ಮೊನಾಲಿಸಾ ಸುಳ್ಳು ಹೇಳುತ್ತಿದ್ದಾಳೆ: ಲವ್​ ಜಿಹಾದ್​ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಚಾರಿತ್ರ್ಯವಧೆ; ಕುಂಭಮೇಳ ಗರ್ಲ್​ ಮೊಲಾಸ್ಟೇಶನ್​ ಆರೋಪಕ್ಕೆ ಸನೋಜ್​ ಮಿಶ್ರಾ ತಿರುಗೇಟು! Sanoj Mishra on Monalisa

ನಾನು ಲವ್​ ಜಿಹಾದ್​ ಬಗ್ಗೆ ಮಾತನಾಡಿದಕ್ಕೆ ನನ್ನ ಮೇಲೆ ಸುಳ್ಳ ಆರೋಪ ಮಾಡಲಾಗುತ್ತಿದೆ ಎಂದ ನಿರ್ದೇಶಕ
ನಾನು ಲವ್​ ಜಿಹಾದ್​ ಬಗ್ಗೆ ಮಾತನಾಡಿದಕ್ಕೆ ನನ್ನ ಮೇಲೆ ಸುಳ್ಳ ಆರೋಪ ಮಾಡಲಾಗುತ್ತಿದೆ ಎಂದ ನಿರ್ದೇಶಕ
Published on

ಪ್ರಮುಖ ಮುಖ್ಯಾಂಶಗಳು

  • ಮೊನಾಲಿಸಾಳ ಮದುವೆ ಲವ್​ ಜಿಹಾದ್ ಎಂದಿದ್ದ ಸನೋಜ್​ ಮಿಶ್ರಾ
  • ಶೂಟಿಂಗ್​ ವೇಳೆ ಮಿಶ್ರಾ ನನ್ನ ಮೈ ಮುಟ್ಟುತಿದ್ದ ಎಂದ ಮೊನಾಲಿಸಾ ಭೋಸ್ಲೆ
  • ನಾನು ಲವ್​ ಜಿಹಾದ್​ ಬಗ್ಗೆ ಮಾತನಾಡಿದಕ್ಕೆ ನನ್ನ ಮೇಲೆ ಸುಳ್ಳ ಆರೋಪ ಮಾಡಲಾಗುತ್ತಿದೆ ಎಂದ ನಿರ್ದೇಶಕ
  • ಮೊನಾಲಿಸಾ ಮಾಡಿರವ ಆರೋಪಗಳೆಲ್ಲವೂ ಆಧಾರ ರಹಿತ ಹಾಗೂ ಸಂಪೂರ್ಣ ಸುಳ್ಳೆಂದ ಸನೋಜ್​ ಮಿಶ್ರಾ
ನವದೆಹಲಿ: ಕುಂಭಮೇಳದಲ್ಲಿ ತನ್ನ ವಿಶಿಷ್ಟ ಕಣ್ಣುಗಳ ಮೂಲಕ ಮಣಿ ಸರಗಳನ್ನು ಮಾರುವ ಮೂಲಕ ಸಾಮಾಜಿಕ ಮಾಧ್ಯದಲ್ಲಿ ವೈರಲ್​ ಆಗಿದ್ದ ಮೊನಾಲಿಸಾ ಭೋಸ್ಲೆ ಅಲಿಯಾಸ್​ ಕುಂಭಮೇಳ ಗರ್ಲ್​ ಈಗ ತನ್ನ ಮದುವೆ ಸುದ್ದಿ ಮೂಲಕ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದಾಳೆ.
ಕೆಲ ದಿನದ ಹಿಂದೆ ಉತ್ತರ ಪ್ರದೇಶದ ಫರ್ಮಾನ್​ ಖಾನ್​ ಎಂಬ ಯುವಕನನ್ನು ಮೊನಾಲಿಸಾ ಮದುವೆಯಾದ ನಂತರ ಹಲವಾರು ಅಪಾದನೆಗಳು ಈ ಜೋಡಿಯ ಮೇಲೆ ಭರಲಾರಂಭಿಸಿದವು. ಮೊನಾಲಿಸಾ ಲವ್ ಜಿಹಾದ್​ಗೆ ಬಲಿಯಾಗಿದ್ದಾಳೆ ಎಂದು  ಫರ್ಮಾನ್​ ಖಾನ್​ನನ್ನು ಕೊಲ್ಲುವುದಾಗಿ ಬೆದರಿಕೆ ಸಹ ಬರುತ್ತಿವೆ ಎಂದು ಮೊನಾಲಿಸಾ ದುಃಖ ತೋಡಿಕೊಂಡಿದ್ದಳು.

ಮೊನಾಲಿಸಾ ಸುಳ್ಳು ಆರೋಪ ಮಾಡುತ್ತಿದ್ದಾಳೆ!

