ಧುರಂಧರ್ ಸ್ಟಾರ್‌ಗೆ ರಾಜಾತಿಥ್ಯ: ಸಂಜಯ್ ದತ್ ಕೆನ್ನೆಗೆ ಮುತ್ತಿಟ್ಟು, ಗೋಲ್ಟನ್​ ಐಫೋನ್ ಕೊಟ್ಟ ಪಾಕ್​ ಅಭಿಮಾನಿ | Sanjay Dutt

 ಸಂಜು ಬಾಬಾ ಖ್ಯಾತಿಯ ಬಾಲಿವುಡ್​ ನಟ ಸಂಜಯ್​ ದತ್ (Sanjay Dutt)
ಸಂಜು ಬಾಬಾ ಖ್ಯಾತಿಯ ಬಾಲಿವುಡ್​ ನಟ ಸಂಜಯ್​ ದತ್ (Sanjay Dutt)
Published on

ಪ್ರಮುಖ ಮುಖ್ಯಾಂಶಗಳು

  • ದುಬೈ ಪ್ರವಾಸದಲ್ಲಿರುವ ನಟ ಸಂಜಯ್​ ದತ್
  • ಚಿನ್ನ ಲೇಪಿತ ಐಫೋನ್​ ಉಡುಗೊರೆ ನೀಡಿದ ಪಾಕ್​ ಅಭಿಮಾನಿ
  • ಸಂಜು ಬಾಬಾ ಕೆನ್ನೆಗೆ ಮುತ್ತಿಕ್ಕಿದ ಕಾಶಿಫ್ ಜಮೀರ್
ದುಬೈ: ಸಂಜು ಬಾಬಾ ಖ್ಯಾತಿಯ ಬಾಲಿವುಡ್​ ನಟ ಸಂಜಯ್​ ದತ್ (Sanjay Dutt) ಅವರಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅಭಿಮಾನಿಗಳಿರುವುದು ಹೊಸ ಸುದ್ದಿಯಲ್ಲ. ಆದರೆ ಇತ್ತೀಚೆಗೆ ದುಬೈನಲ್ಲಿ ವಿಶೇಷ ಅಭಿಮಾನಿಯೊಬ್ಬ ಸಂಜಯ್​ ದತ್​ರನ್ನು ಭೇಟಿಯಾಗಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸುದ್ದಿಯಾಗುತ್ತಿದೆ.

ಚಿನ್ನದ ಐಫೋನ್​ ಕೊಟ್ಟ ಅಭಿಮಾನಿ!

ಸಂಜಯ್​ ದತ್ ಇತ್ತೀಚೆಗೆ ದುಬೈಗೆ ಹೋಗಿದ್ದಾಗ ಕಾಶಿಫ್ ಜಮೀರ್ ಎಂಬ ಪಾಕಿಸ್ತಾನ ಮೂಲದ ಅಭಿಮಾನಿ ಭೇಟಿಯಾಗಿದ್ದು, ಇವನು ಸಂಜು ಬಾಬಾಗೆ ಚಿನ್ನ ಲೇಪಿತ ಐಫೋನ್​ 17 ನ್ನು ಉಡುಗೊರೆಯಾಗಿ ನೀಡಿದ್ದಾನೆ. 
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೊಗಳಲ್ಲಿ  ಕಾಶಿಫ್ ಜಮೀರ್ ಸಂಜಯ್​ ದತ್ ಅವರ ಬಳಿ ಕುಳಿತುಕೊಂಡಿದ್ದು, ಸ್ವರ್ಣ ಲೇಪಿತ ಐಫೋನ್​ನ್ನು ನೀಡಿ, ಬಾಬಾನ ಕೆನ್ನೆಗೆ ಮತ್ತು ಕೊಟ್ಟಿರುವ ಫೋಟೊ ಸಖತ್​ ವೈರಲ್​ ಆಗುತ್ತಿದೆ. 
ಇದರ ಜೊತೆಗೆ ಸಂಜಯ್​ ದತ್​ ಅವರ ಪತ್ನಿ ಮಾನ್ಯತಾ ಅವರಿಗೆ ದುಬಾರಿ ಆಭರಣದ ಸೆಟ್​ನ್ನು ನೀಡಿರುವುದಾಗಿ ತಿಳಿದು ಬಂದಿದೆ. ಈ ಉಡುಗೊರೆಯನ್ನು ನೀಡುತ್ತಿರುವ ವಿಡಿಯೋವನ್ನು ಖುದ್ದು ಕಾಶಿಫ್ ಜಮೀರ್ ಅವರೇ ತಮ್ಮ ಇನ್​​ಸ್ಟಾಗ್ರಾಮ್​ ಮೂಲಕ ಹಂಚಿಕೊಂಡಿದ್ದಾರೆ.

ಯಾರಿ  ಕಾಶಿಫ್ ಜಮೀರ್ ?

ಸಾಮಾಜಿಕ ಜಾಲತಾಣದಲ್ಲಿ ತನ್ನ ಐಷಾರಾಮಿ ಜೀವನದ ಪ್ರದರ್ಶನದ ಮೂಲಕ ಖ್ಯಾತಿ ಗಳಿಸಿರುವ ಕಾಶಿಫ್ ಜಮೀರ್, ಮೂಲತಃ ಪಾಕಿಸ್ತಾನದವರು. ಇವರು ಇಂರ್ಟನೆಟ್​ ಲೋಕದಲ್ಲಿ ಐಷಾರಾಮಿ ಕಾರುಗಳು, ದುಬಾರಿ ಉಡುಗೊರೆಗಳನ್ನು ನೀಡುವ ಮೂಲಕವೇ ಜನಪ್ರೀಯತೆಯನ್ನು ಗಳಿಸಿದ್ದಾರೆ. 
ಧುರಂಧರ್​ನಲ್ಲಿ ಸಂಜು ಬಾಬಾ ಅಬ್ಬರ!
ರಣವೀರ್​ ಸಿಂಗ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಹಾಗೂ ಆದಿತ್ಯ ಧರ್​ ನಿರ್ದೇಶನದ ಧುರಂಧರ್​ ಸಿನಿಮಾದಲ್ಲಿ ಸಂಜಯ್ ದತ್ ಪಾಕಿಸ್ತಾನದ ಖಡಕ್​ ಪೊಲೀಸ್​ ಅಧಿಕಾರಿ ಚೌಧರಿ ಅಸ್ಲಂ ಪಾತ್ರವನ್ನು ಮಾಡಿ ಮಿಂಚಿದ್ದರು.
ಈಗ ಈ ಸಿನಿಮಾದ ಮುಂದಿನ ಭಾಗ ಮಾರ್ಚ್​ 19 ರಂದು ಬಿಡುಗಡೆಯಾಗಲಿದ್ದು, ಈ ಭಾಗದಲ್ಲಿ ಸಹ ಸಂಜಯ್​ ದತ್ ತಮ್ಮ ಜಬರ್​ದಸ್ತ್​ ಆಕ್ಷನ್​ ಮೂಲಕ ಪ್ರೇಕ್ಷಕರ ಹೃದಯ ಗೆಲ್ಲುವುದು ಖಚಿತ ಎನ್ನುವುದು ಬಾಬಾರ ಅಭಿಮಾನಿಗಳ ಭವಿಷ್ಯವಾಣಿಯಾಗಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net