ಸೂರಜ್ ಪಾಂಚೋಲಿ ದಿಶಾ ಸಾಲಿಯಾನ್ ಅವರನ್ನು ಭೇಟಿಯಾಗಿಲ್ಲ ಎಂದು ನಿರಾಕರಿಸಿದ್ದಾರೆ
Published on:
Copied
Follow Us
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಕೆಲವೇ ದಿನಗಳ ಮೊದಲು ನಿಗೂಢವಾಗಿ ಮೃತಪಟ್ಟಿದ್ದ ಟ್ಯಾಲೆಂಟ್ ಮ್ಯಾನೇಜರ್ ದಿಶಾ ಸಾಲಿಯನ್ ಸಾವಿನ ಪ್ರಕರಣ ಈಗ ಮತ್ತೊಮ್ಮೆ ಹೊಸ ತಿರುವನ್ನು ಪಡೆದುಕೊಂಡಿದೆ.
ಬಾಂಬೆ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಸಿಬಿಐ (CBI) ಈ ಪ್ರಕರಣದಲ್ಲಿ ಹೊಸ ಎಫ್‌ಐಆರ್ ದಾಖಲಿಸಿದ್ದು, ಇದರಲ್ಲಿ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ, ಪುತ್ರ ಆದಿತ್ಯ ಠಾಕ್ರೆ, ನಟಿ ರಿಯಾ ಚಕ್ರವರ್ತಿ ಮೊದಲಾದವರು ಹೆಸರುಗಳು ಸೇರಿದೆ.
ಹಾಗೆಯೇ, ಕ್ರಿಮಿನಲ್ ಪಿತೂರಿ, ಆತ್ಮಹತ್ಯೆಯ ಸುಳ್ಳು ಕಥೆ ಸೃಷ್ಟಿಸುವುದು ಮತ್ತು ಸಾಕ್ಷ್ಯಗಳನ್ನು ಮುಚ್ಚಿಹಾಕಿದ ಆರೋಪದಡಿ ನಟರಾದ ಡಿನೋ ಮೋರಿಯಾ, ಸೂರಜ್ ಪಂಚೋಲಿ (Sooraj Pancholi), ರಿಯಾ ಚಕ್ರವರ್ತಿ ಹಾಗೂ ಅವರ ಸಹೋದರ ಶೋವಿಕ್ ಚಕ್ರವರ್ತಿ ಅವರ ಹೆಸರುಗಳೂ ಈ ಪಟ್ಟಿಯಲ್ಲಿವೆ.
ನಾನು ದಿಶಾಳನ್ನು ಬೇಟಿಯೇ ಮಾಡಿಲ್ಲ!
ಸಿಬಿಐ ಸಲ್ಲಿಸಿರುವ ನೂತನ ಎಫ್‌ಐಆರ್ ನಲ್ಲಿ ತಮ್ಮ ಹೆಸರನ್ನು ನೋಡಿ ಪ್ರತಿಕ್ರಿಯಿಸಿರುವ ನಟ ಸೂರಜ್ ಪಂಚೋಲಿ, ನಾನು ದಿಶಾ ಸಾಲಿಯಾನ್ ರನ್ನು ನನ್ನ ಜೀವನದಲ್ಲಿ ಒಮ್ಮೆಯೋ ಬೇಟಿಯಾಗಿಲ್ಲ, ಹಾಗೆಯೇ ಆದಿತ್ಯ ಠಾಕ್ರೆ ಪರಿಚಯ ನನಗಿಲ್ಲ ಎಂದಿದ್ದಾರೆ.
ನಾನು ಕಳೆದ 4-5 ವರ್ಷಗಳಿಂದ ಈ ಪ್ರಕರಣದಲ್ಲಿ ಸಿಲುಕಿಕೊಂಡಿದ್ದೇನೆ. ನನಗೆ ಈ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲ ಆದರೂ ನಿರಂತರ ಪೊಲೀಸ್ ವಿಚಾರಣೆಗೆ ಹಾಜರಾಗಿದ್ದೇನೆ. ನನಗೆ ತಿಳಿದಿರುವ ಎಲ್ಲ ಮಾಹಿತಿಗಳನ್ನು ಈಗಾಗಲೇ, ತನಿಖಾಧಿಕಾರಿಗಳಿಗೆ ತಿಳಿಸಿದ್ದೇನೆ. ನನಗೆ ಮುಚ್ಚಿಡಲು ಯಾವುದೇ ಸಂಗತಿಗಳಿಲ್ಲ ಎಂದು ಪಂಚೋಲಿ ಹತಾಶರಾಗಿ ನುಡಿದ್ದಿದ್ದಾರೆ.
