ನಾನು ಶೇ. 100 ರಷ್ಟು... ಮೊದಲ ಬಾರಿ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಆಡಿದ ವಿರಾಟ್​ ಕೊಹ್ಲಿ ಭಾವುಕ ಮಾತು! Virat kohli

ನಾನು ಶೇ. 100 ರಷ್ಟು... ಮೊದಲ ಬಾರಿ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಆಡಿದ ವಿರಾಟ್​ ಕೊಹ್ಲಿ ಭಾವುಕ ಮಾತು! Virat kohli
ನಾನು ಶೇ. 100 ರಷ್ಟು... ಮೊದಲ ಬಾರಿ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಆಡಿದ ವಿರಾಟ್​ ಕೊಹ್ಲಿ ಭಾವುಕ ಮಾತು! Virat kohli
Published on

ಪ್ರಮುಖ ಮುಖ್ಯಾಂಶಗಳು

  • ಆರ್​ಸಿಬಿ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ
  • ನಿನ್ನೆ ಲಖನೌ ಸೂಪರ್​ ಜೈಂಟ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಕೊಹ್ಲಿ
  • ನಿನ್ನೆ ಮೊಟ್ಟ ಮೊದಲ ಬಾರಿಗೆ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಆಡಿದ ವಿರಾಟ್​ ಕೊಹ್ಲಿ
Virat kohli : ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡದ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಬುಧವಾರ (ಏಪ್ರಿಲ್​ 15) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ನೀಡಿದ 147 ರನ್​ಗಳ ಗುರಿಯನ್ನು ಬೆನ್ನಟ್ಟಿದ ಆರ್​ಬಿಸಿ 15.1 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 149 ರನ್​ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಈ ಪಂದ್ಯದಲ್ಲಿ ಕೊಹ್ಲಿ 34 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 49 ರನ್ ಗಳಿಸಿದರು. ಈ ಮೂಲಕ ಮತ್ತೊಮ್ಮೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೇ ಸಂದರ್ಭದಲ್ಲಿ ತಮ್ಮ ಪ್ರದರ್ಶನದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಕೊಹ್ಲಿ, ನಾನು ಶೇ. 100 ರಷ್ಟು ಫಿಟ್ ಆಗಿಲ್ಲ ಎಂದು ಹೇಳಿದರು.
ನಿನ್ನೆಯ ಪಂದ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕೊಹ್ಲಿ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದರು. ಆರೆಂಜ್ ಕ್ಯಾಪ್ ಪಡೆದ ನಂತರ ಮಾತನಾಡಿದ ಕೊಹ್ಲಿ, ತಮ್ಮ ಮೊಣಕಾಲಿಗೆ ಗಾಯವಾಗಿದೆ ಎಂದು ಹೇಳಿದರು. ಕಳೆದ ಕೆಲವು ದಿನಗಳಿಂದ ಗಾಯದಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದರು. ಕಳೆದ ಪಂದ್ಯಕ್ಕಿಂತ ಈಗ ಸ್ವಲ್ಪ ಸುಧಾರಿಸಿಕೊಂಡಿದ್ದೇನೆ. ಆದರೆ, ನಾನಿನ್ನೂ ಶೇ. 100 ರಷ್ಟು ಫಿಟ್ ಆಗಿಲ್ಲ. ಕಳೆದ ಪಂದ್ಯದಲ್ಲಿ ನನಗೆ ಮೊಣಕಾಲು ನೋವಿನಿಂದ ತೊಂದರೆಯಾಗಿತ್ತು. ಅಲ್ಲದೆ, ಕಳೆದ ನಾಲ್ಕೈದು ದಿನಗಳಿಂದ ನಾನು ಬಳಲುತ್ತಿದ್ದೇನೆ. ಇದೀಗ ನನ್ನ ಅತ್ಯುತ್ತಮ ಫಾರ್ಮ್‌ಗೆ ಮರಳಿದ್ದು, ಇಂದು ಚೆನ್ನಾಗಿ ಬ್ಯಾಟಿಂಗ್​ ಪ್ರಾರಂಭಿಸಿದೆ. ಇದರಿಂದ ನನಗೆ ಖುಷಿಯಾಗಿದೆ ಎಂದು ಕೊಹ್ಲಿ ಹೇಳಿದರು.
