ತಮಿಳುನಾಡಿನ 'ಕಿಂಗ್' ಗೆಲುವಿಗೆ ಸ್ಯಾಂಡಲ್‌ವುಡ್ ಹುಡುಗಿ ರಶ್ಮಿಕಾ ಫಿದಾ; ರಜನಿಕಾಂತ್ ಕೊಟ್ಟ ರಿಯಾಕ್ಷನ್ ಏನು? Tamil Nadu Election

 Tamil Nadu Election (ಚಿತ್ರ X)
Tamil Nadu Election (ಚಿತ್ರ X)
Published on
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ತನ್ನ ಚೊಚ್ಚಲ ಚುನಾವಣೆಯಲ್ಲೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ರಾಜಕೀಯ ಪಂಡಿತರ (Tamil Nadu Election) ಲೆಕ್ಕಾಚಾರವನ್ನೇ ಉಲ್ಟಾ ಮಾಡಿದೆ. ಈ ಐತಿಹಾಸಿಕ ಜಯಕ್ಕೆ ದಕ್ಷಿಣ ಭಾರತದ ಚಿತ್ರರಂಗದ ದಿಗ್ಗಜರು ಅಭಿನಂದನೆಗಳ ಸುರಿಮಳೆಗರೆದಿದ್ದಾರೆ.

ಪೋಸ್ಟ್​ನಲ್ಲೇನಿದೆ?

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಕಂಡ ತಮಿಳಗ ವೆಟ್ರಿ ಕಳಗಂನ ಅಧ್ಯಕ್ಷ ತಿರು ವಿಜಯ್ ಮತ್ತು ಅವರ ಪಕ್ಷದ ಸದಸ್ಯರಿಗೆ ನನ್ನ ಹೃದಯ ಪೂರ್ವ ಅಭಿನಂದನೆಗಳು ಎಂದು ಹಿರಿಯ ನಟ ರಜನಿಕಾಂತ್ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
ನಟ ಧನುಷ್ ಕೂಡಾ ಅಭಿನಂದನೆ ಹಂಚಿಕೊಂಡಿದ್ದು, ತಮ್ಮ ಮೊದಲ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಬಂದು ಸ್ಪರ್ಧಿಸಿ ತಮಿಳುನಾಡಿನ ಜನರ ಅಪಾರ ಬೆಂಬಲ ಮತ್ತು ಪ್ರೀತಿಯನ್ನು ಗಳಿಸಿ ಸರ್ಕಾರ ರಚಿಸಲು ಸಜ್ಜಾಗಿರುವ ವಿಜಯ್​ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ತೆಲುಗು ಚಲನಚಿತ್ರೋದ್ಯಮದಿಂದ ರಾಮ್ ಚರಣ್, "ತಮಿಳುನಾಡು ಚುನಾವಣೆಯಲ್ಲಿ ಗಮನಾರ್ಹ ಗೆಲುವು ಸಾಧಿಸಿದ ನಟ ವಿಜಯ್​ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ದೂರದೃಷ್ಟಿ ಮತ್ತು ಜನರೊಂದಿಗಿನ ಸಂಪರ್ಕವು ನಿಜವಾಗಿಯೂ ಪ್ರತಿಧ್ವನಿಸಿದೆ. ತಮಿಳುನಾಡನ್ನು ನಿರಂತರ ಪ್ರಗತಿಯತ್ತ ಕೊಂಡೊಯ್ಯುವಲ್ಲಿ ನಿಮಗೆ ಉತ್ತಮ ಯಶಸ್ಸು ಸಿಗಲಿ ಎಂದು ಬಯಸುತ್ತೇನೆ ಎಂದು ಬರೆದಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ತಮ್ಮ ಹರ್ಷ ವ್ಯಕ್ತಪಡಿಸುತ್ತಾ, ಅಭಿನಂದನೆಗಳು ವಿಜಯ್​ ಸರ್​ ನೀವು ಗೆದ್ದಿರುವುದು ತುಂಬಾ ಸಂತೋಷವಾಗಿದೆ. ಈ ಹೊಸ ಯುಗದಲ್ಲಿ ನಿಮ್ಮನ್ನು ನೋಡಲು ತುಂಬಾ ಉತ್ಸುಕರಾಗಿದ್ದೇವೆ ಎಂದು ಪೋಸ್ಟ್ ಮಾಡಿದ್ದಾರೆ.
ಏತನ್ಮಧ್ಯೆ, ಹಿರಿಯ ನಟ ಕಮಲ್ ಹಾಸನ್, "ಜನರ ವಿಶ್ವಾಸ ಗಳಿಸಿ ತಮ್ಮ ಮೊದಲ ಚುನಾವಣೆಯಲ್ಲಿಯೇ ಅದ್ಭುತ ಗೆಲುವು ಸಾಧಿಸಿದ ವಿಜಯಶಾಲಿ ತಮಿಳಗ ವೆಟ್ರಿ ಕಳಗಂ ನಾಯಕ ತಿರು ವಿಜಯ್​ ಮತ್ತು ಪಕ್ಷದ ಸದಸ್ಯರಿಗೆ ನನ್ನ ಅಭಿನಂದನೆಗಳು ಸಾರ್ವಜನಿಕರ ಸೇವೆಯನ್ನು ವೃದ್ಧಿಸಲು ನನ್ನ ಶುಭಾಶಯ ಎಂದು ಬರೆದು ಪೋಸ್ಟ್ ಮಾಡಿದ್ದಾರೆ .
ಅವರಲ್ಲದೆ, ಎ.ಆರ್. ರೆಹಮಾನ್, ವೆಂಕಟೇಶ್ ದಗ್ಗುಬಾಟಿ, ಚಿರಂಜೀವಿ, ಕಾಜಲ್ ಅಗರ್ವಾಲ್, ಅನಿರುದ್ಧ್ ರವಿಚಂದರ್, ಸಿಲಂಬರಸನ್ ಟಿ.ಆರ್, ಕಾರ್ತಿ, ಮಹೇಶ್ ಬಾಬು ಮತ್ತು ಇತರ ಅನೇಕ ಪ್ರಮುಖರು ವಿಜಯ್ ಅವರನ್ನು ಅಭಿನಂದಿಸಿದರು. ಇದು ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಅವರು ಗಳಿಸಿರುವ ವ್ಯಾಪಕ ಬೆಂಬಲವನ್ನು ಪ್ರತಿಬಿಂಬಿಸುತ್ತದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net