ವೈರಲ್ ಆಗ್ತಿರೋ ಬಿಕಿನಿ ವಿಡಿಯೋ ಬಗ್ಗೆ ಕೊನೆಗೂ ಸ್ಪಷ್ಟನೆ ನೀಡಿದ ರುಕ್ಮಿಣಿ ವಸಂತ್! ಎಚ್ಚರಿಕೆ ಸಂದೇಶ ರವಾನೆ... Rukmini Vasanth

ವೈರಲ್ ಆಗ್ತಿರೋ ಬಿಕಿನಿ ವಿಡಿಯೋ ಬಗ್ಗೆ ಕೊನೆಗೂ ಸ್ಪಷ್ಟನೆ ನೀಡಿದ ರುಕ್ಮಿಣಿ ವಸಂತ್! ಎಚ್ಚರಿಕೆ ಸಂದೇಶ ರವಾನೆ... Rukmini Vasanth
ವೈರಲ್ ಆಗ್ತಿರೋ ಬಿಕಿನಿ ವಿಡಿಯೋ ಬಗ್ಗೆ ಕೊನೆಗೂ ಸ್ಪಷ್ಟನೆ ನೀಡಿದ ರುಕ್ಮಿಣಿ ವಸಂತ್! ಎಚ್ಚರಿಕೆ ಸಂದೇಶ ರವಾನೆ... Rukmini Vasanth
Published on

ಪ್ರಮುಖ ಮುಖ್ಯಾಂಶಗಳು

  • ಚಿತ್ರರಂಗದ ಸ್ಟಾರ್ ನಟಿಯರು ಈ ಎಐ ಡೀಪ್‌ಫೇಕ್ ತಂತ್ರಜ್ಞಾನದಿಂದಾಗಿ ತೀವ್ರ ಸೈಬರ್ ಕಿರುಕುಳ ಎದುರಿಸುವಂತಾಗಿದೆ
  • ರಶ್ಮಿಕಾ ಮಂದಣ್ಣ, ಆಲಿಯಾ ಭಟ್, ಕತ್ರಿನಾ ಕೈಫ್ ಅವರಂತಹ ಖ್ಯಾತ ನಟಿಯರು ನಕಲಿ ವಿಡಿಯೋಗಳ ಹಾವಳಿ ಎದುರಿಸಿದ್ದಾರೆ
  • ಇದೀಗ ಸ್ಯಾಂಡಲ್‌ವುಡ್‌ನ 'ಹೋಮ್ಲಿ ಬ್ಯೂಟಿ' ರುಕ್ಮಿಣಿ ವಸಂತ್​ ಅವರಿಗೂ ನಕಲಿ ವಿಡಿಯೋ ಹಾವಳಿ ತಟ್ಟಿದೆ
  • ನಕಲಿ ವಿಡಿಯೋ, ಫೋಟೋಗಳ ವೈರಲ್​ ಬೆನ್ನಲ್ಲೇ ನಟಿ ರುಕ್ಮಿಣಿ ಸ್ಪಷ್ಟನೆ ನೀಡಿ ಖಡಕ್​ ಎಚ್ಚರಿಕೆ ನೀಡಿದ್ದಾರೆ
Rukmini Vasanth : ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ತಮ್ಮ ಹೆಸರಿನ ನಕಲಿ ಬಿಕಿನಿ ವಿಡಿಯೋ ಹಾಗೂ ಫೋಟೋಗಳ ವಿವಾದದ ಕುರಿತು ಸ್ಯಾಂಡಲ್‌ವುಡ್ ಸ್ಟಾರ್ ನಟಿ ರುಕ್ಮಿಣಿ ವಸಂತ್ ಕೊನೆಗೂ ಮೌನ ಮುರಿದಿದ್ದು, ಕಿಡಿಗೇಡಿಗಳ ವಿರುದ್ಧ ಕಾನೂನು ಸಮರ ಸಾರಿದ್ದಾರೆ.
