60 ವರ್ಷದ ವರೆಗೆ ನನಗೆ ತಕ್ಕ ಗಂಡು ಸಿಗಲೇ ಇಲ್ಲ! ಗಂಡನಿಗೆ ಡಿವೋರ್ಸ್ ಕೊಡಬಹುದು, ಆದ್ರೆ ಮಕ್ಕಳನ್ನ ಬಿಡೋಕಾಗಲ್ಲ; ಬಾಲಿವುಡ್​ ನಟಿ ಸುಹಾಸಿನಿ ಮುಲೈ! Suhasini Mulay

60ನೇ ವಯಸ್ಸಿನಲ್ಲಿ ಮದುವೆಯಾದ ಕಾರಣವನ್ನು ಮುಕ್ತವಾಗಿ ಹಂಚಿಕೊಂಡ ನಟಿ
60ನೇ ವಯಸ್ಸಿನಲ್ಲಿ ಮದುವೆಯಾದ ಕಾರಣವನ್ನು ಮುಕ್ತವಾಗಿ ಹಂಚಿಕೊಂಡ ನಟಿ
Published on

ಪ್ರಮುಖ ಮುಖ್ಯಾಂಶಗಳು

  • 60ನೇ ವಯಸ್ಸಿನಲ್ಲಿ ಮದುವೆಯಾದ ಕಾರಣವನ್ನು ಮುಕ್ತವಾಗಿ ಹಂಚಿಕೊಂಡ ನಟಿ
  • ಲಗಾನ್' ಸಿನಿಮಾ ಖ್ಯಾತಿಯ ನಟಿ ಸುಹಾಸಿನಿ ಮುಲೈ
  • ಫೇಸ್‌ಬುಕ್‌ನಲ್ಲಿ ಸಿಕ್ಕ ವಿಜ್ಞಾನಿಯ ಜೊತೆ 75 ದಿನಗಳಲ್ಲಿ ಮದುವೆ
ಮುಂಬೈ: ಬಾಲಿವುಡ್​ನ ಲಗಾನ್​, ದಿಲ್​ ಚಾಹತಾ ಹೆ, ಜೋಧಾ ಅಕ್ಬರ್​ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿದ್ದ ಹಿರಿಯ ಕಲಾವಿದೆ, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಸುಹಾಸಿನಿ ಮುಲೈ (Suhasini Mulay) ತಮ್ಮ 60 ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾರಣವನ್ನು ಈಗ ಬಹಿರಂಗ ಪಡಿಸಿದ್ದಾರೆ.

ಮದುವೆ ಬಗ್ಗೆ ನಿರಾಸಕ್ತಿ

ನನಗೆ ಮೊದಲಿನಿಂದಲೂ ಮದುವೆ, ಗಂಡ, ಮಕ್ಕಳು ಇವುಗಳ ಬಗ್ಗೆ ಅಷ್ಟೊಂದು ಆಸಕ್ತಿ ಇರಲಿಲ್ಲ. ನನಗೆ ಸಿನಿಮಾ ರಂಗದಲ್ಲಿ ಏನಾದರೂ ಸಾಧಿಸಬೇಕು, ಸದಾ ಕೆಲಸದಲ್ಲಿ ಬ್ಯುಸಿ ಆಗಿರಬೇಕು ಎನ್ನುವುದು ನನ್ನ ಗುರಿಯಾಗಿತ್ತು.
ನನಗೆ ನನ್ನ ಜೊತೆಗೆ ನಿಲ್ಲುವ ಗಂಡು 60 ವರ್ಷದ ವರೆಗೆ ಸಿಗಲೇ ಇರಲಿಲ್ಲ. ಹೀಗಾಗಿ 60 ದಾಟಿದ ಮೇಲೆ ಜೀವನದಲ್ಲಿ ಮೊದಲ ಬಾರಿಗೆ ಮದುವೆಯಾದೆ ಎಂದು ಸುಹಾಸಿನಿ ಹೇಳಿದ್ದಾರೆ.

ಮಕ್ಕಳಾದರೆ ಕೆರೆಯರ್​ ಖತಂ!

ಮೊದಲೇ 60 ವರ್ಷಕ್ಕೆ ಮದುವೆಯಾಗಿದ್ದೆ, ಇನ್ನೂ ಮಕ್ಕಳೆಲ್ಲಾ ದೂರದ ಮಾತಾಯಿತು. ನಾನು ಮಕ್ಕಳ ಕಾರಣಕ್ಕಾಗಿಯೇ ಅರ್ಧ ಮದುವೆ ಬಗ್ಗೆ ಆಸಕ್ತಿ ತೋರದಿದ್ದದ್ದು. ಒಂದು ಪಕ್ಷ ಗಂಡನ ಜೊತೆ ಹೊಂದಾಣಿಕೆ ಆಗದಿದ್ದರೆ ಡಿವೋರ್ಸ್​ ನೀಡಬಹುದು, ಆದರೆ ಮಕ್ಕಳೊಂದಿಗೆ ಸಂಬಂಧಬವನ್ನು ಕಡಿದುಕೊಳ್ಳಲು ಅಸಾಧ್ಯ.
ಅಂತಯೇ ಮಕ್ಕಳನ್ನು ಮಾಡಿಕೊಂಡ ಮೇಲೆ ಅವರ ಲಾಲನೆ-ಪಾಲನೆಯಲ್ಲೇ ಜೀವನ ಸವೆದು ಹೋಗುತ್ತದೆ. ಸಿನಿಮಾದಲ್ಲಿ ಸಕ್ರೀಯವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹಾಗೆಂದು ಎಲ್ಲರಿಗೂ ಇದು ಅನ್ವಯವಾಗುತ್ತದೆ ಎಂದಲ್ಲ. ನನ್ನ ಜೀವನ ಹೀಗೆ ಸಾಗಿತು ಎಂದು ಅವರು ಹೇಳಿದ್ದಾರೆ.

ಫೇಸ್​ಬುಕ್​ ಮೂಲಕ ಮದುವೆ

60 ವರ್ಷ ತಲುಪಿದ ಮೇಲೆ ಒಮ್ಮೆ ಮದುವೆ ಬಗ್ಗೆ ಯೋಚನೆ ಬಂದಿತು. ನಂತರ ಈ ವಯಸ್ಸಿನಲ್ಲಿ ಮದುವೇ ಬೇಕೆ? ಎಂದು ಅನ್ನಿಸಿತು. ಆದರೆ ಮದುವೆ ಆಗೋಣ; ಹೊಂದಾಣಿಕೆ ಆಗದಿದ್ದರೆ ವಿಚ್ಛೇದನ ಪಡೆದರಾಯಿತು ಎಂದೇ ಮದುವೆಯಾದೆ.
ನನ್ನ ಈಗೀನ ಪತಿ ಅತುಲ್ ಗುರ್ತು ಅವರೊಬ್ಬ ವಿಜ್ಞಾನಿ. ನಾನು ಅವರನ್ನು ಫೇಸ್​ಬುಕ್​ನಲ್ಲಿ ಪರಿಚಯವಾದರು. ಇಬ್ಬರ ನಡುವೆ ಸ್ನೇಹ ಮೂಡಿತು. ಪರಿಚಯಚಾದ 75 ದಿನಗಳ ಒಳಗೆ ಇಬ್ಬರು ಮದುವೆಯಾದೆವು. ಈಗ ನಾವು ಮದುವೆಯಾಗಿ 15 ವರ್ಷ ಕಳೆದಿದೆ ಎಂದು ನಟಿ ಹೇಳಿಕೊಂಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net