ಈ 3 ರಾಶಿಯ ಮಹಿಳೆಯರು ಎಷ್ಟೇ ವಯಸ್ಸಾದ್ರೂ ಚಿಕ್ಕ ಮಕ್ಕಳಂತೆಯೇ ವರ್ತಿಸುತ್ತಾರಂತೆ! ನಿಮ್ದೂ ಇದೇ ರಾಶಿನಾ? Zodiac Signs

Zodiac Signs
Published on

Zodiac Signs : ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಜನ್ಮ ರಾಶಿ ಮತ್ತು ಜನ್ಮ ನಕ್ಷತ್ರವು ಆತನ ಭವಿಷ್ಯದ ಜೀವನ, ಆರ್ಥಿಕ ಪರಿಸ್ಥಿತಿ, ಪ್ರೇಮ ಜೀವನ, ದಾಂಪತ್ಯ ಜೀವನ, ವಿಶೇಷ ಪ್ರತಿಭೆಗಳು ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ವ್ಯಕ್ತಿಯ ವ್ಯಕ್ತಿತ್ವಕ್ಕೆ ಆತನ ರಾಶಿ ಅಥವಾ ಜಾತಕ ಕಾರಣ ಎಂಬ ಅಭಿಪ್ರಾಯವೂ ಜನರಲ್ಲಿ ಇದೆ.

ಅಂದಹಾಗೆ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಮಹಿಳೆಯರು ಎಷ್ಟೇ ವಯಸ್ಸಾದರೂ ಚಿಕ್ಕ ಮಕ್ಕಳಂತೆಯೇ ಇರುತ್ತಾರೆ. ಅಂದರೆ, ಅವರ ವರ್ತನೆ ಮಕ್ಕಳಂತೆಯೇ ಇರುತ್ತದೆ. ತಮ್ಮ ವೃತ್ತಿ ವಿಚಾರದಲ್ಲಿ ಮತ್ತು ಸಾಮಾಜಿಕ ಜೀವನದಲ್ಲಿ ತುಂಬಾ ಜವಾಬ್ದಾರಿಯುತರಾಗಿ ಇರುತ್ತಾರೆ. ಆದರೆ, ಸ್ವಭಾವತಃ ಹಾಸ್ಯಮಯ ವ್ಯಕ್ತಿಯಾಗಿರುತ್ತಾರೆ. ತಮ್ಮ ಪ್ರೀತಿ ಪಾತ್ರರ ಜತೆ ಮಕ್ಕಳಂತೆಯೇ ವರ್ತಿಸುತ್ತಾರೆ.

ಹಾಗಾದರೆ, ಯಾವ ರಾಶಿಯವರು ಸ್ವಾಭಾವಿಕವಾಗಿಯೇ ತಮಾಷೆಯುಳ್ಳವರಾಗಿರುತ್ತಾರೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಮೇಷ ರಾಶಿ

Aries Zodiac Signs

ರಾಶಿಚಕ್ರದ ಮೊದಲ ಚಿಹ್ನೆಯಾದ ಮೇಷ ರಾಶಿಯವರು ಮಗುವಿನಂತಹ ಆತ್ಮವನ್ನು ಹೊಂದಿರುತ್ತಾರೆ. ವಿಶೇಷವಾಗಿ ಈ ಚಿಹ್ನೆಯಡಿಯಲ್ಲಿ ಜನಿಸಿದ ಮಹಿಳೆಯರು ಎಷ್ಟೇ ವಯಸ್ಸಾದರೂ ಹೃದಯದಲ್ಲಿ ಮಕ್ಕಳಂತೆಯೇ ಇರುತ್ತಾರೆ. ಹಾಗೆಂದ ಮಾತ್ರಕ್ಕೆ ಅವರು ಬೇಜವಾಬ್ದಾರಿ ವ್ಯಕ್ತಿಗಳು ಎಂದರ್ಥವಲ್ಲ. ಅವರು ತಮ್ಮ ಎಲ್ಲಾ ಕರ್ತವ್ಯಗಳನ್ನು ಚೆನ್ನಾಗಿ ನಿರ್ವಹಿಸುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಆದರೆ, ಅವರು ತಮ್ಮ ವೈಯಕ್ತಿಕ ಸಮಯವನ್ನು ಹಗುರವಾಗಿ, ತಮಾಷೆಯಾಗಿ ಮತ್ತು ಸರಳ ರೀತಿಯಲ್ಲಿ ಕಳೆಯುತ್ತಾರೆ.

ವೃಷಭ ರಾಶಿ

Taurus Zodiac Signs

ವೃಷಭ ರಾಶಿಯವರು ಹುಟ್ಟಿನಿಂದಲೇ ಭೂಮಿಯೊಂದಿಗೆ ವಿಶೇಷ ಸಂಬಂಧವನ್ನು ಹೊಂದಿರುತ್ತಾರೆ. ಅವರು ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಸತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅವರು ಇತರರಿಗೆ ತುಂಬಾ ಬಲಶಾಲಿಗಳಾಗಿ ಕಂಡುಬಂದರು ವಾಸ್ತವವಾಗಿ ತುಂಬಾ ಮೃದು ಹೃದಯಿಗಳು. ಯಾವುದೇ ಕಠಿಣ ಪರಿಸ್ಥಿತಿಯನ್ನು ಆಕ್ರಮಣದಿಂದ ನಿವಾರಿಸುವ ವ್ಯಕ್ತಿತ್ವ ಅವರಲ್ಲಿದ್ದರೂ, ಅವರು ಮೊದಲಿಗೆ ಮಗುವಿನಂತೆ ಕಣ್ಣೀರಿಡುತ್ತಾರೆ. ಅಲ್ಲದೆ, ಅವರ ಸ್ವಭಾವವು ತಮಾಷೆಯನ್ನೂ ಒಳಗೊಂಡಿದೆ.

ಮಿಥುನ ರಾಶಿ

ಮಿಥುನ ರಾಶಿಚಕ್ರದ ಅಡಿಯಲ್ಲಿ ಜನಿಸಿದ ಜನರು ತಮ್ಮ ಕರುಣಾಳು ಸ್ವಭಾವ ಮತ್ತು ನಿಗೂಢ ಸ್ವಭಾವಕ್ಕೆ ಹೆಸರುವಾಸಿಯಾಗಿರುತ್ತಾರೆ. ಮಿಥುನ ರಾಶಿಯವರು ಹೊಸ ಅನುಭವಗಳನ್ನು ಇಷ್ಟಪಡುತ್ತಾರೆ ಮತ್ತು ಜ್ಞಾನದ ದಾಹವನ್ನು ಹೊಂದಿರುತ್ತಾರೆ. ಅವರ ಮಗುವಿನಂತಹ ಸ್ವಭಾವವು ಅವರ ತೀವ್ರ ಕುತೂಹಲದ ಮೂಲಕ ಗೊತ್ತಾಗುತ್ತದೆ. ಅವರು ಇತರರಿಗೆ ಒಂಟಿಯಾಗಿ ಕಂಡುಬಂದರೂ, ಅವರು ಸ್ವಾಭಾವಿಕವಾಗಿ ಮಗುವಿನಂತಹವರು ಮತ್ತು ಎಲ್ಲರೊಂದಿಗೆ ಇರಲು ಬಯಸುತ್ತಾರೆ, ಆದರೆ, ಹೆಚ್ಚಿನ ಸಮಯ ಅವರು ತಮ್ಮ ನಿಜವಾದ ಸ್ವಭಾವವನ್ನು ಮರೆಮಾಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net