ಇತ್ತೀಚೆಗೆ ಮೊನಾಲಿಸಾ ಪತ್ರಿಕಾಗೋಷ್ಠಿಯೊಂದರಲ್ಲಿ ನಿರ್ದೇಶಕ ಸನೋಜ್​ ಮಿಶ್ರಾ (Sanoj Mishra to Monalisa) ನೀಡಿರುವ ಹೇಳಿಕೆ ಎಲ್ಲಾ ಸುಳ್ಳು ನಾನು ಯಾವುದೇ ಲವ್​ ಜಿಹಾದ್​ಗೆ ಬಲಿಯಾಗಿಲ್ಲ, ಬದಲಿಗೆ ಈ ಸನೋಜ್​ ಮಿಶ್ರಾ ಶೂಟಿಂಗ್​ ಸಂದರ್ಭದಲ್ಲಿ ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದ ಎಂದು ಆರೋಪಿಸಿದ್ದಾಳೆ.
ಮೊನಾಲಿಸಾಳ ಆರೋಪಕ್ಕೆ ಉತ್ತರ ನೀಡಿರುವ ಸನೋಜ್​ ಮಿಶ್ರಾ, ಇಕೆ ನನ್ನ ಮೇಲೆ ಮಾಡುತ್ತಿರುವ ಆರೋಪಗಳೆಲ್ಲಾ ಸುಳ್ಳಾಗಿದೆ. ನಾನು ಲವ್​ ಜಿಹಾದ್ ಮತ್ತು ಒತ್ತಾಯಪೂರ್ವಕ ಮತಾಂತರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಕಾರಣ ಕೇರಳದ ಮುಸ್ಲಿಂ ಹಾಗೂ ಕ್ರಿಶ್ಚಿಯನ್​ ಮತಾಂತರಿಗಳು ನನ್ನ ಮೇಲೆ ಈ ಮೊನಾಲಿಸಾಳನ್ನು ಎತ್ತಿ ಕಟ್ಟಿದ್ದಾರೆ ಎಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಮೊನಾಲಿಸಾ ಮತ್ತು ಸನೋಜ್​ ಮಿಶ್ರಾ ಸಂಬಂಧ

ಈ ಮೊನಾಲಿಸಾ ಕುಂಭಮೇಳದಲ್ಲಿ ಖ್ಯಾತಿ ಗಳಿಸಿದ ನಂತರ ಸಿನಿಮಾ ನಿರ್ದೇಶಕ ಸನೋಜ್​ ಮಿಶ್ರಾ ಮೊನಾಲಿಸಾಳನ್ನು ಹಾಕಿಕೊಂಡು ಸಿನಿಮಾವೊಂದನ್ನು ಮಾಡಲು ಮುಂದಾಗಿದ್ದರು. ಈಗ ಇಕೆ ಮದುವೆಯಾದ ಹಿನ್ನಲೆ ಈ ಸಿನಿಮಾ ಅರ್ಧಕ್ಕೆ ನಿಂತು ಹೋಗಿದೆ. ಮೊನಾಲಿಸಾಳ ಮದುವೆ ಕುರಿತು ಹೇಳಿಕೆ ನೀಡಿದ್ದ ಸನೋಜ್​ ಮಿಶ್ರಾ, ಇದು ಲವ್ ಜಿಹಾದ್​ಗೆ ತಾಜಾ ಉದಾಹರಣೆಯಾಗಿದೆ. ಇದು ನಿಜವಾದ ಕೇರಳ ಸ್ಟೋರಿ ಎಂದು ಅವರು ಹೇಳಿದ್ದರು.

ಮೊನಾಲಿಸಾ ಮಾಡಿದ ಆರೋಪವೇನು?

ಇದಕ್ಕೆ ಕೌಂಟರ್​ ಕೊಟ್ಟ ಮೊನಾಲಿಸಾ, ಸನೋಜ್​ ಮಿಶ್ರಾರ ಚಾರಿತ್ರ್ಯದ ಬಗ್ಗೆ ಆರೋಪ ಮಾಡಿದ್ದು, ನಿರ್ದೇಶಕ ಮಿಶ್ರಾ ಸಿನಿಮಾ ಸೆಟ್​ನಲ್ಲಿ ನನ್ನ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ, ಪದೇ ಪದೇ ನನ್ನ ದೇಹವನ್ನು ಮುಟ್ಟುತ್ತಿದ್ದ. ಇದು ನನ್ನ ಮೊದಲ ಸಿನಿಮಾವಾಗಿದ್ದ ಹಿನ್ನಲೆ ಇದನ್ನೆಲ್ಲ ನಾವು ಮೌನವಾಗಿ ಸಹಿಒಸಿಕೊಂಡಿದ್ದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮೊನಾಲಿಸಾ ಬೇಸರ ಹೊರಹಾಕಿದ್ದರು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net