ಈ ಪಾಪಿಗಳನ್ನು ಮರೆಯುವುದಿಲ್ಲ: 168 ಮಕ್ಕಳ ಸಾವಿಗೆ ಕಾರಣರಾದ ಯುಎಸ್​ ಸೇನಾಧಿಕಾರಿಗಳ ಫೋಟೋ ರಿಲೀಸ್ ಮಾಡಿದ ಇರಾನ್! Iran Releases Photos

ಮಿನಾಬ್​ ಶಾಲೆಯ ಮೇಲೆ ದಾಳಿಗೆ ಆದೇಶ ನೀಡಿದ್ದ ಅಧಿಕಾರಿಗಳ ಫೋಟೊ ರೀಲಿಸ್​ ಮಾಡಿದ ಇರಾನ್​
ಮಿನಾಬ್​ ಶಾಲೆಯ ಮೇಲೆ ದಾಳಿಗೆ ಆದೇಶ ನೀಡಿದ್ದ ಅಧಿಕಾರಿಗಳ ಫೋಟೊ ರೀಲಿಸ್​ ಮಾಡಿದ ಇರಾನ್​
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಸಂಘರ್ಷ
  • ಮಿನಾಬ್​ ಶಾಲೆಯ ಮೇಲೆ ದಾಳಿಗೆ ಆದೇಶ ನೀಡಿದ್ದ ಅಧಿಕಾರಿಗಳ ಫೋಟೊ ರೀಲಿಸ್​ ಮಾಡಿದ ಇರಾನ್​
  • 168 ಮಕ್ಕಳ ಜೀವ ತೆಗೆದ ಈ ಪಾಪಿಗಳನ್ನು ಮರೆಯಲ್ಲ ಎಂದು ಎಕ್ಸ್​ನಲ್ಲಿ ಫೋಸ್ಟ್
ಟೆಹ್ರಾನ್​: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಪ್ರಾರಂಭವಾಗಿ ಸುಮಾರು ಒಂದು ತಿಂಗಳು ಕಳೆದರೂ ಉಭಯ ಪಾಳಯದಲ್ಲಿ ಇನ್ನೂ ಶಾಂತಿ ಮಂತ್ರದ ಬದಲು ಸೇಡಿನ ಜ್ವಾಲೆಯೇ ಹೆಚ್ಚುತ್ತಿದೆ.
ಭಾರತ ಸೇರಿದಂತೆ ತನ್ನ ಐದು ಮಿತ್ರ ದೇಶಗಳಿಗೆ ಮಾತ್ರ ಹಾರ್ಮುಜ್​ ಜಲಸಂಧಿಯನ್ನು ತೆರೆದಿರುವ ಇರಾನ್​ ಈಗ ಫೆ. 28 ರಂದು ಮಿನಾಬ್​ ಶಾಲೆಯ ಮೇಲೆ ದಾಳಿಗೆ ಆದೇಶ ನೀಡಿದ್ದ ಅಮೆರಿಕದ ಸೇನಾಧಿಕಾರಿಗಳ ಭಾವಚಿತ್ರವನ್ನು (Iran Releases Photos) ಪ್ರಕಟಿಸಿದೆ.

ಈ ಪಾಪಿಗಳನ್ನು ನೆನಪಿಟ್ಟುಕೊಳ್ಳಿ!

ಇರಾನಿನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯ ಸಾವಿನ ಬಳಿಕ ಪ್ರಾರಂಭವಾದ ಈ ಸಂಘರ್ಷದಲ್ಲಿ ಇಲ್ಲಿವೆರೆಗೆ ಸಾರಿರಾರು ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಫೆ. 28 ರಂದು ಅಮೆರಿಕದ ವಿಮಾನಗಳು ಇರಾನಿನ ವಾಯು ಪ್ರದೇಶವನ್ನು ಪ್ರವೇಶಿಸಿ ಮಿನಾಬ್​ನಲ್ಲಿರುವ ಶಾಲೆಯ ಮೇಲೆ ಮಿಸೈಲ್​ ದಾಳಿ ನಡೆಸಿ 168 ಮಕ್ಕಳು ಸೇರಿದಂತೆ ಒಟ್ಟು 175 ಜನರ ಸಾವು ಸಂಭವಿಸಿದೆ ಎಂದು ಇರಾನ್​ ಹೇಳಿತ್ತು.
ಈಗ ಈ ದಾಳಿಗೆ ನಿರ್ದೇಶನ ಮತ್ತು ಆದೇಶ ನೀಡಿದ ಇಬ್ಬರು ಸೇನಾಧಿಕಾರಿಗಳಾದ, ಲೀ ಆರ್ ಟೇಟ್ ಮತ್ತು ಜೆಫ್ರಿ ಇ ಯಾರ್ಕ್ ಅವರ ಭಾವಚಿತ್ರವನ್ನು ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ. ಈ ಇಬ್ಬರು ಅಧಿಕಾರಿಗಳೇ ನಮ್ಮ ದೇಶದ ನಿರಪರಾಧಿ 168 ಮಕ್ಕಳ ಸಾವಿಗೆ ಕಾರಣಿಕರ್ತರು, ಈ ಪಾಪಿಗಳನ್ನು ನಾವು ಎಂದಿಗೂ ಕ್ಷಮಿಸುವುದಿಲ್ಲ ಹಾಗೆಯೇ ಮರೆಯುವುದಿಲ್ಲ ಎಂದು ಇರಾನ್​ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದೆ. 

ಆರೋಪವನ್ನು ಅಲ್ಲಗೆಳೆದಿದ್ದ ಅಮೆರಿಕ!

ಆದರೆ ಇರಾನ್​ ಮಾಡಿದ್ದ ಈ ಆರೋಪವನ್ನು ತಿರಸ್ಕರಿಸಿದ್ದ ಅಮೆರಿಕ, ನಾವೆಂದು ನಾಗರಿಕ ಸ್ಥಳಗಳನ್ನು ಗುರಿಯಾಗಿಸಿ ದಾಳಿ ಮಾಡುವುದಿಲ್ಲ, ನಮ್ಮ ಗುರಿ ಏನಿದ್ದರೂ ಇರಾನಿನ ಮಿಲಿಟರಿ ತಾಣವಾಗಿದೆ. 
ನಮಗೆ ಇರಾನಿನ ಜನರ ಸುರಕ್ಷತೆಯೇ ಮೊದಲ ಆದ್ಯತೆಯಾಗಿದೆ. ಪ್ರಜೆಗಳು ಇರಾನಿನ ಆಡಳಿತದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ, ಹೀಗಾಗಿ ಇರಾನ್​ ನಮ್ಮ ಮೇಲೆ ಸುಳ್ಳು ಆರೋಪವನ್ನು ಮಾಡುತ್ತಿದೆ ಎಂದು ಅಮೆರಿಕ ಹೇಳಿಕೆ ನೀಡಿತ್ತು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net