ಜೂನ್ 14ಕ್ಕೆ ಧುರಂಧರ್ 3: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೊದ ಅಸಲಿಯತ್ತೇನು? Dhurandhar 3
ಜೂನ್ 14 ಕ್ಕೆ ಧುರಂಧರ್ 3 ರೀಲೀಸ್?
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್ 2
ಜೂನ್ 14 ಕ್ಕೆ ಧುರಂಧರ್ 3 ರೀಲೀಸ್?
ಈ ವೈರಲ್ ಫೋಟೊ ಹಿಂದಿರುವ ಅಸಲಿಯತ್ತೇನು?
ಮುಂಬೈ: ಬಾಕ್ಸ್ ಆಫೀಸ್ನಲ್ಲಿ ಸದ್ಯ ಧೂಳೆಬ್ಬಿಸುತ್ತಿರುವ ಸಿನಿಮಾ ಯಾವುದೆಂದರೆ ಅದು ಧುರಂದರ್ 2: ದಿ ರಿವೆಂಜ್ ಆಗಿದೆ. ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ 500 ಕೋಟಿಗಳಿಸಿರುವ ಇದು ಇನ್ನು ಕೆಲವೇ ದಿನಗಳಲ್ಲಿ ಸಾವಿರ ಕೋಟಿಯನ್ನು ದಾಟಲಿದೆ.
ಈದೀಗ ಈ ಸಿನಿಮಾವನ್ನು ವೀಕ್ಷಿಸಿದ ಅಭಿಮಾನಿಗಳಲ್ಲಿ ಮಿಲಿಯನ್ ಡಾಲರ್ ಪ್ರಶ್ನೆಯೊಂದು ಮೂಡಿದೆ. ಅದೇನೆಂದರೆ, ಈ ಸಿನಿಮಾದ ಮೂರನೇ ಭಾಗ (Dhurandhar 3) ಬರುತ್ತದೆಯೇ? ಅದು ಯಾವಾಗ ಬಿಡುಗಡೆಯಾಗಲಿದೆ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಸಹಜವಾಗಿ ಮೂಡಿದೆ.
ಜೂನ್ 14 ಕ್ಕೆ ಧುರಂಧರ್ 3?
ಈ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡುತ್ತಿದ್ದಂತೆ ಧುರಂಧರ್ 2 ಸಿನಿಮಾದ ಕ್ಲೈಮಾಕ್ಸಿನಲ್ಲಿ ಧುರಂಧರ್ 3: ದಿ ಫೈನಲ್ ಚಾಪ್ಟರ್ ಸಿನಿಮಾ ಜೂನ್ 14 ಕ್ಕೆ ತೆರೆಕಾಣಲಿದೆ ಎಂದು ಬರೆದಿರುವ ಫೋಟೊ ಸಖತ್ ವೈರಲ್ ಆಗುತ್ತಿದೆ.
ಆದರೆ ಈ ಫೋಟೊ ಸಂಪೂರ್ಣ ಸುಳ್ಳಾಗಿದ್ದು, ಸಿನಿಮಾ ತಂಡದಿಂದ ಅಥವಾ ನಿರ್ದೇಶಕ ಆದಿತ್ಯ ಧರ್ ಅವರಿಂದ ಸಿನಿಮಾದ ಮೂರನೇ ಭಾಗದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಜನರ ಮನದಲ್ಲಿ ಈ ಪ್ರಶ್ನೆ ಮೂಡಲು ಕಾರಣವೇನು?
ಧುರಂಧರ್ ಸಿನಿಮಾದ ಮೊದಲ ಭಾಗ ತೆರೆಕಂಡಿದ್ದ ದಿನವೇ ಸಿನಿಮಾ ತಂಡ ಈ ಸಿನಿಮಾದ ಎರಡನೇ ಭಾಗ 2026 ರ ಮಾರ್ಚ್ 19 ರಂದು ತೆರೆ ಕಾಣಲಿದೆ ಎಂದು ಹೇಳಿದ್ದರು. ಆದರೆ, ಧುರಂಧರ್ 2: ದಿ ರಿವೆಂಜ್ ಸಿನಿಮಾದ ಕ್ಲೈಮಾಕ್ಸ್ನಲ್ಲಿ ಸಿನಿಮಾಗೆ ಪೂರ್ಣವಿರಾಮ ಇಡುವ ಬದಲು ಪ್ರೇಕ್ಷಕರ ಮನದಲ್ಲಿ ಹಲವು ಪ್ರಶ್ನೆಗಳು ಮೂಡುವಂತೆ ಮಾಡಿದ್ದಾರೆ.
ಇದೊಂದು ಕಥೆ ಹೇಳುವ ಪ್ರಕಾರವಾಗಿದ್ದರೂ ಸಹ ಜನರಿಗೆ ಈ ಸಿನಿಮಾದ ಕಥೆ ಇಲ್ಲಿಗೆ ಮುಗಿದಿಲ್ಲ, ಇದರ ಮುಂದಿನ ಭಾಗ ಮತ್ತೆ ಬಿಡುಗಡೆಯಾಗಲಿದೆ ಎಂದು ಅನ್ನಿಸಿದೆ. ಆದರೆ ಈ ಪ್ರಶ್ನೆಗೆ ಉತ್ತರವನ್ನು ಕೇವಲ ನಿರ್ದೇಶಕ ಆದಿತ್ಯ ಧರ್ ನೀಡಲು ಸಾಧ್ಯವಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಫೋಟೊಗಳನ್ನು ನಂಬಬೇಡಿ.
ಧುರಂಧರ್ 2 ಬಗ್ಗೆ
ಧುರಂಧರ್ 2 ಇದು ಧುರಂಧರ್ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್, ರಾಕೇಶ್ ಬೇಡಿ, ಆರ್.ಮಾಧವನ್, ಅರ್ಜುನ್ ರಾಂಪಾಲ್, ಡ್ಯಾನಿಶ್ ಇಕ್ಬಾಲ್, ಸಾರಾ ಅರ್ಜುನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್).