುವ ಶುಭ್ರಾ, ಇಲ್ಲಿ ವಯಸ್ಸಿನ ಅಂತರವು ತಲೆಕೆಳಗಾಗುತ್ತದೆ ಎಂದರು. ಅನುರಾಗ್​ ಅವರು ನೇರವಾಗಿ ಬಂದು ನನಗೆ ನಿನ್ನ ಮೇಲೆ ಪ್ರೀತಿಯಿದೆ ಎಂದು ಹೇಳಿದರು, ಆಗ ನಾನು ಒಂದು ಕ್ಷಣ ದಂಗಾಗಿ ಹೋದೆ. ನಿಮ್ಮಿಂದ ನನಗೆ ಯಾವುದೇ ನಿರೀಕ್ಷೆಗಳಿಲ್ಲ, ಏಕೆಂದರೆ ನೀವು ಇನ್ನೂ ಜೀವನವನ್ನು ನೋಡಬೇಕಿದೆ, ಆದರೆ ನಾನು ಈಗಾಗಲೇ ಜೀವನವನ್ನು ಅನುಭವಿಸಿದ್ದೇನೆ. ಹಾಗಾಗಿ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳುತ್ತಿದ್ದೇನೆಂದರೆ, ನಾನು ಏನು ಮಾತನಾಡುತ್ತಿದ್ದೇನೆ ಎಂಬುದು ನನಗೆ ತಿಳಿದಿದೆ ಎಂದು ಅನುರಾಗ್​ ಹೇಳಿದರು ಎಂದು ಶುಭ್ರಾ ಶೆಟ್ಟಿ ತಿಳಿಸಿದ್ದಾರೆ.
ನೀನು ಸ್ವಲ್ಪ ಸಮಯ ತೆಗೆದುಕೋ, ಜಗತ್ತನ್ನು ನೋಡು ಮತ್ತು ವಾಪಸ್ ಬಾ ಎಂದರು. ಬಳಿಕ ಅವರು ಅಳುತ್ತಾ, ನನಗಾಗಿ ನೀನು ಸಿದ್ಧಳಿದ್ದೀಯಾ ಮತ್ತು ಎಂದಿಗೂ ನನ್ನನ್ನು ಬಿಟ್ಟು ಹೋಗುವುದಿಲ್ಲ ಎಂಬುದು ನಿನಗೆ ಖಾತ್ರಿಯಿದೆಯೇ? ಎಂದು ಕೇಳಿದರು. ನಾವಿಬ್ಬರು ಆಗಾಗ್ಗೆ ಅಳುತ್ತೇವೆ, ನಮ್ಮಿಬ್ಬರ ನಡುವಿನ ಬಂಧ ಗಟ್ಟಿಯಾಗಲು ಅದೂ ಒಂದು ಕಾರಣ ಎಂದು ಶುಭ್ರಾ ವಿವರಿಸಿದ್ದಾರೆ. ಇದಕ್ಕೆ ಅನುರಾಗ್ ಸೇರಿಸುತ್ತಾ, ನಮ್ಮ ಬಾಂಧವ್ಯವು ಪುಸ್ತಕಗಳು, ಚಲನಚಿತ್ರಗಳು ಮತ್ತು ಪಾರ್ಟಿಗಳ ಮೇಲೆ ರೂಪುಗೊಂಡಿತು, ಅವಳು ನನ್ನಗಿಂತ ಹೆಚ್ಚು ಪಾಟ್ರಿಗಳಿಗೆ ಹೋಗುತ್ತಾಳೆ ಎಂದಿದ್ದಾರೆ.
ಜನರ ಟೀಕೆಗಳ ಬಗ್ಗೆ ಭಯವಿತ್ತೇ ಅಥವಾ ವಯಸ್ಸಿನ ಕಾರಣಕ್ಕೆ ಅಪಹಾಸ್ಯಕ್ಕೆ ಒಳಗಾಗುವೆನೆಂಬ ಚಿಂತೆಯಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅನುರಾಗ್, ನಮಗೆ ನಮ್ಮದೇ ಆದ ಸಮಸ್ಯೆಗಳಿದ್ದವು, ನೇರವಾಗಿ ಯಾರೂ ಅವಮಾನ ಮಾಡಲಿಲ್ಲವಾದರೂ ನಾವು ಸ್ವಯಂ ಪ್ರಜ್ಞೆಯಿಂದಇದ್ದೆವು ಎಂದಿದ್ದಾರೆ. ತಾನು ಅನುಭವಿಸಿದ ಜೀವನ ಮತ್ತು ಶುಭ್ರಾರ ವಯಸ್ಸಿನ ವ್ಯತ್ಯಾಸದ ಬಗ್ಗೆ ಮಾತನಾಡಿ, ತಾನು ಬೇಗ ವಯಸ್ಸಾಗುತ್ತಿರುವುದನ್ನು ಕಂಡು ನಾನೇ ಅವಳನ್ನು ದೂರವಿಡಲು ಯೋಚಿಸಿದ್ದೆ ಎಂದು ತಿಳಿಸಿದ್ದಾರೆ.
