ಆದಿತ್ಯ ಮತ್ತು ಯಾಮಿ ಎಡವಿ ಬೀಳಲೆಂದೇ ಕಾಯುತ್ತಿದ್ದಾರೆ: ಬಾಲಿವುಡ್ ಅಸೂಯೆ ಬಗ್ಗೆ ಆರ್ಜಿವಿ ಸ್ಫೋಟಕ ಹೇಳಿಕೆ! RGV on Aditya and Yaami
ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ನಿರ್ದೇಶಕ ಆದಿತ್ಯ ಧರ್ ಮತ್ತು ನಟಿ ಯಾಮಿ ಗೌತಮ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪ್ರಸ್ತುತ ಯಶಸ್ಸಿನ ಉತ್ತುಂಗದಲ್ಲಿರುವ ನಿರ್ದೇಶಕ ಆದಿತ್ಯ ಧರ್ ಮತ್ತು ನಟಿ ಯಾಮಿ ಗೌತಮ್
ಇವರ ಯಶಸ್ಸು ಬಾಲಿವುಡ್‌ನ ಕೆಲವರ ಅಸೂಯೆಗೆ ಕಾರಣವಾಗಿದೆ: ಆರ್ಜಿವಿ
ಈ ಜೋಡಿ ಎಡವಿ ಬೀಳಲೆಂದೇ ಅವರು ಕಾಯುತ್ತಿದ್ದಾರೆ: ರಾಮ್ ಗೋಪಾಲ್ ವರ್ಮಾ
ಮುಂಬೈ: ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪ್ರತಿದಿನ ಸಿನಿಮಾಗಳಿಗಿಂತ, ತಮ್ಮ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಮನುಷ್ಯ.
ಮಾರ್ಚ್ 19 ರಂದು ಬಿಡುಗಡೆಯಾಗಲಿರುವ ಧುರಂಧರ್ 2 ಸಿನಿಮಾಗೆ ಮತ್ತು ಆ ಸಿನಿಮಾದ ನಿರ್ದೇಶಕ ಆದಿತ್ಯ ಧರ್ನನ್ನು ಮತ್ತೊಮ್ಮೆ ಹೊಗಳಿರುವ ಆರ್ಜಿವಿ, ಆದಿತ್ಯ ಧರ್ ಮತ್ತು ಅವರ ಪತ್ನಿ ಯಾಮಿ ಗೌತಮ್ (RGV on Aditya and Yaami) ರನ್ನ ನೋಡಿ ಬಾಲಿವುಡ್ ಅಸೂಯೆ ಪಡುತ್ತಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.
ನಿರ್ದೇಶಕ ಆದಿತ್ಯ ಧರ್ ಅವರ ಧುರಂಧರ್ ಸಿನಿಮಾ ನೀರಿಕ್ಷೆಗೂ ಮೀರಿ ಯಶಸ್ಸನ್ನು ಕಂಡಿದ್ದು, ಬಾಲಿವುಡ್ನಲ್ಲಿರುವ ಕೆಲ ಖ್ಯಾತನಾಮರಿಗೆ ಅಸೂಯೆಗೆ ಕಾರಣವಾಗಿದ್ದು, ಅವರು ಈ ದಂಪತಿಗಳು ಮುಗ್ಗರಸಿ ಬೀಳುವುದನ್ನೇ ಕಾಯುತ್ತಿದ್ದಾರೆ ಎಂದು ಹೇಳಿಕೆ ನೀಡಿ ಹೊಸದೊಂದು ಸಂಚಲನಕ್ಕೆ ನಾಂದಿ ಹಾಡಿದ್ದಾರೆ.
ಚಿತ್ರರಂಗದ ವ್ಯಾಕರಣ ಬದಲಿಸಿದ ಆದಿತ್ಯ ಧರ್!
