9 ವರ್ಷ ಹಿರಿಯ ನಟಿ ಜೊತೆ ಜೈಸ್ವಾಲ್​ ಡೇಟಿಂಗ್​​? ತಮಿಳು ನಟನ ಬಳಿಕ ಕ್ರಿಕೆಟರ್​ ಜೊತೆ ಮೃಣಾಲ್​ ಲವ್ವಿ-ಡವ್ವಿ ವದಂತಿ! Yashasvi Jaiswal and Mrunal Thakur

 ಕ್ರಿಕೆಟರ್ ಯಶಸ್ವಿ ಜೈಸ್ವಾಲ್ ಜೊತೆ ನಟಿ ಮೃಣಾಲ್ ಠಾಕೂರ್ ಡೇಟಿಂಗ್?
ಕ್ರಿಕೆಟರ್ ಯಶಸ್ವಿ ಜೈಸ್ವಾಲ್ ಜೊತೆ ನಟಿ ಮೃಣಾಲ್ ಠಾಕೂರ್ ಡೇಟಿಂಗ್?
Published on

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟರ್ ಯಶಸ್ವಿ ಜೈಸ್ವಾಲ್ ಜೊತೆ ನಟಿ ಮೃಣಾಲ್ ಠಾಕೂರ್ ಡೇಟಿಂಗ್?
  • ಮುಂಬೈನ ಕೇಫ್‌ವೊಂದರಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ವಿಡಿಯೋ ವೈರಲ್
  • ವಿಡಿಯೋ ವೈರಲ್ ಬಳಿಕ ಪ್ರಾರಂಭವಾದ ವದಂತಿ
ಕ್ರಿಕೆಟ್​: ಭಾರತದಲ್ಲಿ ಬಾಲಿವುಡ್​ ಮತ್ತು ಟೀಂ ಇಂಡಿಯಾ ಸಂಬಂಧ ಇತಿಹಾಸದಷ್ಟೇ ಪುರಾತನವಾದದು ಎಂದರೂ ತಪ್ಪಾಗದು. ಬಾಲಿವುಡ್​ ನಟ/ನಟಿಯರು ಕ್ರಿಕೆಟ್​​ ತಾರೆಗಳ ಜೊತೆ ಡೇಟ್, ಅಫೇರ್​​ ಹಾಗೂ ಕೆಲವೊಂದಿಷ್ಟು ಜನ ಸಪ್ತಪದಿಯನ್ನು ತುಳಿದಿದ್ದಾರೆ.
ಬಾಲಿವುಡ್​ ಮತ್ತು ಕ್ರಿಕೆಟ್​ ನಡುವಿನ ಸಂಬಂಧಕ್ಕೆ ಅತ್ಯುತ್ತಮ ಉದಾಹರಣೆಯಾಗಿ ರನ್​ ಮಷಿನ್​ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರನ್ನು ತೆಗೆದುಕೊಳ್ಳಬಹುದು. ಇವರಂತೆ ಇನ್ನು ಅನೇಕರು ಬಾಲಿವುಡ್​ ನಟಿಯರ ಜೊತೆ ಸಂಬಂಧ ಹೊಂದಿರುವ ವದಂತಿಗಳನ್ನು ಕೇಳಿರುತ್ತೇವೆ.
ಈಗ ಹೊಸದೊಂದು ವದಂತಿ ಕ್ರಿಕೆಟ್​ ಮೈದಾನದಲ್ಲಿ ಹಾಗೂ ಬಿಟೌನ್​ನಲ್ಲಿ ಸಂಚರಿಸುತ್ತಿದ್ದು. ಭಾರತ ತಂಡದ ಓಪನಿಂಗ್​ ಆಟಗಾರ ಯಶಸ್ವಿ ಜೈಸ್ವಾಲ್​​ ತನಗಿಂತ 9 ವರ್ಷ ಹಿರಿಯ ನಟಿಯೊಬ್ಬಳನ್ನು ಡೇಟ್​ (Yashasvi Jaiswal and Mrunal Thakur) ಮಾಡುತ್ತಿದ್ದಾರೆ ಎಂಬ ಗುಮಾನಿ ಕೇಳಿರುತ್ತಿದೆ.

