ಪ್ರಶ್ನೆ ಪತ್ರಿಕೆಯಲ್ಲೂ ಧುರಂಧರ್ ಅಬ್ಬರ: ಅಕೌಂಟ್ಸ್ ಪೇಪರ್‌ನಲ್ಲಿ ಜಮಾಲ್ ಜಮೇಲಿ, ರೆಹಮಾನ್ ಡಕೈತ್ ಎಂಟ್ರಿ; ಫೋಟೊ ವೈರಲ್​! Dhurandhar 2 in Exam Paper

ಅಕೌಂಟ್ಸ್ ಪ್ರಶ್ನೆ ಪತ್ರಿಕೆಯಲ್ಲಿ ಪ್ರಕಟವಾದ ಪಾತ್ರಧಾರಿಗಳು
ಅಕೌಂಟ್ಸ್ ಪ್ರಶ್ನೆ ಪತ್ರಿಕೆಯಲ್ಲಿ ಪ್ರಕಟವಾದ ಪಾತ್ರಧಾರಿಗಳು
Published on

ಪ್ರಮುಖ ಮುಖ್ಯಾಂಶಗಳು

  • ಪರೀಕ್ಷಾ ಕೊಠಡಿ ತಲುಪಿದ ಧುರಂಧರ್​ 2
  • ಅಕೌಂಟ್ಸ್ ಪ್ರಶ್ನೆ ಪತ್ರಿಕೆಯಲ್ಲಿ ಪ್ರಕಟವಾದ ಪಾತ್ರಧಾರಿಗಳು
  • ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೊ
ಬಾಲಿವುಡ್​: ಬಿಡುಗಡೆಯಾದ ಒಂದೇ ವರದಲ್ಲಿ ಸಾವಿರ ಕೋಟಿಗಳಿಕೆ ಮಾಡುವ ಮೂಲಕ ಧುರಂಧರ್​ 2: ದಿ ರಿವೆಂಜ್​ ಸಿನಿಮಾ ಅತ್ಯಧಿಕ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮಾಡಿರುವ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆದರೆ ಕೇವಲ ಸಿನಿಮಾ ಮಂದಿರಗಳಿಗೆ ಸೀಮಿತವಾಗಿರದ ಈ ಸಿನಿಮಾದ ಪಾತ್ರಧಾರಿಗಳು ಈಗ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆ (Dhurandhar 2 in Exam Paper) ಗಳಿಗೆ ಸಹ ಪ್ರವೇಶ ಮಾಡಿದ್ದಾರೆ.

