ಕರಾಚಿಯ ಕುಖ್ಯಾತ ರೇನ್ಬೋ ಸೆಂಟರ್ಗೆ ಭೇಟಿ ನೀಡಿದ ಕಾರ್ಲ್ ರಾಕ್ ಅವರಿಗೆ ಒಂದು ಕ್ಷಣ ಶಾಕ್ ಆಗಿದೆ. ಕಾರಣ, ಭಾರತದಲ್ಲಿ ಧೂಳೆಬ್ಬಿಸುತ್ತಿರುವ ಆದಿತ್ಯ ಧರ್ ನಿರ್ದೇಶನದ ಸ್ಪೈ ಥ್ರಿಲ್ಲರ್ ಧುರಂಧರ್ (Dhurandhar) ಸಿನಿಮಾ ಅಲ್ಲಿನ ಕಂಪ್ಯೂಟರ್ಗಳಲ್ಲಿ ರಾರಾಜಿಸುತ್ತಿದೆ. ಸರ್ಕಾರವೇನೋ ಸಿನಿಮಾ ಬ್ಯಾನ್ ಮಾಡಿದೆ, ಆದರೆ ವ್ಯಾಪಾರಿಗಳು ಮಾತ್ರ, ಬನ್ನಿ ಸರ್ ಇದು ಇಂಡಿಯಾದ ಲೇಟೆಸ್ಟ್ ಸಿನಿಮಾ, ಬೇಗ ಖರೀದಿ ಮಾಡಿ ಎಂದು ಕೂಗಿ ಕರೆಯುತ್ತಿದ್ದಾರೆ.