ಮೃಣಾಲ್​ ಜೊತೆ ಜೈಸ್ವಾಲ್​ ಡೇಟಿಂಗ್​?

ಹೌದು, ಕಳೆದ ಕೆಲ ದಿನಗಳಿಂದ 33 ವರ್ಷದ ಬಾಲಿವುಡ್ ನಟಿ ಮೃಣಾಲ್​ ಠಾಕೂರ್​ 24 ವರ್ಷದ ಯಶಸ್ವಿ ಜೈಸ್ವಾಲ್​​ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ.
ಇತ್ತೀಚೆಗೆ, ಇಬ್ಬರು ಒಂದೇ ಕೆಫೆಯಿಂದ ಒಂದೇ ಸಮಯದಲ್ಲಿ ಆಚೆ ಬಂದಿರುವ ವಿಡಿಯೋ ಈ ವದಂತಿಗೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ. ಸೋಷಿಯಲ್​ ಮೀಡಿಯಾನಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ ಕೆಫೆವೊಂದರಿಂದ ಮೃಣಾಲ್​ ಠಾಕೂರ್​ ಹೊರ ಬರುತ್ತಾರೆ. ಸ್ವಲ್ಪ ಸಮಯದ ನಂತರ ಯಶಸ್ವಿ ಜೈಸ್ವಾಲ್​ ಕೂಡ ಹೊರಬಂದು ತಮ್ಮ ಕಾರನ್ನು ಏರಿ ಹೋಗಿದ್ದಾರೆ.

ಇಬ್ಬರಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ!

ಜೈಸ್ವಾಲ್​ ಮೃಣಾಲ್​ ಜೊತೆ ಸಂಬಂಧ ಹೊಂದಿದ್ದಾರೆಂದು ಚಿತ್ರಿಸಿರುವ ಈ ವಿಡಿಯೋಗೆ ಕ್ರಿಕೆಟರ್​ ಆಗಲೀ ಅಥವಾ ನಟಿಯಾಗಲೀ ಈ ವಿಷಯಕ್ಕೆ ಇಲ್ಲಿವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಇಬ್ಬರಿಂದಲೂ ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕೃತ ಹೇಳಿಕೆ ಬಂದಿಲ್ಲದ ಕಾರಣ, ಇದೊಂದು ಕೇವಲ ವದಂತಿ ಎಂದೇ ಭಾವಿಸುವುದು ಉತ್ತಮ.

ಧನುಷ್ ಜೊತೆ ನಟಿ ವದಂತಿ!

ತಮಿಳಿನ ಸ್ಟಾರ್ ಹೀರೋ ಧನುಷ್ ಸ್ಟಾರ್ ನಾಯಕಿ ಮೃಣಾಲ್ ಠಾಕೂರ್ ಅವರನ್ನು ಮದುವೆಯಾಗಲಿದ್ದಾರೆ, ಇವರಿಬ್ಬರೂ ಪ್ರೇಮಿಗಳ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದೆಲ್ಲಾ ಹೇಳಲಾಗುತ್ತಿತ್ತು. ಆದರೆ ಈ ವದಂತಿ ಕೂಡ ಕೆಲ ಸಮಯ ಸೌಡ್​ ಮಾಡಿ ನಂತರ ಹಾಗೆಯೇ ಸೈಲೆಂಟ್​ ಆಗಿತ್ತು. ಧನುಷ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ಅವರನ್ನು ಮದುವೆಯಾಗಿ ನಂತರ ಇಬ್ಬರು ಬೇರ್ಪಟ್ಟಿದ್ದರು. ಈ ಹಿನ್ನಲೆಯಲ್ಲಿ ಧನುಷ್​ ಹಾಗೂ ಮೃಣಾಲ್​ ಡೇಟಿಂಗ್​ ಮಾಡುತ್ತಿದ್ದಾರೆಂಬ ವದಂತಿ ಹಬ್ಬಿತ್ತು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net