ಎಐ (AI) ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಸೃಷ್ಟಿಸಲಾಗಿರುವ ಈ ಕೃತಕ ಚಿತ್ರಗಳು ಮತ್ತು ವಿಡಿಯೋಗಳು ಸಂಪೂರ್ಣ ಸುಳ್ಳು ಹಾಗೂ ಕಪೋಲಕಲ್ಪಿತ ಎಂದು ಸ್ಪಷ್ಟಪಡಿಸಿರುವ ರುಕ್ಮಿಣಿ, ಇದು ತಮ್ಮ ವೈಯಕ್ತಿಕ ಗೌಪ್ಯತೆಗೆ ಧಕ್ಕೆ ತರುವ ಗಂಭೀರ ಯತ್ನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ತರಹದ ತಿರುಚಿದ ವಿಷಯಗಳನ್ನು ಹರಡುವವರ ವಿರುದ್ಧ ಈಗಾಗಲೇ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿರುವ ನಟಿ, ಸಾರ್ವಜನಿಕರು ಇಂತಹ ನಕಲಿ ಪೋಸ್ಟ್‌ಗಳನ್ನು ಶೇರ್ ಮಾಡದಂತೆ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಅಂದಹಾಗೆ, ಪ್ರಸ್ತುತ ಕೃತಕ ಬುದ್ಧಿಮತ್ತೆ (AI) ಯುಗದಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಯಾವುದು ನಿಜ, ಯಾವುದು ಸುಳ್ಳು ಎಂದು ಪತ್ತೆ ಹಚ್ಚುವುದೇ ಒಂದು ದೊಡ್ಡ ಸವಾಲು. ಪ್ರಮುಖವಾಗಿ ಚಿತ್ರರಂಗದ ಸ್ಟಾರ್ ನಟಿಯರು ಈ ಎಐ ಡೀಪ್‌ಫೇಕ್ ತಂತ್ರಜ್ಞಾನದಿಂದಾಗಿ ತೀವ್ರ ಸೈಬರ್ ಕಿರುಕುಳ ಎದುರಿಸುವಂತಾಗಿದೆ. ಈಗಾಗಲೇ ರಶ್ಮಿಕಾ ಮಂದಣ್ಣ, ಆಲಿಯಾ ಭಟ್, ಕತ್ರಿನಾ ಕೈಫ್ ಅವರಂತಹ ಖ್ಯಾತ ನಟಿಯರು ಈ ನಕಲಿ ವಿಡಿಯೋಗಳ ಹಾವಳಿಯನ್ನು ಎದುರಿಸಿದ್ದಾರೆ. ಇದೀಗ ಸ್ಯಾಂಡಲ್‌ವುಡ್‌ನ 'ಹೋಮ್ಲಿ ಬ್ಯೂಟಿ' ರುಕ್ಮಿಣಿ ವಸಂತ್ ಅವರ ಹೆಸರಲ್ಲೂ ಕಿಡಿಗೇಡಿಗಳು ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಿರುವ ನಕಲಿ ಬಿಕಿನಿ ವಿಡಿಯೋ ಹಾಗೂ ಫೋಟೋಗಳು ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಕನ್ನಡದ ಹೆಮ್ಮೆಯ 'ಕಾಂತಾರಾ ಚಾಪ್ಟರ್​ 1' ಚಿತ್ರದ ಮೂಲಕ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಕ್ರೇಜಿ ಹೀರೋಯಿನ್ ಆಗಿ ಹೊರಹೊಮ್ಮಿದವರು ನಟಿ ರುಕ್ಮಿಣಿ ವಸಂತ್. ತಮ್ಮ ಹೋಮ್ಲಿ ಲುಕ್ ಹಾಗೂ ನೈಜ ಅಭಿನಯದ ಮೂಲಕವೇ ಕೇವಲ ಕರ್ನಾಟಕ ಮಾತ್ರವಲ್ಲದೆ, ಇಡೀ ಭಾರತದ ಸಿನಿಪ್ರೇಕ್ಷಕರ ಹೃದಯ ಗೆದ್ದಿರುವ ಈ ಪ್ರತಿಭೆಗೆ ಇತ್ತೀಚೆಗಷ್ಟೇ ಗ್ಲೋಬಲ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಮತ್ತು ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಬಿಗ್ ಬಜೆಟ್ ಸಿನಿಮಾ 'ಡ್ರ್ಯಾಗನ್' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಬಂಪರ್ ಆಫರ್ ಸಿಕ್ಕಿದೆ.