ನನಗೆ ತುಂಬಾ ಬೇಜಾರಾಗಿದೆ!
ದಿಶಾ ಸಾಲಿಯಾನ್ ಪರಿಚಯ ನನಗಿಲ್ಲದಿದ್ದರೂ, ಆಕೆಯ ಸಾವಿನ ಬಗ್ಗೆ ನನಗೆ ಬೇಸರವಿದೆ, ಅದೇನಾದರೂ ಕೊಲೆಯಾಗಿದ್ದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ನಾನು ಬಯಸುತ್ತೇನೆ. ಆದರೆ ನನಗೆ, ಆಕೆಯ ಸಾವಿಗೆ ಯಾವುದೇ ಸಂಬಂಧವಿಲ್ಲ. ಆದರೆ ನಾನು ಪದೇ-ಪದೇ ಪೊಲೀಸ್ ವಿಚಾರಣೆಗೆ ತೆರಳಿ ಮಾನಸಿಕವಾಗಿ ಕುಗ್ಗಿದ್ದೇನೆ ಎಂದಿದ್ದಾರೆ.
ನನಗೆ ಹಾಗೂ ದಿಶಾ ಸಾಲಿಯಾನ್ಗೆ ನೇರ ಸಂಪರ್ಕವಿತ್ತು ಎಂದು ಹೇಳುವ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ, ಆದರೂ ನಾನು ಎಲ್ಲಾ ರೀತಿಯ ತನಿಖೆಗೆ ಸಹಕರಿಸಿದ್ದೇನೆ. ಆದರೆ ಕೆಲ ಮಾಧ್ಯಮಗಳಲ್ಲಿ ನನ್ನ ಬಗ್ಗೆ ತಪ್ಪಾದ ನಿರೂಪಣೆ ಕೇಳಿಬಂದಿದೆ ಇರದಿಂದ ನನಗೆ ಬಹಳ ಬೇಜಾರಾಗಿದೆ ಎಂದು ಪಂಚೋಲಿ ಹೇಳಿದ್ದಾರೆ.
ಇನ್ನೂ ಸೋಷಿಯಲ್ ಮೀಡಿಯಾನಲ್ಲಿ ನಾನೇ ದಿಶಾಳನ್ನು ಕೊಲೆ ಮಾಡಿದ್ದೇನೆ ಎಂಬ ರೀತಿಯಲ್ಲಿ ಕೆಲ ಪೋಸ್ಟ್ಗಳು ಹರಿದಡುತ್ತಿದೆ. ಆದರೆ ಇವೆಲ್ಲಾ ಶುದ್ಧ ಸುಳ್ಳಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪೋಸ್ಟ್ಗಳನ್ನು ಸಾಕ್ಷಿ ಎಂದು ಪರಿಗಣಿಸಲಾಗುವುದಿಲ್ಲ. ದಯವಿಟ್ಟು ಸುಳ್ಳು ಅಥವಾ ದಾರಿ ತಪ್ಪಸುವ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ನನಗೆ ಭಾರತದ ನ್ಯಾಯಾಂಗದ ಮೇಲೆ ನಂಬಿಕೆಯಿದೆ. ನನಗೆ ತನಿಖಾ ಸಂಸ್ಥೆಗಳ ಮೇಲೆ ವಿಶ್ವಾಸವಿದೆ. ಸತ್ಯ ಖಂಡಿತವಾಗಿ ಹೊರಬರುತ್ತದೆ. ಸತ್ಯಾಂಶಗಳ ಆಧಾರದಲ್ಲಿ ಚರ್ಚೆ ನಡೆಯಲಿ, ನ್ಯಾಯ ಖಂಡಿತ ದೊರೆಯಲಿದೆ ಎಂದು ಸೂರಜ್ ಪಂಚೋಲಿ ಹೇಳಿದ್ದಾರೆ, (ಏಜೆನ್ಸೀಸ್).