ಮನೆಯಲ್ಲಿ ಹಕ್ಕಿಗಳು ಗೂಡು ಕಟ್ಟಿ ಮೊಟ್ಟೆಯಿಟ್ಟರೆ ಅದರಿಂದ ವಿಶೇಷ ಪ್ರಯೋಜನಗಳಿದ್ದು, ಹಕ್ಕಿಗಳು ವಾಸಿಸುವ ಜಾಗದಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಆದಾಗ್ಯೂ, ಕೆಲವು ನಿರ್ದಿಷ್ಟ ಪಕ್ಷಿಗಳ ಉಪಸ್ಥಿತಿಯನ್ನು ಜ್ಯೋತಿಷ್ಯದಲ್ಲಿ ಅಶುಭ ಎಂದು ಪರಿಗಣಿಸಲಾಗುತ್ತದೆ. ಶಕುನ ಶಾಸ್ತ್ರದ ಪ್ರಕಾರ, ಮನೆಯೊಳಗೆ ಕಾಡುಕೋಳಿ ಅಥವಾ ಬಟೇರ್ ಹಕ್ಕಿಯ ಮೊಟ್ಟೆ ಬಿದ್ದರೆ, ಆ ಕುಟುಂಬದ ಆರ್ಥಿಕ ಪ್ರಗತಿ ಹಾಗೂ ಅದೃಷ್ಟವು ದುಪ್ಪಟ್ಟಾಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ, ಅಂತಹ ಮನೆಯಲ್ಲಿ ಸದಾ ಪಾಸಿಟಿವ್ ಶಕ್ತಿ ವೃದ್ಧಿಸುವುದರ ಜೊತೆಗೆ ನೆಮ್ಮದಿಯ ವಾತಾವರಣ ಇರಲಿದ್ದು, ಸಂಪತ್ತಿನ ಕೊರತೆ ಎದುರಾಗುವುದಿಲ್ಲ ಎನ್ನಲಾಗುತ್ತದೆ.