ವೃತ್ತಿ ಜೀವನದ ಯಶಸ್ಸಿನ ನಡುವೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಅವರು ಬಿಕಿನಿ ತೊಟ್ಟಿದ್ದಾರೆ ಎನ್ನಲಾದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇಂಟರ್ನೆಟ್‌ನಲ್ಲಿ ತಲ್ಲಣ ಮೂಡಿಸಿದೆ. ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೂ ಇದುವರೆಗೂ ಯಾವುದೇ ಸಿನಿಮಾಗಳಲ್ಲಾಗಲಿ ಅಥವಾ ಫೋಟೋಶೂಟ್‌ಗಳಲ್ಲಾಗಲಿ ಗ್ಲಾಮರ್ ಪ್ರದರ್ಶನಕ್ಕಾಗಲಿ, ಸ್ಕಿನ್ ಶೋಗಾಗಲಿ ಒಪ್ಪದ ಮತ್ತು ಸದಾ ಸಾಂಪ್ರದಾಯಿಕ ಹಾಗೂ ಗೌರವಾನ್ವಿತ ಲುಕ್‌ನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ರುಕ್ಮಿಣಿ ವಸಂತ್, ಇದ್ದಕ್ಕಿದ್ದಂತೆ ಇಷ್ಟೊಂದು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರುವುದು ಪ್ರೇಕ್ಷಕರಲ್ಲಿ ಹಾಗೂ ಅವರ ಅಭಿಮಾನಿ ಬಳಗದಲ್ಲಿ ತೀವ್ರ ಆಶ್ಚರ್ಯ ಹಾಗೂ ಅನುಮಾನಗಳನ್ನು ಹುಟ್ಟುಹಾಕಿತ್ತು.
ಈ ವಿವಾದಾತ್ಮಕ ವಿಡಿಯೋದ ಸತ್ಯಾಸತ್ಯತೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿತ್ತು. ಬಹುತೇಕ ನೆಟ್ಟಿಗರು ಇದನ್ನು ಶೇ. 100 ರಷ್ಟು 'AI' ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ಡೀಪ್‌ಫೇಕ್ ವಿಡಿಯೋ ಎಂದೇ ತಳ್ಳಿಹಾಕಿದರು. ಬೇರೊಬ್ಬರ ದೇಹಕ್ಕೆ ರುಕ್ಮಿಣಿ ಅವರ ಮುಖವನ್ನು ಅಂಟಿಸಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂಬುದು ಅವರ ವಾದವಾಗಿತ್ತು. ಆದರೆ, ಕೆಲವರು ಈ ವಿಡಿಯೋ ನಿಜವಿರಬಹುದು ಎಂದು ವಾದಿಸಿದರು. ಮುಂಬರುವ ದೊಡ್ಡ ಕನ್ನಡ ಪ್ರಾಜೆಕ್ಟ್ ಅಥವಾ ಬಾಲಿವುಡ್ ಚಿತ್ರದ ಕಥೆಯ ಬೇಡಿಕೆಗೆ ತಕ್ಕಂತೆ ಅವರು ಇಮೇಜ್ ಮೇಕ್ಓವರ್ ಮಾಡಿಕೊಂಡಿದ್ದು, ಶೂಟಿಂಗ್ ಲೊಕೇಶನ್‌ನಿಂದ ಈ ದೃಶ್ಯಗಳು ಸೋರಿಕೆಯಾಗಿವೆ ಎಂದು ಕೆಲವರು ವಾದಿಸಿದರು. ಆದರೆ, ಅಂತಿಮವಾಗಿ ರುಕ್ಮಿಣಿ ಅವರು ಪ್ರತಿಕ್ರಿಯೆ ನೀಡುವ ಮೂಲಕ ಊಹಾಪೋಹಗಳಿಗೆ ಪೂರ್ಣ ವಿರಾ ಹಾಕಿದ್ದಾರೆ.
ರುಕ್ಮಿಣಿ ಹೇಳಿರುವಂತೆ ಸದ್ಯ ಹರಿದಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳೆಲ್ಲ ಎಐ ಮೂಲಕ ಸೃಷ್ಟಿಸಲಾದ ನಕಲಿ ವಿಡಿಯೋ ಹಾಗೂ ಫೋಟೋಗಳಾಗಿವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಇಂತಹ ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಖಡಕ್​ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net