ರಜತ್ ದಲಾಲ್ ಅವರ ಮದುವೆ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಶುಭಾಶಯಗಳ ಸಮುದ್ರವೇ ಹರಿದುಬಂದಿದೆ. ಖ್ಯಾತ ಟಿಕ್ಟಾಕರ್ ಫೈಸು, ವೈವಾಹಿಕ ಜೀವನ ಶುಭಕರವಾಗಿರಲಿ ಎಂದು ಹೇಳಿದರೆ, ನಟಿ ಊರ್ವಶಿ ಡೋಲಕಿಯಾ, ನಿನ್ನ ಮದುವೆ ಸುದ್ದಿ ಕೇಳಿ ಬಹಳ ಸಂತೋಷವಾಯಿತು, ನಿಮ್ಮಿಬ್ಬರ ಸಂಸಾರ ಸುಖಕರವಾಗಿರಲಿ ಎಂದು ಹಾರೈಸಿದ್ದಾರೆ. ಸರಿಸುಮಾರು 35,000 ಕಮೆಂಟ್ಗಳು ಇವರ ಈ ಫೋಟೊಗೆ ಹರಿದು ಬಂದಿದೆ.