ತಮ್ಮ ವಯಸ್ಸಿನ ವ್ಯತ್ಯಾಸದ ಬಗ್ಗೆ ಇದ್ದ ಮುಜುಗರ ಮತ್ತು ಶುಭ್ರಾರ ವೃತ್ತಿಜೀವನಕ್ಕೆ ತಡೆಯಾಗಬಾರದೆಂಬ ಕಾರಣಕ್ಕೆ ನಾನು ಅವರನ್ನು ದೂರವಿಡಲು ಯೋಚಿಸಿದ್ದೆ ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ತಿಳಿಸಿದ್ದಾರೆ. ಆದರೆ ತಮ್ಮ ಜೀವನದಲ್ಲಿ ಅವಳೇ ಸರಿಯಾದ ಸಂಗಾತಿ ಎಂಬುದು ತಮಗೆ ಮೊದಲೇ ತಿಳಿದಿತ್ತು ಎಂದಿರುವ ಅವರು, 'ನಿಶಾಂಚಿ' ಚಿತ್ರದ ಸಂಪೂರ್ಣ ಚಿತ್ರೀಕರಣದ ವೇಳೆ ಶುಭ್ರಾ ಸೆಟ್‌ನಲ್ಲೇ ಇದ್ದಾಗ ತಮಗೆ ಈ ಸಂಬಂಧವೇ ಅಂತಿಮ ಎಂಬ ಸ್ಪಷ್ಟತೆ ಸಿಕ್ಕಿತು ಎಂದು ವಿವರಿಸಿದ್ದಾರೆ. ತಮ್ಮ ಈ ನಿರ್ಧಾರವನ್ನು ಸ್ವೀಕರಿಸಿ ಅದಕ್ಕಾಗಿ ಹೋರಾಡಲು ತಮಗೆ ಸ್ವಲ್ಪ ಸಮಯ ಹಿಡಿಯಿತು ಎಂದು ಅವರು ಹೇಳಿದ್ದಾರೆ.
ಇನ್ನು ಮುಂದೆ ತನಗೆ ಜನರು ಏನು ಹೇಳುತ್ತಾರೆ ಎಂಬುದು ಅಗತ್ಯವಿಲ್ಲ ಎಂದು ಹೇಳಿರುವ ಅನುರಾಗ್ ಕಶ್ಯಪ್, ಈ ಹಿಂದೆ ನಾನು ಮದ್ಯವ್ಯಸನಿಯಾಗಲು ಶೇ. 90ರಷ್ಟು ಇತರರ ಮಾತುಗಳಿಗೆ ಮನ್ನಣೆ ನೀಡುವುದೇ ಕಾರಣವಾಗಿತ್ತು ಎಂದಿದ್ದಾರೆ. ಮುಂಬೈಯಿಂದ ಹೊರಬಂದ ನಂತರ ತಮಗೆ ತಾವೇ ಸಮಯ ನೀಡುತ್ತಿರುವುದಾಗಿ ತಿಳಿಸಿರುವ ಅವರು, ಶುಭ್ರಾ ಮತ್ತು ಅವರ ಪೋಷಕರು ಆರಂಭದಿಂದಲೂ ಹಾಗೆಯೇ ಇದ್ದಾರೆ ಎಂದು ನೆನಪಿಸಿಕೊಂಡಿದ್ದಾರೆ. ವಿಶೇಷವೆಂದರೆ, ಶುಭ್ರಾ ಅವರ ತಾಯಿ ತಮಗಿಂತ 7-8 ವರ್ಷ ದೊಡ್ಡವರಾಗಿದ್ದರೂ ತಮಗೆ ಒಳ್ಳೆಯ ಸ್ನೇಹಿತರಾಗಿದ್ದಾರೆ ಎಂದು ತಿಳಿಸಿರುವ ಅನುರಾಗ್, ತಮ್ಮ ಇತ್ತೀಚಿನ ಬಿಡುಗಡೆಯಾದ ಬಾಬಿ ಡಿಯೋಲ್ ಅಭಿನಯದ 'ಬಂದರ್' ಚಿತ್ರದ ಬಗ್ಗೆಯೂ ಮಾತನಾಡಿದ್ದಾರೆ ಎಂದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net