ರೆಡಿಫ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವರ್ಮಾ, ಆದಿತ್ಯ ಧರ್ ಬೆಳ್ಳಿ ಪರದೆಯ ಮೇಲೆ ಕಥೆ ಹೇಳುವ ಶೈಲಿಯನ್ನೇ ಬದಲಾಯಿಸಿದ್ದಾರೆ. ಅವರ ಧುರಂಧರ್ ಸಿನಿಮಾ ಭಾರತೀಯ ಚಿತ್ರರಂಗದ ಮೇಲೆ ಎಂತಹ ಪ್ರಭಾವ ಬೀರಿದೆ ಎಂದರೆ, ಇದು ಕೇವಲ ಹಿಂದಿ ಸಿನಿಮಾ ಮಾತ್ರವಲ್ಲ ತೆಲುಗು ಸೇರಿದಂತೆ ದಕ್ಷಿಣ ಭಾರತದ ದೊಡ್ಡ ಬಜೆಟ್ ಸಿನಿಮಾಗಳ ಮೇಲೂ ಪರಿಣಾಮ ಬೀರಿದೆ ಎಂದಿದ್ದಾರೆ.
ಆದಿತ್ಯ ಧರ್ ಅವರ ಶೈಲಿಯನ್ನು ನೋಡಿ, ಈಗಾಗಲೇ ತಯಾರಾಗಿರುವ ಅನೇಕ ತೆಲುಗು ಆಕ್ಷನ್ ಸಿನಿಮಾಗಳು ಈಗ ಮರು ಚಿತ್ರೀಕರಣ ಮಾಡಲು ಮುಂದಾಗಿವೆಯಂತೆ. ಇದರಿಂದ ನಿರ್ಮಾಪಕರಿಗೆ ಕೋಟಿ ಕೋಟಿ ಹಣ ವ್ಯರ್ಥವಾಗುತ್ತಿದೆ, ಹಾಗಾಗಿಯೇ ಉದ್ಯಮದಲ್ಲಿ ಅನೇಕರಿಗೆ ಆದಿತ್ಯ ಮೇಲೆ ಕೋಪವಿದೆ ಎನ್ನುವುದು ಆರ್ಜಿವಿ ಅವರ ವಾದಬವಾಗಿದೆ.
ಅವರು ಎಡವಿ ಬೀಳಲಿ ಎಂದು ಕಾಯುತ್ತಿದ್ದಾರೆ
ಆದಿತ್ಯ ಧರ್ ಎಲ್ಲರನ್ನೂ ತಮ್ಮ ಕಂಫರ್ಟ್ ಜೋನ್ನಿಂದ ಹೊರಬರುವಂತೆ ಮಾಡಿದ್ದಾರೆ. ಇದು ಉದ್ಯಮದ ಅನೇಕರಿಗೆ ಇಷ್ಟವಾಗಿಲ್ಲ. ಹಾಗಾಗಿ ಅವರು ಆದಿತ್ಯನನ್ನು ದ್ವೇಷಿಸುತ್ತಿದ್ದಾರೆ. ಅಷ್ಟೇ ಅಲ್ಲ, ಆದಿತ್ಯ ಧರ್ ಮತ್ತು ಅವರ ಪತ್ನಿ, ನಟಿ ಯಾಮಿ ಗೌತಮ್ ಯಾವಾಗ ಎಡವಿ ಬೀಳುತ್ತಾರೆ ಎಂದು ಇಡೀ ಚಿತ್ರರಂಗ ಕಾದು ಕುಳಿತಿದೆ ಎಂದು ವರ್ಮಾ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಯಾಮಿ ಗೌತಮ್ ಬಗ್ಗೆಯೂ ಮೆಚ್ಚುಗೆ
ಇತ್ತೀಚೆಗೆ ಹಕ್ (Haq) ಎಂಬ ಕೋರ್ಟ್‌ರೂಮ್ ಡ್ರಾಮಾದಲ್ಲಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿರುವ ಯಾಮಿ ಗೌತಮ್ ಅವರ ಬಗ್ಗೆಯೂ ಆರ್ಜಿವಿ ಮಾತನಾಡಿದ್ದಾರೆ. ಈ ದಂಪತಿಗಳು ಈಗ ಯಶಸ್ಸಿನ ಉತ್ತುಂಗದಲ್ಲಿದ್ದಾರೆ, ಆದರೆ ಅಷ್ಟೇ ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ, ಉದ್ಯಮದಲ್ಲಿ ಇವರ ಸೋಲನ್ನು ಬಯಸುವವರ ಸಂಖ್ಯೆ ಹೆಚ್ಚಿದೆ ಎಂದು ಅವರು ಎಚ್ಚರಿಸಿದ್ದಾರೆ.