ವೈರಲ್​ ಫೋಸ್ಟ್​ನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೊನಲ್ಲಿ ಅಂಕೌಟ್ಸ್​ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿರುವ ಮೂರು ಪ್ರಶ್ನೆಗಳಲ್ಲಿ ಧುರಂಧರ್ ಸಿನಿಮಾದಲ್ಲಿರುವ ಪಾತ್ರಧಾರಿಗಳ ಹೆಸರನ್ನು ಬಳಸಲಾಗಿದೆ.
ಮೊದಲ ಪ್ರಶ್ನೆಯಲ್ಲಿ, ಜಮಾಲ್​ ಜಮೇಲಿ (ರಾಕೇಶ್​ ಬೇಡಿ), ಎಸ್ಪಿ ಚೌಧರಿ ಅಸ್ಲಂ (ಸಂಜಯ್​ ದತ್) ಮತ್ತು ಯಲಿನಾ ಜಮೇಲಿ ಮೂರು ಜನ ಸೇರಿ ಒಂದು ಉದ್ಯಮವನ್ನು ಪ್ರಾರಂಭಿಸುತ್ತಾರೆ, ಮತ್ತು ಮೂವರು ಲಾಭ ಮತ್ತು ನಷ್ಟದಲ್ಲಿ ಸಮಾನ ಪಾಲನ್ನು ಹೊಂದಿರುತ್ತಾರೆ. ಕೆಲ ವರ್ಷದ ನಂತರ ಎಸ್ಪಿ ಚೌಧರಿ ಅಸ್ಲಂ ಉದ್ಯಮದಿಂದ ನಿವೃತ್ತರಾದರೆ, ಉಳಿದಿಬ್ಬರ ನಡುವೆ ನೂತನ ಲಾಭದ ಹಂಚಿಕೆ ಏನಾಗುತ್ತದೆ?
ಎರಡನೇ ಪ್ರಶ್ನೆಯಲ್ಲಿ, ಅಜಯ್ ಸನ್ಯಾಲ್ (ಆರ್​.ಮಾಧವನ್​) ಸುಶಾಂತ್ ಬನ್ಸಾಲ್ (ಮಾನವ್​ ಗೋಹಿಲ್​) ಒಂದು ಸಂಸ್ಥೆಯಲ್ಲಿ ಪಾಲುದಾರರಾಗಿದ್ದಾರೆ. ಅವರು ಮೊಹಮ್ಮದ್ ಆಲಂ(ಗೌರವ್​ ಗೆರಾ) ಅವರನ್ನು ಹೊಸ ಪಾಲುದಾರರನ್ನಾಗಿ ಸೇರಿಸಿಕೊಂಡರು. ಆಲಂ 1,00,000 ರೂ.ಗಳನ್ನು ಬಂಡವಾಳವಾಗಿ ಮತ್ತು 50,000 ರೂ.ಗಳನ್ನು ಗುಡ್‌ವಿಲ್‌ಗಾಗಿ ಖರೀದಿಸಿದರು. ಅಗತ್ಯ ಜರ್ನಲ್ ನಮೂದನ್ನು ಪಾಸ್ ಮಾಡಿ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.
ಮೂರನೇ ಪ್ರಶ್ನೆಯಾಗಿ, ಹಮ್ಜಾ ಅಲಿ ಮಜಾರಿ(ರಣವೀರ್ ಸಿಂಗ್), ರೆಹಮಾನ್ ದಕೈತ್ (ಅಕ್ಷಯ್​ ಖನ್ನಾ) ಮತ್ತು ಉಜೈರ್ ಬಲೂಚ್ (ಡ್ಯಾನಿಶ್​ ಪಂಡರ್​) ಈ ಮೂವರು 2:2:1 ರ ಲಾಭದಂತೆ ಸಂಸ್ಥೆಯೊಂದನ್ನು ನಡೆಸುತ್ತಿರುತ್ತಾರೆ. ಆದರೆ ಡಿಸೆಂಬರ್​ 2, 2025 ರಲ್ಲಿ ರೆಹಮಾನ್ ದಕೈತ್ ಸಾವನ್ನಪ್ಪುತ್ತಾನೆ. ಕೆಳಗೆ ನೀಡಿರುವ ಬಾಲನ್ಸ್​ ಶೀಟ್​ನ್ನು ಪೂರ್ಣಗೊಳಿಸಿ ಎಂದು ಕೇಳಿದ್ದಾರೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ಫೋಟೊ ಈಗ ಸಾಮಾಜಿಕ ಜಾಲತಾಣಗಲ್ಲಿ ಸಾಕಷ್ಟು ಸದ್ದನ್ನು ಮಾಡುತ್ತಿದ್ದು, ನೆಟ್ಟಿಗರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ನೋಡಿ ಧುರಂಧರ್​ ಕ್ರೇಜ್​ ಕೇವಲ ಟಾಕೀಸ್​ಗೆ ಅಲ್ಲ ಅದು ಪರೀಕ್ಷಾ ಕೊಠಡಿಯನ್ನು ಆವರಿಸಿದೆ ಎಂದು ಒಬ್ಬರು ಹೇಳಿದರೆ, ಬಹುಷ್ಯ ಲೆಕ್ಚರರ್​ ಧುರಂಧರ್​ ಸಿನಿಮಾ ನೋಡುತ್ತಾ ಪ್ರಶ್ನೆ ಪತ್ರಿಕೆಯನ್ನು ಸಿದ್ಧ ಪಡಿಸಿರಬೇಕು ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.
ನಾವು ಕಲಿವಾಗ ಈ ರೀತಿಯ ಪ್ರಶ್ನೆಗಳಿದ್ದರೆ ನಾನು ಕಾಲೇಜಿಗೆ ಟಾಪ್​ ಬರುತ್ತಿದೆ ಎಂದು ಮತ್ತೊಬ್ಬರು ತಮ್ಮ ನೋವನ್ನು ವ್ಯಕ್ತ ಪಡಿಸಿದ್ದಾರೆ. ಈ ರೀತಿಯ ಸಿನಿಮಾದ ಪಾತ್ರಗಳನ್ನು ಪ್ರಶ್ನೆ ಪತ್ರಿಕೆಯಲ್ಲಿ ಸೇರಿಸುವುದು ಎಷ್ಟು ಸರಿ? ಎಂದು ಕೆಲವರು ಪ್ರಶ್ನಿಸಿದ್ದಾರೆ.

ಧುರಂಧರ್​ 2 ಬಗ್ಗೆ

ಧುರಂಧರ್​ 2 ಇದು ಧುರಂಧರ್​ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್​, ರಾಕೇಶ್​ ಬೇಡಿ, ಆರ್​.ಮಾಧವನ್​, ಅರ್ಜುನ್​ ರಾಂಪಾಲ್​, ಡ್ಯಾನಿಶ್​ ಇಕ್ಬಾಲ್​, ಸಾರಾ ಅರ್ಜುನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್​ ಸ್ಟ್ರೈಕ್​ ಸಿನಿಮಾದ ನಿರ್ದೇಶಕ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net