ಪಂದ್ಯವನ್ನು ಮುಗಿಸಲು ಸಾಧ್ಯವಾಗದಿದ್ದಕ್ಕೆ ವಿರಾಟ್​ ಕೊಹ್ಲಿ ಸ್ವಲ್ಪ ನಿರಾಶೆ ವ್ಯಕ್ತಪಡಿಸಿದರು. ಕೆಲವೊಮ್ಮೆ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು. ಪಿಚ್ ಬಗ್ಗೆ ಮಾತನಾಡುತ್ತಾ, ಚಿನ್ನಸ್ವಾಮಿಯಲ್ಲಿನ ಮಾಮೂಲಿ ಪಿಚ್‌ಗಿಂತ ಈ ಪಿಚ್ ತುಂಬಾ ನಿಧಾನವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ತುಂಬಾ ಬಿಸಿಲು ಇದೆ. ಇದರಿಂದಾಗಿ ಪಿಚ್ ಒಣಗಿದ್ದು, ವಿಕೆಟ್ ನಿಧಾನವಾಗಿದೆ. ಈ ವಿಷಯವನ್ನು ನಾನು ಮೊದಲೇ ಅರ್ಥಮಾಡಿಕೊಂಡಿದ್ದೆ. ಅದಕ್ಕಾಗಿಯೇ ನಾನು ಪವರ್ ಪ್ಲೇನಲ್ಲಿ ಆಕ್ರಮಣಕಾರಿಯಾಗಿ ಆಟವಾಡಿ ಎದುರಾಳಿಯಿಂದ ಪಂದ್ಯವನ್ನು ಕಸಿದುಕೊಳ್ಳಲು ಬಯಸಿದೆ. ಹಾಗೆ ಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ ಎನ್ನುವ ಮೂಲಕ ಕೊಹ್ಲಿ ತಮ್ಮ ಬ್ಯಾಟಿಂಗ್ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಮಿಚೆಲ್ ಮಾರ್ಷ್ (40 ರನ್, 32 ಎಸೆತ, 3 ಬೌಂಡರಿ, 2 ಸಿಕ್ಸರ್), ಆಯುಷ್ ಬಡೋನಿ (38 ರನ್​, 24 ಎಸೆತ, 4 ಬೌಂಡರಿ, 1 ಸಿಕ್ಸರ್), ಮತ್ತು ಮುಕುಲ್ ಚೌಧರಿ (39 ರನ್​, 28 ಎಸೆತ, 3 ಬೌಂಡರಿ, 2 ಸಿಕ್ಸರ್) ಅವರು ಉಪಯುಕ್ತ ಪ್ರದರ್ಶನ ನೀಡಿದರು. ಆರ್‌ಸಿಬಿ ಬೌಲರ್‌ಗಳಲ್ಲಿ ರಸಿಕ್ ಸಲಾಮ್ದಾರ್​ನಾಲ್ಕು ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ ಮೂರು, ಕೃನಾಲ್ ಪಾಂಡ್ಯ ಎರಡು ವಿಕೆಟ್ ಮತ್ತು ಜೋಶ್ ಹ್ಯಾಜಲ್‌ವುಡ್ ಒಂದು ವಿಕೆಟ್ ಪಡೆದರು.
147 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ 15.1 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಆರ್​ಸಿಬಿ ಪರ ವಿರಾಟ್ ಕೊಹ್ಲಿ (49 ರನ್​, 34 ಎಸೆತ, 6 ಬೌಂಡರಿ, 1 ಸಿಕ್ಸರ್) ಸ್ವಲ್ಪದರಲ್ಲೇ ಅರ್ಧಶತಕ ವಂಚಿತರಾದರು. ರಜತ್ ಪಾಟಿದಾರ್ (27 ರನ್​, 13 ಎಸೆತ, 1 ಬೌಂಡರಿ, 3 ಸಿಕ್ಸರ್) ಮತ್ತು ಜಿತೇಶ್ ಶರ್ಮಾ (23 ರನ್​, 9 ಎಸೆತ, 2 ಬೌಂಡರಿ, 2 ಸಿಕ್ಸರ್) ಅದ್ಭುತವಾಗಿ ಮಿಂಚಿದರು. ಲಖನೌ ಪರ ಪ್ರಿನ್ಸ್ ಯಾದವ್ ಮೂರು ವಿಕೆಟ್ ಮತ್ತು ಆವೇಶ್ ಖಾನ್ ಎರಡು ವಿಕೆಟ್ ಪಡೆದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net