ನಟಿ ಯಾಮಿ ಗೌತಮ್ ಅಭಿನಯದ 'ಹಕ್' (Haq) ಚಿತ್ರವು ಒಂದು ಶಕ್ತಿಶಾಲಿ ಕೋರ್ಟ್‌ರೂಮ್ ಡ್ರಾಮಾ ಆಗಿದ್ದು, ಸಮಾಜದಲ್ಲಿನ ಸಾಮಾನ್ಯ ನಾಗರಿಕರ ಮೂಲಭೂತ ಹಕ್ಕುಗಳಿಗಾಗಿ ನಡೆಯುವ ಹೋರಾಟವನ್ನು ಅತ್ಯಂತ ರೋಚಕವಾಗಿ ಚಿತ್ರಿಸುತ್ತದೆ.
ಈ ಸಿನಿಮಾದಲ್ಲಿ ಯಾಮಿ ಗೌತಮ್ ಅವರು ಜನಸಾಮಾನ್ಯರ ಪರವಾಗಿ ನ್ಯಾಯಾಲಯದಲ್ಲಿ ವಾದಿಸುವ ಒಬ್ಬ ಖಡಕ್ ವಕೀಲೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವ್ಯವಸ್ಥೆಯ ವಿರುದ್ಧ ಸೆಣಸಾಡುತ್ತಾ ನ್ಯಾಯವನ್ನು ಪಡೆಯುವ ಅವರ ಅಭಿನಯಕ್ಕೆ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಚಿತ್ರವು ಕೇವಲ ಕಾನೂನು ಸಮರವನ್ನಷ್ಟೇ ತೋರಿಸದೆ, ಇಂದಿನ ಕಾಲಘಟ್ಟದಲ್ಲಿ ಒಬ್ಬ ವ್ಯಕ್ತಿಯು ತನ್ನ ಹಕ್ಕಿಗಾಗಿ ಧ್ವನಿ ಎತ್ತುವುದು ಎಷ್ಟು ಮುಖ್ಯ ಎಂಬ ಸಾಮಾಜಿಕ ಸಂದೇಶವನ್ನೂ ನೀಡುತ್ತದೆ. ಯಾಮಿ ಗೌತಮ್ ಅವರ ವೃತ್ತಿಜೀವನದಲ್ಲಿ ಅತ್ಯಂತ ಪ್ರಭಾವಶಾಲಿ ಪಾತ್ರಗಳಲ್ಲಿ ಹಕ್ ಚಿತ್ರದ ವಕೀಲೆಯ ಪಾತ್ರವೂ ಒಂದಾಗಿ ಗುರುತಿಸಿಕೊಂಡಿದೆ.
ಧುರಂಧರ್ ಬಗ್ಗೆ
ಧುರಂಧರ್ ಇದೊಂದು ಸ್ಪೈ-ಥ್ರಿಲ್ಲರ್ ಸಿನಿಮಾವಾಗಿದ್ದು, ಪಾಕಿಸ್ತಾನದಲ್ಲಿ ಭಾರತೀಯ ಗೂಢಚರ ಹೇಗೆ ಕೆಲಸ ಮಾಡುತ್ತಾನೆ ಎನ್ನುವುದೇ ಈ ಸಿನಿಮಾದ ಕಥಾ ವಸ್ತುವಾಗಿದೆ. ಈ ಸಿನಿಮಾದ ಮೊದಲ ಭಾಗವು 2025 ರ ಡಿಸೆಂಬರ್ನಲ್ಲಿ ತೆರೆಕಂಡು ಸುಮಾರು 1,000 ಕೋಟಿ ಕಲೆಕ್ಷನ್ ಮಾಡಿತ್ತು. ಈಗ ಈ ಸಿನಿಮಾದ ಎರಡನೆ ಭಾಗ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಅಕ್ಷನ್ ಖನ್ನಾ,ಆರ್.ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್ತ್, ಸಾರಾ ಅರ್ಜುನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಉರಿ ಖ್ಯಾತಿಯ ಆದಿತ್ಯ ಧರ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ,(ಏಜನ್ಸೀಸ್).